Fact Check: ಹಿಮಾಚಲ ಪ್ರದೇಶದಲ್ಲಿ ಶಿವಲಿಂಗವನ್ನು ಧ್ವಂಸ ಮಾಡಿರುವುದು ಮಾನಸಿಕ ಅಸ್ವಸ್ತ ಮಹಿಳೆಯೇ ಹೊರತು ಮುಸ್ಲಿಮರಲ್ಲ!
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನಗ್ರೋಟಾದಲ್ಲಿ ಶುಕ್ರವಾರ, ಸೆಪ್ಟೆಂಬರ್ 27, 2024 ರಂದು ಶಿಮಾದಲ್ಲಿ ಕೋಮು ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಶಿವಲಿಂಗವನ್ನು ಧ್ವಂಸಗೊಳಿಸಲಾಗಿದೆ. ಸಿಟಿ ನ್ಯೂಸ್ ಹಿಮಾಚಲ್ ಎಂಬ ಸ್ಥಳೀಯ ಮಾಧ್ಯಮ ಸಂಸ್ಥೆ ಟ್ವೀಟ್ ಮಾಡಿದ ವೀಡಿಯೊ ತುಣುಕು ಸಧ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ ದೇವಾಲಯದ ಒಳಗೆ ಅಪವಿತ್ರಗೊಳಿಸಿದ ಶಿವಲಿಂಗವನ್ನು ತೋರಿಸಿದರೆ, ನಿರೂಪಕ ಇದನ್ನು ಕೆಲವು ದುಷ್ಕರ್ಮಿಗಳ ಕೃತ್ಯ ಎಂದು ವಿವರಿಸುತ್ತಾರೆ. ತನಿಖೆಯ ಬಗ್ಗೆ ಪೊಲೀಸರನ್ನು ಕೇಳಿದಾಗ, ತನಿಖೆ ನಡೆಯುತ್ತಿದೆ ಮತ್ತು ಪೊಲೀಸರು ನೆರೆಹೊರೆಯ ಸಿಸಿಟಿವಿ ದೃಶ್ಯಾವಳಿಗಳನ್ನು…