Fact Check| ಸೌದಿ ಏರ್‌ಲೈನ್ಸ್‌ನಲ್ಲಿ ನಮಾಝ್ ಮಾಡಿದ್ದಕ್ಕೆ ಇಸ್ಲಾಮೋಫೋಬಿಕ್ ತಿರುವು ನೀಡಿ ವಿಡಿಯೋ ಹಂಚಿಕೆ
ಮುಸ್ಲಿಮರ ಧಾರ್ಮಿಕ ಆಚರಣೆಯ ವಿಷಯಗಳಲ್ಲಿ ಹಿಜಾಬ್‌ನ ಬಳಿಕ ಅತಿ ಹೆಚ್ಚು ಇಸ್ಲಾಮೋಫೋಬಿಕ್ ವರದಿಗಳು ಪ್ರಕಟವಾಗಿರುವುದು ನಮಾಝ್ ಕುರಿತಾಗಿದೆ. ನಮಾಝ್‌ಗೆ ಸಂಬಂಧಿಸಿದ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದ್ದು, ಪ್ರಯಾಣಿಕನೋರ್ವ ವಿಮಾನದಲ್ಲಿ ನಮಾಝ್ ಮಾಡುವ ಮೂಲಕ ಇತರೆ ಪ್ರಯಾಣಿಕರಿಗೆ ಅಡಚಣೆಯುಂಟು ಮಾಡುತ್ತಿದ್ದಾನೆ ಎಂದು ವಿಡಿಯೋವೊಂದನ್ನು ಹರಿಬಿಡಲಾಗಿದೆ. ವಿಡಿಯೋದಲ್ಲೇನಿದೆ? ವ್ಯಕ್ತಿಯೊಬ್ಬ ವಿಮಾನದಲ್ಲಿ ನಮಾಝ್ ಮಾಡುತ್ತಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿದ್ದು ” ಇಲ್ಲಿಂದ ದಾಟಬೇಡಿ; ನಾನು ಅಲ್ಲಾಹನಲ್ಲಿ ಪ್ರಾರ್ಥಿಸಬೇಕಿದೆ” ಎಂದು ವ್ಯಂಗ್ಯಾತ್ಮಕ ಶೀರ್ಷಿಕೆ ನೀಡಲಾಗಿದೆ….