Fact Check | ಬಿಹಾರದ ಯುವಕ ಗುಜರಿ ವಸ್ತುಗಳಿಂದ ವಿಮಾನ ನಿರ್ಮಿಸಿದ್ದಾನೆ ಎಂಬುದು ಸುಳ್ಳು
ಬಿಹಾರದ ಮುಜಫರ್‌ಪುರದ ಅವನೀಶ್ ಕುಮಾರ್ ಎಂಬ ಯುವಕ ಕೇವಲ 7,000 ರೂಪಾಯಿ ವೆಚ್ಚದಲ್ಲಿ ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿ ವಿಮಾನವೊಂದನ್ನು ರಚಿಸಿದ್ದಾನೆ ಎಂಬ ವೀಡಿಯೊ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಒಂದು ಸಣ್ಣ ವಿಮಾನವು ಭೂಮಿಯಿಂದ ಮೇಲಕ್ಕೆ ಏರುವ ದೃಶ್ಯವನ್ನು ನೋಡಬಹುದು. ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, “ಬಿಹಾರದ ಮುಜಫರ್‌ಪುರದ ನಿವಾಸಿ ಅವನೀಶ್ ಕುಮಾರ್ ಎಂಬ ಯುವಕ ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿ ಕೇವಲ 7,000 ರೂಪಾಯಿ ವೆಚ್ಚದಲ್ಲಿ ವಿಮಾನವೊಂದನ್ನು ನಿರ್ಮಿಸಿದ್ದಾನೆ. ಈ ವಿಮಾನವು 300…
