Fact Check | ಭಾರತಕ್ಕೆ ಏಲಿಯನ್‌ಗಳ ಪ್ರವೇಶ ಎಂದು AI ಸೃಷ್ಟಿಸಿದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಏಲಿಯನ್ಸ್ ( ಅನ್ಯಗ್ರಹ ಜೀವಿಗಳು ) ಕಥೆಗಳಿಗೆ ಮತ್ತೊಮ್ಮೆ ಜೀವ ಬಂದಿದೆ. ಕಳೆದ ಹಲವು ದಶಕಗಳಿಂದ ಏಲಿಯನ್ಸ್‌ಗಳು ಮಾನವನನ್ನು ಭೇಟಿ ಮಾಡುತ್ತಿವೆ. ಅವು ನಮಗಿಂತ ಬುದ್ದಿವಂತ ಜೀವಿಗಳು, ಅವುಗಳ ಸಂಪರ್ಕ ಅಮೆರಿಕ ಸೇರಿದಂತೆ ಜಗತ್ತಿನ ಹಲವು ನಾಯಕರಿಗೆ ಇದೆ. ಅದನ್ನು ರಹಸ್ಯವಾಗಿ ಇಡಲಾಗಿದೆ ಎಂದೆಲ್ಲ ಹೇಳಿಕೊಂಡು ಬರಲಾಗುತ್ತಿದೆ. ಇದರ ನಡುವೆ ಹಲವು ಮಂದಿ ಕೆಲವೆ ದಿನಗಳಲ್ಲಿ ಏಲಿಯನ್‌ಗಳು ಭೂಮಿಗೆ ಬರಲಿದೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಕೆಲವರು ಏಲಿಯನ್‌ಗಳು ಭಾರತಕ್ಕೆ ಭೇಟಿ ನೀಡಿವೆ….