Fact Check | ಅಖಿಲೇಶ್ ಯಾದವ್ ಅವರ ಜೊತೆ ಜ್ಯೋತಿ ಮಲ್ಹೋತ್ರಾ ಇರುವ ಫೋಟೋ ಎಡಿಟೆಡ್‌ ಆಗಿದೆ

ಹರಿಯಾಣದ ಟ್ರಾವೆಲ್ ವ್ಲೋಗರ್ ಮತ್ತು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಹಿಸಾರ್ ಪೊಲೀಸರು ಮೇ 17, 2025 ರಂದು ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಿದರು. ವರದಿಗಳ ಪ್ರಕಾರ ಅವರು ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಎನ್‌ಕ್ರಿಪ್ಟ್ ಮಾಡಿದ ವೇದಿಕೆಗಳನ್ನು ಬಳಸಿಕೊಂಡು ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಈಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರೊಂದಿಗೆ ಇರುವ ಫೋಟೋವೊಂದು ವೈರಲ್‌ ಆಗಿದೆ. ಫೋಟೋದಲ್ಲಿ ಜ್ಯೋತಿ…

Read More

Fact Check | ದಾವೂದ್ ಇಬ್ರಾಹಿಂ ಜೊತೆ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನಾಟೆ ಎಂದು ಪತ್ರಕರ್ತೆ ಶೀಲಾ ಭಟ್ ಅವರ ಫೋಟೋ ಹಂಚಿಕೊಳ್ಳಲಾಗುತ್ತಿದೆ

ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಂತರ, ಭದ್ರತಾ ಸಂಸ್ಥೆಗಳು ಈಗ ಪಾಕಿಸ್ತಾನಕ್ಕಾಗಿ ರಹಸ್ಯವಾಗಿ ಕೆಲಸ ಮಾಡುತ್ತಿದ್ದ ಜನರನ್ನು ಹುಡುಕುವಲ್ಲಿ ನಿರತವಾಗಿವೆ. ಈ ಪ್ರಕರಣದಲ್ಲಿ ಇದುವರೆಗೆ ಹಲವರನ್ನು ಬಂಧಿಸಲಾಗಿದೆ . ಈ ಮಧ್ಯೆ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಕಚೇರಿಯಲ್ಲಿ ಕುಳಿತಿರುವ ಮಹಿಳೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋವನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ನೋಡಿದ ಕೆಲವು ಬಲಪಂಥೀಯ ಖಾತೆಗಳು “ಈಗ…

Read More

Fact Check | ಕನ್ಹಯ್ಯಾ ಕುಮಾರ್ ಅವರಿಗೆ ಕಪಾಳಮೋಕ್ಷ ಮಾಡಿರುವ ಹಳೆಯ ವೀಡಿಯೊವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

ಬಿಹಾರದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಪಕ್ಷಗಳು ಅದಕ್ಕಾಗಿ ತಯಾರಿ ನಡೆಸುತ್ತಿವೆ. ಇದರ ನಡುವೆ ಇದೀಗ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಬಿಹಾರದಲ್ಲಿ ಇತ್ತೀಚೆಗೆ ನಡೆದ ಘಟನೆಯೆಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ವಿಡಿಯೋದಲ್ಲಿ ಕೂಡ ರ್ಯಾಲಿಯಂತಹ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕನ್ಹಯ್ಯಾ ಕುಮಾರ್ ಅವರಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡು ಬಂದಿದೆ. ಹಾಗಾಗಿ ಇದನ್ನು ಬಿಹಾರ ಚುನಾವಣ ಪ್ರಚಾರದ ಸಂದರ್ಭದಲ್ಲೇ ನಡೆದಿದೆ ಎಂದು…

Read More

Fact Check | ಗುಜರಾತ್‌ನ ತಿರಂಗ ಯಾತ್ರೆ ವಿಡಿಯೋವನ್ನು ಬಲೂಚಿಸ್ತಾನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ, ಇದರಲ್ಲಿ ಕೆಲವರು ಭಾರತದ ರಾಷ್ಟ್ರಧ್ವಜವನ್ನು ಹಿಡಿದು ರ‍್ಯಾಲಿಯಲ್ಲಿ ಭಾಗವಹಿಸುತ್ತಿರುವುದು ಕಾಣಬಹುದಾಗಿದೆ. ಈ ವಿಡಿಯೋವನ್ನು ಗುಜರಾತ್‌ನ ತಿರಂಗ ಯಾತ್ರೆಯದ್ದು ಎಂದು ಗುರುತಿಸಲಾಗಿದೆ, ಆದರೆ ಕೆಲವು ಬಳಕೆದಾರರು ಇದನ್ನು ಬಲೂಚಿಸ್ತಾನದ ಜನರು ಭಾರತದ ಧ್ವಜವನ್ನು ಹಿಡಿದಿರುವ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ತಪ್ಪು ಮಾಹಿತಿಯು ಬಲೂಚಿಸ್ತಾನದ ಜನರು ಭಾರತಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂಬ ತಪ್ಪು ಚಿತ್ರಣವನ್ನು ಸೃಷ್ಟಿಸುತ್ತಿದೆ, ಇದು ರಾಜಕೀಯವಾಗಿ ಕೂಡ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ…

Read More

Fact Check | ಇಸ್ತಾನ್‌ಬುಲ್‌ನಲ್ಲಿ ಕಾಂಗ್ರೆಸ್ ಕಚೇರಿ ಇದೆ ಎಂದು ಸಭಾಂಗಣದ ಫೋಟೋ ಹಂಚಿಕೊಂಡು ನಗೆಪಾಟಲಿಗೆ ಒಳಗಾದ ರಿಪಬ್ಲಿಕ್‌ ಟಿವಿ

ರಿಪಬ್ಲಿಕ್ ಟಿವಿ  ಇಸ್ತಾನ್‌ಬುಲ್‌ನಲ್ಲಿರುವ “ಇಸ್ತಾನ್‌ಬುಲ್ ಕಾಂಗ್ರೆಸ್ ಸೆಂಟರ್” ಅನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಚೇರಿ ಎಂದು ತಪ್ಪಾಗಿ ಹೇಳಿಕೊಂಡಿದ್ದಾರೆ. ಈ ಸುದ್ದಿಯನ್ನು ರಿಪಬ್ಲಿಕ್ ಟಿವಿಯ ಚಾನಲ್‌ನಲ್ಲಿ ಪ್ರಸಾರ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷವು ವಿದೇಶದಲ್ಲಿ ಕಚೇರಿಯನ್ನು ಹೊಂದಿದೆ ಎಂಬ ತಪ್ಪು ಅಭಿಪ್ರಾಯವನ್ನು ಸೃಷ್ಟಿಸಲಾಗಿದೆ. ಈ ಸುದ್ದಿಯು ಜನರಲ್ಲಿ ಗೊಂದಲವನ್ನು ಉಂಟುಮಾಡಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ರಾಜಕೀಯ ದುರುದ್ದೇಶದಿಂದ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ರಿಪಬ್ಲಿಕ್ ಟಿವಿಯ ಈ ವರದಿಯನ್ನು…

Read More

Fact Check | ಬಂಧಿತ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಆಲಿಯಾ ಭಟ್, ಪೂಜಾ ಭಟ್ ಜೊತೆ ಕಾಣಿಸಿಕೊಂಡಿದ್ದಾರೆ ಎಂಬುದು ಸುಳ್ಳು

 ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಹರಿಯಾಣದ ಹಿಸಾರ್‌ನ 33 ವರ್ಷದ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಅವರನ್ನು ಮೇ 17 ರಂದು ಬಂಧಿಸಲಾಯಿತು. ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ 26 ನಾಗರಿಕರು ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ನಾಲ್ಕು ದಿನಗಳ ಸಂಘರ್ಷದ ಸಮಯದಲ್ಲಿ ಮಲ್ಹೋತ್ರಾ ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ನಿಯೋಜಿಸಲಾದ ಪಾಕಿಸ್ತಾನಿ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ವರದಿಯಾಗಿದೆ. ಇದೀಗ ಇದಕ್ಕೆ ಸಂಬಂಧ ಪಟ್ಟಂತೆ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ….

Read More

Fact Check | ಪಾಕಿಸ್ತಾನ ವಿರುದ್ಧದ ಸಂಘರ್ಷದಲ್ಲಿ ಪ್ರಧಾನಿ ಮೋದಿ ತಮ್ಮ ಸಹಾಯ ನಿರಾಕರಿಸಿದ್ದರು ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿಲ್ಲ

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಂತರದಲ್ಲಿ ಕದನ ವಿರಾಮ ಘೋಷಿಸಲಾಗಿದ್ದು, ಇದೀಗ ಕದನ ವಿರಾಮವು ವಿವಿಧ ರೀತಿಯ ಚರ್ಚೆಗಳಿಗೆ ಕೂಡ ಕಾರಣವಾಗಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರದ್ದು ಎನ್ನಲಾದ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಅವರು ಪಾಕಿಸ್ತಾನವನ್ನು ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಹಾಯವನ್ನು ನಿರಾಕರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ಬರಹದೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಅವರು “ನಾನು…

Read More

Fact Check | ಕಝಾಕಿಸ್ತಾನ್ ಪರಮಾಣು ಕೇಂದ್ರದ ಹಳೆಯ ಫೋಟೋಗಳನ್ನು ಪಾಕಿಸ್ತಾನದ ಕಿರಾನಾ ಬೆಟ್ಟಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ನಂತರ ವಿವಿಧ ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಪ್ರಮುಖವಾಗಿ ಭಾರತದ ದಾಳಿಯಿಂದ ಪಾಕಿಸ್ತಾನದ ಪರಮಾಣು ಶಸ್ತ್ರಗಾರ ಹೊಂದಿದೆ ಎಂದು ಹೇಳಲಾದ ಕಿರಾನಾ ಬೆಟ್ಟಗಳ ನಡುವೆ ವಿಕಿರಣ ಸೋರಿಕೆಯಾಗಿದೆ ಎಂಬ ವದಂತಿಯೊಂದು ವ್ಯಾಪಕವಾಗಿ ಹಬ್ಬಿತು. ಇದೀಗ ಇದಕ್ಕೆ ಸಂಬಂಧ ಪಟ್ಟ ಫೋಟೋ ಎಂದು ವಿವಿಧ ಚಿತ್ರಗಳು ವೈರಲ್ ಆಗಿವೆ. ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ನೋಡಿದ ಹಲವು ಮಂದಿ ಇದನ್ನು ನಿಜವೆಂದು…

Read More

Fact Check | ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ಧ್ವಂಸಗೊಂಡ ವಿಡಿಯೋ ಎಂದು ಸುಡಾನ್ ವಿಮಾನ ನಿಲ್ದಾಣದ ದೃಶ್ಯಗಳ ಹಂಚಿಕೆ

ಆಪರೇಷನ್ ಸಿಂಧೂರ್ ಭಾಗವಾಗಿ ಭಾರತವು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ನೂರ್‌ಖಾನ್‌ ವಾಯು ನೆಲೆಯ ಮೇಲೆ ದಾಳಿ ನಡೆಸಿದ ನಂತರ, ಭಾರತದ ದಾಳಿಯಲ್ಲಿರುವ ನಿಖರತೆ ಮತ್ತು ಸ್ಪಷ್ಟತೆ ಹಾಗೂ ಮಿಲಿಟರಿ ಸಾಮರ್ಥ್ಯ ಏನು ಎಂಬುದು ಜಗತ್ತಿಗೆ ಅರ್ಥವಾಗಿತ್ತು. ಭಾರತದ ಈ ದಾಳಿಗೆ ರಕ್ಷಣಾ ತಜ್ಞರು ನಿಬ್ಬೆರಗಾಗಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದರು. ಇದು ಭಾರತದ ನಿಖರ ದಾಳಿಯ ಯಶಸ್ಸಾಗಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಭಾರತವು ಪಾಕಿಸ್ತಾನದ ನೂರ್‌ಖಾನ್‌ ವಾಯುನೆಲೆಯ ಮೇಲೆ ದಾಳಿ ನಡೆಸಿದ…

Read More

Fact Check | ವಾಟ್ಸಾಪ್‌ ಮತ್ತು ಫೋನ್‌ ಕರೆಗಳಿಗೆ ಹೊಸ ಸಂವಹನ ನಿಯಮ ಜಾರಿಗೆ ಬರಲಿವೆ ಎಂಬುದು ಸುಳ್ಳು

ವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಾದ್ಯಂತ ಅನೇಕ ಬಳಕೆದಾರರು ಸರ್ಕಾರವು ಹೊಸ ಸಂವಹನ ನಿಯಮಗಳನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ಹೇಳುವ ಇನ್ಫೋಗ್ರಾಫಿಕ್ ಅನ್ನು ಹಂಚಿಕೊಳ್ಳುತ್ತಿದ್ದಾರೆ, ಅದರ ಅಡಿಯಲ್ಲಿ ಎಲ್ಲಾ ಕರೆಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಸರ್ಕಾರದ ಮೇಲ್ವಿಚಾರಣೆಗೆ ಒಳಪಟ್ಟಿರುತ್ತವೆ. ಇದನ್ನು ನೋಡಿದ ಹಲವು ಬಳಕೆದಾರರು, ವಿವಿಧ ಬರಹಗಳೊಂದಿಗೆ ಪೋಸ್ಟ್‌ ಅನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ವೈರಲ್‌ ಪೋಸ್ಟ್‌ನಲ್ಲಿ ವಾಟ್ಸಾಪ್‌ ಮತ್ತು ಫೋನ್‌ ಕರೆಗಳಿಗೆ ಹೊಸ ಸಂವಹನ ನಿಯಮ ನಾಳೆಯಿಂದ ಜಾರಿಗೆ ಬರಲಿವೆ ಎಂದು ಶೀರ್ಷಿಕೆ ಹೊಂದಿರುವ ಪತ್ರಿಕೆಯ ವರದಿಯೊಂದು…

Read More