
Fact Check | ಶಾಹೀನ್ ಬಾಗ್‌ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ವಿಡಿಯೋವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೆ
ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ, ಯುವತಿಯೊಬ್ಬಳನ್ನು ಪೊಲೀಸರು ಕಾರಿನಲ್ಲಿ ಕರೆದೊಯ್ಯುವುದನ್ನು ಕಾಣಬಹುದು. ಇದನ್ನು ಬಳಸಿಕೊಂಡು ಹಲವರು ಬುರ್ಖಾ ಧರಿಸಿಕೊಂಡು ಹಿಂದೂ ಮಹಿಳೆಯೊಬ್ಬಳು ಅದರಲ್ಲೂ ಬಿಜೆಪಿ ಕಾರ್ಯಕರ್ತೆಯಾದ ಈಕೆ ಮುಸಲ್ಮಾನರ ಪ್ರತಿಭಟನೆಗೆ ಬಂದು ಗಲಭೆ ಎಬ್ಬಿಸಲು ಪ್ರಯತ್ನಿಸಿದ್ದಾಳೆ, ಆ ಮೂಲಕ ಮುಸಲ್ಮಾನರೇ ಗಲಭೆ ಮಾಡುತ್ತಾರೆ ಎಂದು ಬಿಂಬಿಸುವ ಯತ್ನ ಈಗೆಯದ್ದಾಗಿತ್ತು ಎಂದು ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಕೂಡ ಮಹಿಳೆಯನ್ನು ಪೊಲೀಸರು ಕರೆದುಕೊಂಡು ಹೋಗುವುದು ಕಂಡು ಬರುತ್ತಿರುವುದರಿಂದ ಹಲವರು ಇದನ್ನು ನಿಜವೆಂದು ಭಾವಿಸಿ…