Pramod Belagod

Fact Check: ದುಬೈನ ಮಸೀದಿಯೊಂದರಲ್ಲಿ ಮುಸ್ಲಿಂ ಮಹಿಳೆಯರು ರಾಮ ಭಜನೆ ಹಾಡಿದ್ದಾರೆ ಎಂಬುದು ಸುಳ್ಳು

ರಾಮ ಮಂದಿರದ ಉದ್ಘಾಟನೆಯ ಬಳಿಕ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ರಾಮ ಭಜನೆ ಮಾಡಲಾಗುತ್ತಿದೆ. ಮುಸ್ಲಿಂ ರಾಷ್ಟ್ರಗಳಲ್ಲಿಯೂ ಸಹ ಶ್ರೀ ರಾಮನ ಭಜನೆಯನ್ನು ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದ ಹಲಾವರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೇಚೆಗೆ, ದುಬೈನ ಮಸೀದಿಯೊಂದರಲ್ಲಿ ಮುಸ್ಲಿಂ ಮಹಿಳೆಯರು ರಾಮ ಭಜನೆ ಹಾಡುತ್ತಿರುವ ವಿಡಿಯೋ. ಇದು ಭಾರತದಲ್ಲಿ ನಡೆದಿದ್ದರೆ ಇಸ್ಲಾಂ ಅಪಾಯದಲ್ಲಿದೆ ಎನ್ನುತ್ತಿದ್ದರು. ಎಂದು ಪ್ರತಿಪಾದಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಈ ವಿಡಿಯೋವನ್ನು ದುಬೈನ ಮಸೀದಿಯಲ್ಲಿ ತೆಗೆಯಲಾಗಿಲ್ಲ, ಇದು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿರುವ ಪ್ರಶಾಂತಿ…

Read More
ನೆಹರೂ

Fact Check: ನೆಹರೂರವರು ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು ಎಂದು ಸುಳ್ಳು ಹೇಳಿದ ಅಜಿತ್ ಹನುಮಕ್ಕನವರ್

ಜವಹರಲಾಲ್ ನೆಹರೂ ಅವರ ಕುರಿತು ಪ್ರತಿ ದಿನ ಒಂದಿಲ್ಲೊಂದು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿರುತ್ತದೆ. ಕೆಲವು ಕಿಡಿಗೇಡಿಗಳು ಇತಿಹಾಸವನ್ನು ತಿರುಚುವ ಸಲುವಾಗಿ ಅನೇಕ ಅರೋಪಗಳನ್ನು ಮಾಡುತ್ತಿರುತ್ತಾರೆ. ನೆಹರು ಅವರ ಕುರಿತ ಇಂತಹ ಅನೇಕ ಆರೋಪಗಳನ್ನು ಹೀಗಾಗಲೇ ಬಯಲು ಮಾಡಲಾಗಿವೆ. ಅವುಗಳನ್ನು ನೀವು ಇಲ್ಲಿ ಓದಬಹುದು. ಈಗ, ಅಸಲಿಗೆ ನೆಹರು ಅವರು ಕೇವಲ 14 ದಿನ ಮಾತ್ರ ಜೈಲು ವಾಸ ಅನುಭವಿಸಿದ್ದು ಮತ್ತು ಅವರು ಸಹ ನಭಾ ಜೈಲಿನಿಂದ ಹೊರಬರಲು ಬ್ರಿಟೀಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದರು. ಎಂದು ಪ್ರತಿಪಾದಿಸಲಾಗುತ್ತಿದೆ. ಕನ್ನಡದ…

Read More

Fact Check: ವಿಧಾನ ಸೌಧದಲ್ಲಿ “ಪಾಕಿಸ್ತಾನ ಜಿಂದಾಬಾದ್” ಘೋಷಣೆ ಎಂದು ಸುಳ್ಳು ವರದಿ ಮಾಡಿದ ಕರ್ನಾಟಕದ ಮಾಧ್ಯಮಗಳು

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆ ಮಾತು ನಮ್ಮ ಸಮಾಜದಲ್ಲಿ ಬಹು ಹಿಂದಿನಿಂದಲೂ ಇದೆ. ಆದರೆ ಇಂದು ಬಹುತೇಕ ಮಾಧ್ಯಮಗಳು ಜನರಿಗೆ ಸತ್ಯವನ್ನು ತೋರಿಸುವ ಬದಲಾಗಿ ಆಧಾರರಹಿತವಾದ ಸುಳ್ಳುಗಳನ್ನೇ ಹಂಚಿಕೊಳ್ಳುತ್ತಿವೆ. ಸುದ್ದಿಯ ನಿಖರತೆಯನ್ನು ಪರೀಕ್ಷಿಸಿಕೊಳ್ಳದೆ ಪತ್ರಿಕಾ ಧರ್ಮವನ್ನು ಮರೆತವರಂತೆ ವರ್ತಿಸುತ್ತಿವೆ. ಇದಕ್ಕೆ ಸಾಕ್ಷಿಯೆಂಬಂತೆ ನೆನ್ನೆ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದ ನಾಸಿರ್ ಹುಸೇನ್ ಅವರ ಬೆಂಬಲಿಗರಿಂದಲೇ ವಿಧಾನ ಸೌಧದಲ್ಲಿ “ಪಾಕಿಸ್ತಾನ್ ಜಿಂದಾಬಾದ್” ಘೋಷಣೆ ಕೇಳಿಬಂದಿದೆ. ಎಂದು ಕನ್ನಡದ ಬಹುತೇಕ ಮಾಧ್ಯಮಗಳು ವರದಿ ಮಾಡಿವೆ….

Read More

Fact Check: ಬಿಜೆಪಿ ಕೌನ್ಸಿಲರ್‌ ಪೋಲಿಸರನ್ನು ತಳಿಸಿದ ವಿಡಿಯೋವನ್ನು ಕಾಂಗ್ರೆಸ್ ಶಾಸಕ ಎಂದು ಹಂಚಿಕೆ

ಇತ್ತೀಚೆಗೆ ಹಳೆಯ ವಿಡಿಯೋಗಳನ್ನು ಉದ್ದೇಶವೂರ್ವಕವಾಗಿ ತಪ್ಪಾಗಿ ಅರ್ಥೈಸಿ ಹಂಚಿಕೊಳ್ಳಲಾಗುತ್ತಿದೆ. ಲೋಕಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆ ಕೆಲವು ರಾಜಕೀಯ ಪಕ್ಷದ ಮುಖಂಡರು ತಮ್ಮ ವಿರುದ್ದ ಪಕ್ಷದವರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈಗ “ಕಾಂಗ್ರೆಸ್ ಶಾಸಕ ಅನಿಲ್ ಉಪಾಧ್ಯಾಯ ಅವರ ಈ ಕ್ರಮದ ಬಗ್ಗೆ ನೀವು ಏನು ಹೇಳುತ್ತೀರಿ? ಈ ವೀಡಿಯೊಗಳನ್ನು ಎಷ್ಟು ವೈರಲ್ ಮಾಡಿ ಎಂದರೆ ಇಡೀ ಭಾರತವು ಅವುಗಳನ್ನು ನೋಡಬಹುದು. ಕಾಂಗ್ರೆಸ್‌ ಗೂಂಡಾಗಳೇ, ಈ ಗೂಂಡಾ ಶಾಸಕನನ್ನು ಈಗ ಏನು ಮಾಡುತ್ತೀರಿ? ಎಂದು ಪ್ರತಿಪಾದಿಸಿ ವ್ಯಕ್ತಿಯೊಬ್ಬರು ಪೋಲಿಸ್…

Read More
ಪಶ್ಚಿಮ ಬಂಗಾಳ

Fact Check: ಪಶ್ಚಿಮ ಬಂಗಾಳದ ಹಿಂದೂ ದಂಪತಿಗಳ ವಿಡಿಯೋ ಎಂದು ಬಿಹಾರದ ವಿಡಿಯೋ ಹಂಚಿಕೆ

ಬಿಹಾರದಲ್ಲಿ ಬೈಕ್‌ನಲ್ಲಿ ಬಂದ ಮಹಿಳೆಯ ಮೇಲೆ ಪುರುಷರ ಗುಂಪು ಲೈಂಗಿಕ ದೌರ್ಜನ್ಯ ನಡೆಸಿದ ಆಘಾತಕಾರಿ ವೀಡಿಯೊ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಇದು ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ಎಂದು ಸುಳ್ಳು ಹೇಳಿಕೆಯೊಂದಿಗೆ, ಹಿಂದೂ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಮುಸ್ಲಿಮರು ಎಂದು ಹೇಳಲಾಗುತ್ತಿದೆ. “ಪಶ್ಚಿಮ ಬಂಗಾಳದ ಮುಸ್ಲಿಮರು ಹಿಂದೂ ದಂಪತಿಗಳು ಹೊಲ ಗದ್ದೆ ತೋಟಗಳ ಕಡೆ ಹೋದಾಗ ಈ ರೀತಿ ವರ್ತನೆ ಮಾಡುತ್ತಿದ್ದಾರೆ, ನಿಮ್ಮ ಬಂಗಾಳದ ಮುಸ್ಲಿಂ ಯುವಕರು ಈಗಲಾದರೂ ಹಿಂದುಗಳು ನರೇಂದ್ರ ಮೋದಿ  ಈ ದೇಶಕ್ಕೆ ಯಾಕಿರಬೇಕು ಎಂಬುದನ್ನು ಅರ್ಥ…

Read More
ರೈತ

Fact Check: ಮಯನ್ಮಾರ್‌ನ ಪೋಟೋವೊಂದನ್ನು ರೈತ ಹೋರಾಟ ಸಂದರ್ಭದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದ ಕುರಿತು ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಕೇಂದ್ರ ಸರ್ಕಾರವೂ ಸಹ ಹೋರಾಟ ನಿರತ ರೈತರು ದೆಹಲಿಯನ್ನು ಪ್ರವೇಶಿಸದಂತೆ ಬ್ಯಾರಿಕೆಡ್, ಮುಳ್ಳಿನ ತಂತಿಗಳು ಮತ್ತು ಅಶ್ರುವಾಯು ದಾಳಿಗಳಿಂದ ಅವರನ್ನು ಹಿಮ್ಮೆಟ್ಟಿಸುತ್ತಿದೆ. ಹಲವು ಸುತ್ತಿನ ಮಾತುಕತೆಗಳು ಜರುಗಿದ್ದರೂ ಕೂಡ ಕೇಂದ್ರ ಮತ್ತು ರೈತರ ನಡುವಿನ ಚರ್ಚೆಗಳು ಸಫಲವಾಗುತ್ತಿಲ್ಲ. ಈಗ, “ಮೋದಿಯವರು ರೈತರನ್ನು ಹೇಗೆ ಸಾಯಿಸುತ್ತಿದ್ದಾರೆ ನೋಡಿ. ರೈತರ ಹತ್ಯೆ ಮಾಡಿದವರನ್ನು ತಿರುಗಾಡಲು ಬಿಡುತ್ತೀರಾ? ಕೇವಲ ಮಾತನಾಡಿದ್ದಕ್ಕೆ ಜನರನ್ನು…

Read More

Fact Check: ಆಗಸ್ಟ್ 1, 2024ರ ನಂತರ Gmail ಕಾರ್ಯ ನಿರ್ವಹಿಸುವುದಿಲ್ಲ ಎಂಬುದು ಸುಳ್ಳು

ಇತ್ತೀಚೆಗೆ ವದಂತಿಗಳು ಹಬ್ಬುವುದು ಹೆಚ್ಚಾಗುತ್ತಿದ್ದು, Gmail ಸ್ಥಗಿತಗೊಳ್ಳುತ್ತಿದೆ. ಆಗಸ್ಟ್‌ 01, 2024ರಿಂದ ಜಿಮೇಲ್ ಕಾರ್ಯನಿರ್ವಹಿಸುವುದಿಲ್ಲ ಎಂದು ಗೂಗಲ್ ಸಂಸ್ಥೆ ಅಧಿಸೂಚನೆ ನೀಡಿದೆ. ಎಂಬ ಸುದ್ದಿಯೊಂದು ಜಗತ್ತಿನಾದ್ಯಂತ ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ಗೂಗಲ್ ಸಂಸ್ಥೆ ತಮ್ಮ ಗ್ರಾಹಕರಿಗೆ ಹೊರಡಿಸಿರುವ ಅಧಿಸೂಚನೆಯಂತೆ ಮೀಮ್ಸ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಫ್ಯಾಕ್ಟ್‌ಚೆಕ್: Gmail ಸ್ಥಗಿತಗೊಳ್ಳಲಿದೆ ಎಂಬ ವದಂತಿ ಸುಳ್ಳು. AI-ಚಾಲಿತ ವೈಶಿಷ್ಟ್ಯಗಳನ್ನು ಅಳವಡಿಸುವಲ್ಲಿ ಜೀಮೇಲ್ ನಿರತವಾಗಿದೆ. ಕಳೆದ ತಿಂಗಳು ಸಂಸ್ಥೆಯು ಇಮೇಲ್‌ಗಳನ್ನು ಬರೆಯಲು ಬಳಕೆದಾರರಿಗೆ ಸಹಾಯ ಮಾಡಲು ಡ್ಯುಯೆಟ್ AI ವೈಶಿಷ್ಟ್ಯವನ್ನು ಪ್ರಾರಂಭಿಸಿದೆ….

Read More

Fact Check: ನೀರು ಕುಡಿದ ಕಾರಣಕ್ಕೆ ದಲಿತ ಹುಡುಗರ ಹಲ್ಲೆ ನಡೆದಿರುವುದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಎಂದು ಸಾಭೀತಾಗಿಲ್ಲ

ಜಾತಿ ವ್ಯವಸ್ಥೆ ನಮ್ಮ ದೇಶಕ್ಕಂಟಿರುವ ಸಾಮಾಜಿಕ ಪಿಡುಗುಗಳಲ್ಲೊಂದು. ಸಾವಿರಾರು ವರ್ಷಗಳಿಂದ ಈ ಜಾತಿ ವ್ಯವಸ್ಥೆಯನ್ನು ಬುಡಮೇಲಾಗಿ ಕೀಳಲು ಅನೇಕ ಸಮಾಜ ಸುಧಾರಕರು ಬಂದರು ಇನ್ನೂ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಗಳು ನಿಂತಿಲ್ಲ. ಆದರೆ “ಜಾತಿ ವ್ಯವಸ್ಥೆಯೇ ಈಗಿಲ್ಲ, ಎಲ್ಲವೂ ಬದಲಾಗಿದೆ” ಎಂದು ವಾದಿಸುವವರು ನಮ್ಮ ಸಮಾಜದಲ್ಲಿದ್ದಾರೆ. ಅವರಿಗೆ ಪ್ರತಿನಿತ್ಯ ನಡೆಯುವ ಜಾತಿ ದೌರ್ಜನ್ಯಗಳ ಮಾಹಿತಿ ಇರುವುದಿಲ್ಲ. ಇದ್ದರೂ ಅದನ್ನು ಪರಿಗಣಿಸುವುದಿಲ್ಲ. ಭಾರತದ ಮಾಧ್ಯಮಗಳು ಸಹ ಇಂತಹ ದೌರ್ಜನ್ಯಗಳನ್ನು ವರದಿ ಮಾಡುವುದಿಲ್ಲ. ಆದ್ದರಿಂದ ಇತ್ತೀಚೆಗೆ, “ಮಧ್ಯ ಪ್ರದೇಶ ದ…

Read More
ದೇವಸ್ಥಾನ

Fact Check: ದೇವಸ್ಥಾನಗಳ ಸಮಿತಿಯಲ್ಲಿ ಹಿಂದೂಯೇತರರು ಇರಬೇಕೆಂದು ಕಾಂಗ್ರೆಸ್ ಸರ್ಕಾರ ತಿದ್ದುಪಡಿ ಮಾಡಿಲ್ಲ

ಇತ್ತೀಚೆಗೆ ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅನೇಕರು ಹಿಂದೂ ದೇವಸ್ಥಾನಗಳ ಹಣವನ್ನು ಅನ್ಯ ಧರ್ಮೀಯರ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ದೂರುತ್ತಿದ್ದಾರೆ. ಸದನದಲ್ಲಿಯೂ ಈ ಚರ್ಚೆ ಕೇಳಿಬಂದಾಗ ಪ್ರಸ್ತುತ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿಯವರು ದೇವಸ್ಥಾನದ ಹಣ ಮುಜರಾಯಿ ಇಲಾಖೆಗಾಗಲಿ, ಸರ್ಕಾರಕ್ಕಾಗಲಿ ಬರುವುದಿಲ್ಲ. ಎಲ್ಲಾ ಹಣವನ್ನು ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗಾಗಿಯೇ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಈಗ, ರಾಜ್ಯ ಸರಕಾರದಿಂದ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಕೇವಲ ಹಿಂದೂ ಸದಸ್ಯರಿರಬೇಕು ಎಂಬ ನಿಯಮ ರದ್ದು !…

Read More

Fact Check: ಮುಜರಾಯಿ ಇಲಾಖೆಯ 450 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಜೇಬಿಗಿಳಿಸಿಕೊಂಡಿದೆ ಎಂಬುದು ಸುಳ್ಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ 16, 2024ರಂದು ತನ್ನ 15ನೇ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಈ ಬೆನ್ನಲ್ಲೇ ದೇಶದ ಪ್ರಮುಖ ಸುದ್ದಿ ವಾಹಿನಿಗಳಲ್ಲೊಂದಾದ CNN ನೆಟ್ವರ್ಕ್ 18 ಸಲಹಾ ಸಂಪಾದಕ ರಾಹುಲ್ ಶಿವಶಂಕರ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಡಿದ ಪೋಸ್ಟ್ ಒಂದು ತೀವ್ರ ಚರ್ಚೆಗೆ ಗುರಿಯಾಗಿದೆ. ತಮ್ಮ ಪೋಸ್ಟ್‌ನಲ್ಲಿ ಅವರು “ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ಬಜೆಟ್‌ನಲ್ಲಿ ವಕ್ಫ್‌ ಆಸ್ತಿಯ ಅಭಿವೃದ್ಧಿಗಾಗಿ, ಮಂಗಳೂರಿನಲ್ಲಿ ಹಜ್ ಭವನಕ್ಕಾಗಿ ಮತ್ತು ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ ₹330ಕೋಟಿ ಮೀಸಲಿಟ್ಟಿದೆ. ಕರ್ನಾಟಕ…

Read More