ಶಿವಸೇನೆ (UBT) ನಾಯಕರಾದ ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಅವರ ಮುಖಗಳ ಚಿತ್ರಗಳನ್ನುವ್ಯಕ್ತಿಯೊಬ್ಬ ತನ್ನ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಆದರೆ, ಸಂಜಯ್ ರಾವುತ್ ಅವರ ಚಿತ್ರವನ್ನು ವ್ಯಕ್ತಿಯೊಬ್ಬ ಬೆನ್ನಿನ ಕೆಳಗೆ (ಅಗೌರವವನ್ನು ವ್ಯಕ್ತಪಡಿಸಿ ಹಿಂಭಾಗದಲ್ಲಿ) ಹಚ್ಚೆ ಹಾಕಿಸಿಕೊಂಡಿದ್ದಾನೆ ಎಂದು ಪೋಸ್ಟರ್ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಟೊವನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, 2022ರ ಸೆಪ್ಟೆಂಬರ್ನಲ್ಲಿ ಪ್ರಕಟವಾದ ಹಲವಾರು ಸುದ್ದಿವರದಿಗಳು ಲಭಿಸಿವೆ. ಈ ವರದಿಗಳಲ್ಲಿ ಮೂಲ ಚಿತ್ರವನ್ನು ಹಂಚಿಕೊಳ್ಳಲಾಗಿದ್ದು, ಉದ್ಧವ್ ಮತ್ತು ಆದಿತ್ಯ ಠಾಕ್ರೆ ಅವರ ಮುಖಗಳ ಚಿತ್ರಗಳನ್ನು ಮಾತ್ರ ವ್ಯಕ್ತಿಯೊಬ್ಬ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ಉದ್ಧವ್ ಠಾಕ್ರೆಗೆ ತೋರಿಸಿದ್ದಾರೆ.

ಈ ವರದಿಗಳ ಪ್ರಕಾರ, ಸೊಲ್ಲಾಪುರದ ರಾಮಣ್ಣ ಜಮಾದಾರ್ ಎಂಬ ಕಟ್ಟಡ ಕಾರ್ಮಿಕನೊಬ್ಬ ಶಿವಸೇನೆ ಮತ್ತು ಠಾಕ್ರೆ ಕುಟುಂಬಕ್ಕೆ ನಿಷ್ಠೆಯನ್ನು ತೋರಿಸಲು ಉದ್ಧವ್ ಮತ್ತು ಆದಿತ್ಯ ಠಾಕ್ರೆ ಅವರ ಮುಖಗಳ ಚಿತ್ರಗಳನ್ನು ತನ್ನ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ವೈರಲ್ ಪೋಟೊ ಮತ್ತು ನೈಜ ಪೋಟೊವನ್ನು ಹೋಲಿಕೆ ಮಾಡಿ ನೋಡಿದಾಗ, ಸಂಜಯ್ ರಾವತ್ ಅವರ ಮುಖದ ಚಿತ್ರವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.

ರಾಮಣ್ಣ ತನ್ನ ಬೆನ್ನಿನ ಕೆಳಗೆ ಉದ್ಧವ್ ಮತ್ತು ಆದಿತ್ಯ ಠಾಕ್ರೆಯವರ ಮುಖಗಳ ಚಿತ್ರಗಳನ್ನು ಹಚ್ಚೆ ಹಾಕಿಸಿಕೊಂಡಿರುವುದನ್ನು ಟಿವಿ9 ಮರಾಠಿಯಲ್ಲಿ ನಡೆದ ಸಂದರ್ಶನದಲ್ಲಿ ತೋರಿಸಿದ್ದರು. ರಾಮಣ್ಣ ಅವರ ಫೇಸ್ಬುಕ್ ಪ್ರೊಫೈಲ್ನಲ್ಲೂ ಈ ಇದೇ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವ್ಯಕ್ತಿಯೊಬ್ಬ ತನ್ನ ಬೆನ್ನಿನ ಕೆಳಗೆ ಸಂಜಯ್ ರಾವತ್ ಅವರ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ ಎಂದು ಎಡಿಟೆಡ್ ಪೋಟೊ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

