FACT CHECK : ಶಬರಿಮಲೆ ದೇವಸ್ಥಾನದ ‘ಅರಾವಣ ಪ್ರಸಾದ’ವನ್ನು ಯುಎಇಯ ಅಲ್-ಜಹಾ ಕಂಪೆನಿ ತಯಾರಿಸಿದೆ ಎಂಬುದು ಸುಳ್ಳು
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ಕಂಪನಿಯಾದ ಅಲ್-ಜಹಾ ತಯಾರಿಸಿದ ‘ಅರಾವಣ ಪಾಯಸಂ’ ಬಾಟಲಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ “ಇದು ಕೇರಳದ ಶಬರಿಮಲೆ ದೇವಸ್ಥಾನವು ಭಕ್ತರಿಗೆ ಮಾರಾಟ ಮಾಡುವ ಅರಾವಣ ಪ್ರಸಾದ” ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. “ಕೇರಳದ ಕಮ್ಯುನಿಸ್ಟ್ ಸರ್ಕಾರ ಶಬರಿಮಲೆ ಪ್ರಸಾದ ತಯಾರು ಮಾಡಲು ಟೆಂಡರ್ ಕರೆದು ಮುಸಲ್ಮಾನನಿಗೆ ಡೀಲ್ ಕೊಟ್ಟಿದೆ. ಅರಾವಣ ಪ್ರಸಾದಕ್ಕೆ ಈಗ ಹಲಾಲ್ ಸರ್ಟಿಫಿಕೇಟ್ ಸಿಕ್ಕಿದೆ. ತುಂಬಾ ದುಃಖದ ವಿಷಯ. ವಾಟ್ಸಾಪ್, ಫೇಸ್‌ಬುಕ್ ಮೂಲಕ ಶೇರ್ ಮಾಡಿ” ಎಂಬ ತೆಲುಗು…
