Fact Check | ಗೌತಮ್ ಅದಾನಿ ಹೂಡಿಕೆಯನ್ನು ಉತ್ತೇಜಿಸಿ ಪ್ರಚಾರ ಮಾಡಿದ್ದಾರೆ ಎಂಬ ವಿಡಿಯೋ ನಕಲಿ
“ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ ಹೂಡಿಕೆಯ ಅವಕಾಶವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಅದಾನಿ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ಜನರಿಗೆ ಪ್ರೇರಣೆಯನ್ನು ನೀಡುವ ದೃಷ್ಟಿಯಿಂದ ಅವರೇ ಪ್ರಚಾರವನ್ನು ಮಾಡುತ್ತಿದ್ದಾರೆ.” ಎಂದು ಗೌತಮ್ ಅದಾನಿ ಮಾತನಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕಾವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಅದಾನಿ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಧ್ವನಿ ಕೂಡ ಗೌತಮ್ ಅದಾನಿಗೆ ಹೋಲಿಕೆ ಆಗುತ್ತಿದೆ. ಹೀಗಾಗಿ ಹೂಡಿಕೆ ಕ್ಷೇತ್ರದಲ್ಲಿ ಆಸಕ್ತಿ ಇರುವ ಹಲವು ಮಂದಿಗೆ ಈ ವಿಡಿಯೋ ಅಚ್ಚರಿಯನ್ನು ಉಂಟು ಮಾಡಿದ್ದು,…