Fact Check | ಮಕ್ಕಳ ಮುಂದೆಯೇ ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಕೊಂದಿದ್ದಾನೆ ಎಂಬುದು ಸುಳ್ಳು
ಸಿಸಿಟಿವಿಯಲ್ಲಿ ವ್ಯಕ್ತಿಯೊಬ್ಬನನ್ನು ಹಣೆಗೆ ಶೂಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೀರತ್‌ನಲ್ಲಿ ಮುಸ್ಲಿಂನೊಬ್ಬ ತನ್ನ ಮಕ್ಕಳ ಎದುರೇ ಹಿಂದೂ ವ್ಯಕ್ತಿಯನ್ನು ಕೊಂದಿದ್ದಾನೆ ಎಂಬ ಹೇಳಿಕೆಯೊಂದಿಗೆ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಇದು ಕೋಮು ಬಣ್ಣವನ್ನು ಪಡೆದುಕೊಂಡಿದ್ದು ಹಲವರು ಕೋಮು ದ್ವೇಷ ಹರಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಘಟನೆಗೆ ಮೂಲ ಕಾರಣದ ಕುರಿತು ವೈರಲ್ ಪೋಸ್ಟ್‌ನಲ್ಲಿ ಬರೆಯಲಾಗಿಲ್ಲ. ಮತ್ತು ಹತನಾದವನ ಹಿನ್ನೆಲೆ ಏನು ಎಂಬುದು ಕೂಡ ಎಲ್ಲಿಯೂ ಉಲ್ಲೇಖವಾಗದೆ ಇರುವುದು…