Fact Check: ಭಾರತ-ಪಾಕಿಸ್ತಾನ ವಿಭಜನೆ ಮತ್ತು ಬಾಂಗ್ಲಾದೇಶದ ವಿಮೋಚನಾ ಯುದ್ಧಕ್ಕೆ ಸಂಬಂಧಿಸಿದ ಅನೇಕ ಪೋಟೋಗಳು ತಪ್ಪು ಮಾಹಿತಿಗಳೊಂದಿಗೆ ವೈರಲ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಪ್ಪುಬಿಳುಪಿನ ಅನೇಕ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದ್ದು ಇವುಗಳಲ್ಲಿ ಅನೇಕರು ಸತ್ತು ಮಲಗಿದ್ದರೆ, ಇನ್ನೂ ಕೆಲವು ಚಿತ್ರಗಳಲ್ಲಿ ಜನರು ವಲಸೆ ಹೋಗುತ್ತಿದ್ದಾರೆ,  ಮತ್ತೊಂದು ಪೋಟೋದಲ್ಲಿ ಮಹಿಳೆಯ ಕೈಗಳನ್ನು ಕಟ್ಟಿಹಾಕಲಾಗಿದೆ, ಬಾಯಿಗೆ ಬಟ್ಟೆಯನ್ನು ಕಟ್ಟಲಾಗಿದೆ ಮತ್ತು ಅರೆನಗ್ನಾವಸ್ಥೆಯಲ್ಲಿ ಮಹಿಳೆ ಇರುವುದನ್ನು ಕಾಣಬಹುದು. ಈ ಪೋಟೋವನ್ನು “ಇಸ್ಲಾಮಿಕ್ ಜಿಹಾದಿಗಳು ತಮ್ಮ ಹೆಣ್ಣುಮಕ್ಕಳನ್ನು ಕಟ್ಟಿಹಾಕಿ ಬೀದಿಗಳಲ್ಲಿ ಬಲಾತ್ಕಾರ ಮಾಡಿದ್ದು ಹೀಗೆ.” ಎಂದು ಬರೆದು ಹಂಚಿಕೊಳ್ಳಲಾಗುತ್ತಿದೆ. ಹಾಗೂ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಂದರ್ಭದ ಹಲವು ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.   ಫ್ಯಾಕ್ಟ್‌…

Read More

Fact Check: ಪಾಕಿಸ್ತಾನದಲ್ಲಿ ಕೇವಲ 20 ಹಿಂದೂ ದೇವಾಲಯಗಳು ಉಳಿದಿವೆ ಎಂಬುದು ಸುಳ್ಳು

ಭಾರತದಲ್ಲಿ ಹಿಂದು ಮುಸ್ಲಿಂ ಚರ್ಚೆ ಎದುರಾದಾಗಲೆಲ್ಲ ಪಾಕಿಸ್ತಾನವನ್ನು ಎಳೆದು ತರುವುದು ಸಾಮಾನ್ಯ ಸಂಗತಿಯಾಗಿದೆ. ದೇಶದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ಪಾಕಿಸ್ತಾನದ ಜೊತೆಗೆ ಹೋಲಿಕೆ ಮಾಡಿಕೊಂಡು ಹೆಮ್ಮೆ ಪಡುವುದು ಭಾರತೀಯರ ಅಭ್ಯಾಸಗಳಲ್ಲೊಂದು. ಅಭಿವೃದ್ಧಿಯ ವಿಷಯದಲ್ಲಿಯೂ ಅಷ್ಟೇ ಪಾಕಿಸ್ತಾನಕ್ಕಿಂತ ನಾವು ಮುಂದೆ ಇದ್ದೇವೆ ಎಂದು ಹೆಮ್ಮೆ ಪಡುವುದರ ಜೊತೆಗೆ ತಮಗೆ ಆಗದವರನ್ನು ಪಾಕಿಸ್ತಾನಿ ಎನ್ನುವುದು ಅಥವಾ ಪಾಕಿಸ್ತಾನಕ್ಕೆ ಕಳಿಸಬೇಕು ಎಂದು ಬಳಸುತ್ತಿರುತ್ತೇವೆ. ಇಷ್ಟಲ್ಲದೇ ಈಗ ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ದ ಸೇಡು ತಿರಿಸಿಕೊಳ್ಳಲು ಕೆಲವು ಬಲಪಂಥೀಯ ಮೂಲಭೂತವಾದಿಗಳು…

Read More
ಹನುಮಾನ್ ಚಾಲಿಸ

ಇಂಡಿಯಾ ಪಾಕಿಸ್ತಾನ ಪಂದ್ಯದ ವೇಳೆ 1.5ಲಕ್ಷ ಜನ ಹನುಮಾನ್ ಚಾಲಿಸ ಹಾಡಿದ್ದಾರೆ ಎಂಬುದು ಸುಳ್ಳು

ವಿಶ್ವಕಪ್ ಮುಗಿದರೂ ಅದಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಮಾತ್ರ ನಿಂತಿಲ್ಲ. ಕ್ರಿಕೆಟ್ ಅಭಿಮಾನಿಗಳು ಕೆಲವರು ಸುಳ್ಳು ಸುದ್ದಿ  ಹಬ್ಬಿಸುತ್ತಿದ್ದರೆ ಇನ್ನೂ ಕೆಲವು ಬಲಪಂಥೀಯರು ಕ್ರಿಕೆಟ್‌ಗೂ ಧರ್ಮ, ರಾಜಕಾರಣ ಬೆರೆಸಿ ಸುಳ್ಳು ಆರೋಪಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಕೆಲವು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಸತ್ಯಶೋಧನೆ ನಡೆಸಿದ್ದು ಅವುಗಳನ್ನು ನೀವು ಇಲ್ಲಿ ನೋಡಬಹುದು. ಈಗ ಇಂಡಿಯಾ-ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದಂತೆ ಸುದ್ದಿಯೊಂದು ಹರಿದಾಡುತ್ತಿದ್ದು “ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯಾ ಪಾಕಿಸ್ತಾನ ವಿಶ್ವಕಪ್‌ ಪಂದ್ಯದ ಸಂದರ್ಭದಲ್ಲಿ…

Read More