Fact Check: ಭಾರತ-ಪಾಕಿಸ್ತಾನ ವಿಭಜನೆ ಮತ್ತು ಬಾಂಗ್ಲಾದೇಶದ ವಿಮೋಚನಾ ಯುದ್ಧಕ್ಕೆ ಸಂಬಂಧಿಸಿದ ಅನೇಕ ಪೋಟೋಗಳು ತಪ್ಪು ಮಾಹಿತಿಗಳೊಂದಿಗೆ ವೈರಲ್
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಪ್ಪುಬಿಳುಪಿನ ಅನೇಕ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದ್ದು ಇವುಗಳಲ್ಲಿ ಅನೇಕರು ಸತ್ತು ಮಲಗಿದ್ದರೆ, ಇನ್ನೂ ಕೆಲವು ಚಿತ್ರಗಳಲ್ಲಿ ಜನರು ವಲಸೆ ಹೋಗುತ್ತಿದ್ದಾರೆ, ಮತ್ತೊಂದು ಪೋಟೋದಲ್ಲಿ ಮಹಿಳೆಯ ಕೈಗಳನ್ನು ಕಟ್ಟಿಹಾಕಲಾಗಿದೆ, ಬಾಯಿಗೆ ಬಟ್ಟೆಯನ್ನು ಕಟ್ಟಲಾಗಿದೆ ಮತ್ತು ಅರೆನಗ್ನಾವಸ್ಥೆಯಲ್ಲಿ ಮಹಿಳೆ ಇರುವುದನ್ನು ಕಾಣಬಹುದು. ಈ ಪೋಟೋವನ್ನು “ಇಸ್ಲಾಮಿಕ್ ಜಿಹಾದಿಗಳು ತಮ್ಮ ಹೆಣ್ಣುಮಕ್ಕಳನ್ನು ಕಟ್ಟಿಹಾಕಿ ಬೀದಿಗಳಲ್ಲಿ ಬಲಾತ್ಕಾರ ಮಾಡಿದ್ದು ಹೀಗೆ.” ಎಂದು ಬರೆದು ಹಂಚಿಕೊಳ್ಳಲಾಗುತ್ತಿದೆ. ಹಾಗೂ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಂದರ್ಭದ ಹಲವು ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್…