Fact Check | ಭಾರತದಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಮಾಧ್ಯಮದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಮುಸ್ಲಿಂ ವ್ಯಕ್ತಿ ಕುರ್ಚಿಯ ಮೇಲೆ ಕುಳಿತಿರುವುದನ್ನು ಕಾಣಬಹುದು ಮತ್ತು ಒಬ್ಬ ವ್ಯಕ್ತಿ ಬಂದು ಅವನ ಗಡ್ಡವನ್ನು ಎಳೆದು ಹೊಡೆಯಲು ಪ್ರಾರಂಭಿಸುತ್ತಾನೆ. ಈ ವಿಡಿಯೋ ಹಂಚಿಕೊಂಡಿರುವ ಹಲವರು ಈ ಘಟನೆ ಭಾರತದಲ್ಲಿ ನಡೆದಿದೆ, ಹಲ್ಲೆ ಮಾಡಿದವರು ಹಿಂದೂ ವ್ಯಕ್ತಿ ಭಾರತದಲ್ಲಿ ಅಲ್ಪ ಸಂಖ್ಯಾತರು ಭಯದಿಂದ ಬದುಕುತ್ತಿದ್ದಾರೆ ಎಂದು ಭಾರತದ ವಿರುದ್ಧ ಹಲವು ಕಿಡಿಗೇಡಿಗಳು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ನಿಜವೆಂದು ಭಾವಿಸಿ ಹಲವು ವಿದೇಶಿ ಖಾತೆಗಳು ಹಂಚಿಕೊಂಡಿವೆ….

Read More

Fact Check | ರಾಹುಲ್‌ ಗಾಂಧಿ ಜೊತೆ ಇರುವ ಮಹಿಳಾ ನಾಯಕಿಯರನ್ನು ಜ್ಯೋತಿ ಮೆಲ್ಹೋತ್ರಾ ಎಂದು ಸುಳ್ಳು ಹಂಚಿಕೆ

ಪಾಕಿಸ್ತಾನದ ಪರ ಗೂಢಚಾರ ನಡೆಸಿರುವ ಆರೋಪದ ಮೇಲೆ ಸಿಕ್ಕಿಬಿದ್ದಿರುವ ಯೂಟ್ಯೂಬರ್ ಜ್ಯೋತಿ ಮೇಲ್ಹೋತ್ರಾ ಕುರಿತು ಪ್ರತಿನಿತ್ಯವೂ ಹಲವು ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೀಗ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಜ್ಯೋತಿ ಮೆಲ್ಹೋತ್ರಾ ಇರುವ ಫೋಟೋಗಳು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವರು ಈ ಫೋಟೋ ಕುರಿತು ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಮುಖವಾಗಿ ಬಲಪಂಥೀಯ ಸಾಮಾಜಿಕ ಜಾಲತಾಣದ ಖಾತೆಗಳು “ಕಾಂಗ್ರೆಸ್‌ನದ್ದು ಪಾಕಿಸ್ತಾನ ಪರವಾದ ನಿಲುವು, ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಜ್ಯೋತಿ ಮೆಲ್ಹೋತ್ರಾ ಜೊತೆ…

Read More

Fact Check | ಅಖಿಲೇಶ್ ಯಾದವ್ ಅವರ ಜೊತೆ ಜ್ಯೋತಿ ಮಲ್ಹೋತ್ರಾ ಇರುವ ಫೋಟೋ ಎಡಿಟೆಡ್‌ ಆಗಿದೆ

ಹರಿಯಾಣದ ಟ್ರಾವೆಲ್ ವ್ಲೋಗರ್ ಮತ್ತು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಹಿಸಾರ್ ಪೊಲೀಸರು ಮೇ 17, 2025 ರಂದು ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಿದರು. ವರದಿಗಳ ಪ್ರಕಾರ ಅವರು ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಎನ್‌ಕ್ರಿಪ್ಟ್ ಮಾಡಿದ ವೇದಿಕೆಗಳನ್ನು ಬಳಸಿಕೊಂಡು ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಈಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರೊಂದಿಗೆ ಇರುವ ಫೋಟೋವೊಂದು ವೈರಲ್‌ ಆಗಿದೆ. ಫೋಟೋದಲ್ಲಿ ಜ್ಯೋತಿ…

Read More

Fact Check | ಬಂಧಿತ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಆಲಿಯಾ ಭಟ್, ಪೂಜಾ ಭಟ್ ಜೊತೆ ಕಾಣಿಸಿಕೊಂಡಿದ್ದಾರೆ ಎಂಬುದು ಸುಳ್ಳು

 ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಹರಿಯಾಣದ ಹಿಸಾರ್‌ನ 33 ವರ್ಷದ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಅವರನ್ನು ಮೇ 17 ರಂದು ಬಂಧಿಸಲಾಯಿತು. ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ 26 ನಾಗರಿಕರು ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ನಾಲ್ಕು ದಿನಗಳ ಸಂಘರ್ಷದ ಸಮಯದಲ್ಲಿ ಮಲ್ಹೋತ್ರಾ ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ನಿಯೋಜಿಸಲಾದ ಪಾಕಿಸ್ತಾನಿ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ವರದಿಯಾಗಿದೆ. ಇದೀಗ ಇದಕ್ಕೆ ಸಂಬಂಧ ಪಟ್ಟಂತೆ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ….

Read More

Fact Check | ಪಾಕಿಸ್ತಾನ ವಿರುದ್ಧದ ಸಂಘರ್ಷದಲ್ಲಿ ಪ್ರಧಾನಿ ಮೋದಿ ತಮ್ಮ ಸಹಾಯ ನಿರಾಕರಿಸಿದ್ದರು ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿಲ್ಲ

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಂತರದಲ್ಲಿ ಕದನ ವಿರಾಮ ಘೋಷಿಸಲಾಗಿದ್ದು, ಇದೀಗ ಕದನ ವಿರಾಮವು ವಿವಿಧ ರೀತಿಯ ಚರ್ಚೆಗಳಿಗೆ ಕೂಡ ಕಾರಣವಾಗಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರದ್ದು ಎನ್ನಲಾದ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಅವರು ಪಾಕಿಸ್ತಾನವನ್ನು ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಹಾಯವನ್ನು ನಿರಾಕರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ಬರಹದೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಅವರು “ನಾನು…

Read More

Fact Check | ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ಧ್ವಂಸಗೊಂಡ ವಿಡಿಯೋ ಎಂದು ಸುಡಾನ್ ವಿಮಾನ ನಿಲ್ದಾಣದ ದೃಶ್ಯಗಳ ಹಂಚಿಕೆ

ಆಪರೇಷನ್ ಸಿಂಧೂರ್ ಭಾಗವಾಗಿ ಭಾರತವು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ನೂರ್‌ಖಾನ್‌ ವಾಯು ನೆಲೆಯ ಮೇಲೆ ದಾಳಿ ನಡೆಸಿದ ನಂತರ, ಭಾರತದ ದಾಳಿಯಲ್ಲಿರುವ ನಿಖರತೆ ಮತ್ತು ಸ್ಪಷ್ಟತೆ ಹಾಗೂ ಮಿಲಿಟರಿ ಸಾಮರ್ಥ್ಯ ಏನು ಎಂಬುದು ಜಗತ್ತಿಗೆ ಅರ್ಥವಾಗಿತ್ತು. ಭಾರತದ ಈ ದಾಳಿಗೆ ರಕ್ಷಣಾ ತಜ್ಞರು ನಿಬ್ಬೆರಗಾಗಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದರು. ಇದು ಭಾರತದ ನಿಖರ ದಾಳಿಯ ಯಶಸ್ಸಾಗಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಭಾರತವು ಪಾಕಿಸ್ತಾನದ ನೂರ್‌ಖಾನ್‌ ವಾಯುನೆಲೆಯ ಮೇಲೆ ದಾಳಿ ನಡೆಸಿದ…

Read More

Fact Check | ಭಾರತೀಯ ರಫೇಲ್ ಜೆಟ್‌ಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ವೈರಲ್‌ ಆಗುತ್ತಿರುವ ವರದಿ ಸುಳ್ಳು

ಪಾಕಿಸ್ತಾನವು ಚೀನಾದ ಕ್ಷಿಪಣಿಗಳ ಸಹಾಯದಿಂದ ಭಾರತೀಯ ರಫೇಲ್ ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂಬ ಆರೋಪದ ಬಗ್ಗೆ ದಿ ಡೈಲಿ ಟೆಲಿಗ್ರಾಫ್‌ನಲ್ಲಿ ವರದಿಯೊಂದು ಪ್ರಕಟವಾಗಿದೆ. ಪ್ರತಿಯೊಬ್ಬರು ಕೂಡ ಈ ವರದಿಯನ್ನು ಓದಲೇ ಬೇಕು. ಇಷ್ಟು ದಿನ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಈ ಪತ್ರಿಕೆ, ಇದೀಗ ಪಾಕಿಸ್ತಾನದ ಪರವಾಗಿ ವರದಿಯನ್ನು ಮಾಡಿದೆ. ಪಾಕಿಸ್ತಾನದ ವಾಯು ರಕ್ಷಣೆಯನ್ನು ಹೊಗಳಿ ಸುಳ್ಳು ಮಾಹಿತಿಯ ವರದಿಯನ್ನು ಪ್ರಕಟಿಸಿದೆ ಎಂದು ದಿ ಡೈಲಿ ಟೆಲಿಗ್ರಾಫ್‌ನದ್ದು ಎನ್ನಲಾದ ವರದಿಯ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ಫೋಟೋದಲ್ಲಿ ಕೂಡ ದಿ…

Read More

Fact Check | ಪಾಕ್‌ನೊಂದಿಗಿನ ಸಂಘರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಿದ್ದಾರೆ ಎಂದು ಸುಳ್ಳು ಹಂಚಿಕೊಂಡ ಪಾಕಿಸ್ತಾನಿಗಳು

ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದೊಂದಿಗಿನ ಸಂಘರ್ಷವನ್ನು ಉದ್ದೇಶಿಸಿ ಮಾತನಾಡುತ್ತಿರುವ ಎರಡು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈ ವೀಡಿಯೊಗಳಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನದೊಂದಿಗಿನ ದಾಳಿ ಪ್ರತಿದಾಳಿಯ ಬಗ್ಗೆ, ಈ ಸಂಘರ್ಷ ದೇಶದ ಮೇಲೆ ಉಂಟುಮಾಡಿದ ವಿನಾಶದ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷದ ಬಗ್ಗೆ ಕ್ಷಮೆಯಾಚಿಸುತ್ತಿದ್ದಾರೆ ಎಂದು ಹೇಳಿಕೊಳ್ಳಲಾಗುತ್ತಿದೆ.  ವೈರಲ್‌ ವಿಡಿಯೋವನ್ನು ಬಹುತೇಕ ಪಾಕಿಸ್ತಾನಿ ಖಾತೆಗಳಿಂದ ಹಂಚಿಕೊಳ್ಳಲಾಗುತ್ತಿದೆ. ಇದು ಭಾರತದ ಬಗ್ಗೆ ತಪ್ಪು ಮಾಹಿತಿ ಹಂಚಿಕೊಳ್ಳಲು ನೆರವಾಗುತ್ತಿದ್ದು, ಭಾರತದ ಸಾರ್ವಭೌಮತ್ವಕ್ಕು ಧಕ್ಕೆ…

Read More

Fact Check | ಸಾರ್ವಜನಿಕ ಸ್ಥಳದಲ್ಲಿ ‘ಐ ಟೋಲ್ಡ್ ಮೋದಿ’ ಪೋಸ್ಟರ್ ಹಾಕುವ ವಿಡಿಯೋ ಎಡಿಟೆಡ್‌ ಆಗಿದೆ

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಗಡಿ ಭದ್ರತಾ ಉದ್ವಿಗ್ನತೆಯ ನಡುವೆ, ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್‌ನ ವೀಡಿಯೊವೊಂದು X ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ಬಸ್ ನಿಲ್ದಾಣದಲ್ಲಿ ಈಗಿರುವ ಪೋಸ್ಟರ್ ಮೇಲೆ ಹೊಸ ಪೋಸ್ಟರ್ ಅನ್ನು ಹಾಕುತ್ತಿರುವುದನ್ನು ಕಾಣಬಹುದು. ಮೂಲ ಪೋಸ್ಟರ್‌ನಲ್ಲಿ ಉಗ್ರನೊಬ್ಬ ‘ಮೋದಿಗೆ ಹೇಳು’ ಎಂಬ ಪಠ್ಯದೊಂದಿಗೆ ವ್ಯಂಗ್ಯಚಿತ್ರದ ಚಿತ್ರವಿದ್ದರೆ, ಹೊಸ ಪೋಸ್ಟರ್‌ನಲ್ಲಿ ‘I told Modi’ (ನಾನು ಮೋದಿಗೆ ಹೇಳಿದೆ) ಎಂದು ಬರೆಯಲಾಗಿದೆ. Goose…

Read More

Fact Check | ಪಾಕಿಸ್ತಾನವು IAF ಪೈಲಟ್ ಶಿವಾಂಗಿ ಸಿಂಗ್‌ರನ್ನು ಸೆರೆಹಿಡಿದಿದ್ದನ್ನು ಕರ್ನಲ್ ಸೋಫಿಯಾ ಖುರೇಷಿ ಒಪ್ಪಿಕೊಂಡಿದ್ದಾರೆ ಎಂಬುದು ಸುಳ್ಳು

ಆಪರೇಷನ್ ಸಿಂಧೂರ್ ಸಮಯದಲ್ಲಿ ಐಎಎಫ್ ಪೈಲಟ್ ಶಿವಾಂಗಿ ಸಿಂಗ್ ಅವರನ್ನು ಪಾಕಿಸ್ತಾನ ಸೆರೆಹಿಡಿದಿದೆ ಎಂದು ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಒಪ್ಪಿಕೊಂಡಿದ್ದಾರೆ, ಇದನ್ನು ಭಾರತೀಯ ಮಾಧ್ಯಮಗಳು ಭಿತ್ತರಿಸುತ್ತಿಲ್ಲ. ಎಂದು ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.  ವೈರಲ್‌ ವಿಡಿಯೋದಲ್ಲಿ ಕೂಡ ಐಎಎಫ್ ಪೈಲಟ್ ಶಿವಾಂಗಿ ಸಿಂಗ್ ಅವರನ್ನು ಪಾಕಿಸ್ತಾನ ಸೆರೆಹಿಡಿದಿದೆ ಎಂದು ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಹೇಳುವುದು ಕಂಡು ಬಂದಿದೆ. ಬಹುತೇಕ ಪಾಕಿಸ್ತಾನ ಸೋಶಿಯಲ್‌ ಮಿಡಿಯಾಗಳು ಇದನ್ನು ನೋಡಿದ ಹಲವು ಮಂದಿ ವೈರಲ್‌…

Read More