Fact Check | ಉತ್ತರಪ್ರದೇಶದಲ್ಲಿ ಮುಸ್ಲಿಂ ಯುವಕರು ಪೊಲೀಸ್ ಪರೇಡ್‌ನಲ್ಲಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿದ್ದಾರೆ ಎಂಬುದು ಸುಳ್ಳು
ಸಾಮಾಜಿಕ ಜಾಲತಾಣದಲ್ಲಿ “ಉತ್ತರಪ್ರದೇಶದ ಮುಸ್ಲಿಂ ಯುವಕರ ಗುಂಪು ಪೊಲೀಸ್ ಪರೇಡ್ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮಾರಕಸ್ತ್ರಗಳನ್ನು ಪ್ರದರ್ಶಿಸಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ಹಲವರನ್ನು ನಿಂದಿಸಿರುವುದು ಕೂಡ ಕಂಡು ಬಂದಿದೆ. ಇವರನ್ನು ಹತ್ತಿಕ್ಕಲು ಯೋಗಿ ಸರಕಾರ ಮತ್ತೊಂದು ದಿಟ್ಟ ಹೆಜ್ಜೆಯನ್ನು ಇಡಲಿದೆ ಎಂದು ಹಲವರು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಹಲವರು ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ಶೇರ್ ಮಾಡಲಾಗುತ್ತಿರುವ ವಿಡಿಯೋದಲ್ಲಿ ಯುವಕರ ಗುಂಪೊಂದು ಕತ್ತಿಗಳನ್ನು ಬೀಸುವುದು, ಪ್ರದರ್ಶಿಸುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದು…