Fact Check: ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮೇಲೆ ಯುರೋಪ್ ಸಂಸತ್ ಮಂಡಳಿ ವಾಗ್ದಾಳಿ ನಡೆಸಿದೆ ಎಂಬುದು ಸತ್ಯ
ಪ್ರಧಾನಿ ಮೋದಿ ಮೇಲೆ ಯುರೋಪ್ ಸಂಸತ್ ಮಂಡಳಿ ವಾಗ್ದಾಳಿ ನಡೆಸಿದೆ ಎಂದು ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ಯುರೋಪ್ ಸಂಸತ್ ಮಂಡಳಿಯ ಅನೇಕ ನಾಯಕರು ಭಾರತದಲ್ಲಿ ಹೆಚ್ಚಾಗುತ್ತಿರುವ ಧಾರ್ಮಿಕ ಹಿಂಸಾಚಾರ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ಹಲ್ಲೆಯನ್ನು ಖಂಡಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಅನೇಕರು “ಬಿಗ್ ಬ್ರೇಕಿಂಗ್ – ಯುರೋಪ್‌ನಲ್ಲಿ ನರೇಂದ್ರ ಮೋದಿ ತೀವ್ರ ದಾಳಿಗೆ ಒಳಗಾಗಿದ್ದಾರೆ ಇದೀಗ ಐರೋಪ್ಯ ಸಂಸತ್ ಮಂಡಳಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ….