
Fact Check | ಸಂಸತ್ತಿನಲ್ಲಿನ ಕ್ರಿಸ್‌ಮಸ್ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ ಎಂಬುದು ಸುಳ್ಳು
ಪ್ರಧಾನಿ ನರೇಂದ್ರ ಮೋದಿ ಅವರು ದೃಶ್ಯವೊಂದರಲ್ಲಿ ಬಾಲ ಏಸು ಕ್ರಿಸ್ತನ ವಿಗ್ರಹದ ಮುಂದೆ ಮೇಣದ ಬತ್ತಿಯನ್ನು ಬೆಳಗುತ್ತಿರುವ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಇದರಲ್ಲಿ ಸಂಸತ್ ಆವರಣದಲ್ಲಿ ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಭಾಗಿಯಾಗಿದ್ದಾರೆ ಎಂದು ಬರೆದುಕೊಂಡು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ರಾಜಕೀಯ ಚರ್ಚೆಗೂ ಕೂಡ ದಾರಿ ಮಾಡಿಕೊಟ್ಟಿದೆ. ಹಲವರು ಈ ಫೋಟೋವನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇದು ಸುಳ್ಳಾಗಿದೆ ಸಂಸತ್ತಿನಲ್ಲಿ ಈ ರೀತಿಯ ಆಚರಣೆಯನ್ನು ನಡೆಸಲಾಗಿಲ್ಲ…