ಮಾಂಸಹಾರ

Fact Check: ಮಾಂಸಹಾರಕ್ಕಿಂತ ಸಸ್ಯಹಾರದಲ್ಲಿ ಹೆಚ್ಚಿನ ಪ್ರೋಟಿನ್‌ ಸಿಗುತ್ತದೆ ಎಂಬ ಜಾನ್ ಅಬ್ರಹಾಂ ಹೇಳಿಕೆ ದಾರಿತಪ್ಪಿಸುವಂತಿದೆ

ನಾಳೆಯಿಂದ ಮೂರು ದಿನಗಳ ಕಾಲ ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲಿದೆ. ಈ ಬಾರಿ ಸಮ್ಮೇಳನದಲ್ಲಿ ಸಸ್ಯಹಾರ ಮತ್ತು ಮಾಂಸಹಾರ‌ ಊಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದ ಏರ್ಪಟ್ಟಿದೆ. ಸಸ್ಯಹಾರ ಮತ್ತು ಮಾಂಸಹಾರ ಎರಡೂ ಊಟಗಳನ್ನು ಬಡಿಸಬೇಕು ಎಂದು ಮಂಡ್ಯ ಸೇರಿದಂತೆ ರಾಜ್ಯದ ಅನೇಕ ಸಂಘಟನೆಗಳು ಒತ್ತಾಯಿಸಿವೆ. “ಸಸ್ಯಹಾರ ಶ್ರೇಷ್ಠ ಮತ್ತು ಮಾಂಸಹಾರ ಕನಿಷ್ಠ” ಎಂಬ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಮಾಂಸಹಾರ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ ಎಂದು ಮಾಂಸಹಾರಕ್ಕೆ ಬೇಡಿಕೆ  ಇಟ್ಟಿರುವ ಬಹುತೇಕರ ಅಭಿಪ್ರಾಯವಾಗಿದೆ….

Read More

Fact Check: ನಿಂಬೆ-ಶುಂಠಿಯನ್ನು ಒಟ್ಟಿಗೆ ಸೇವಿಸುವುದರಿಂದ ಕರುಳಿನ ಆರೋಗ್ಯವನ್ನು ಸುಧಾರಿಸಬಹುದೇ? ಇಲ್ಲಿದೆ ಸತ್ಯ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು, ಪರಿಹಾರಗಳನ್ನು ಸೂಚಿಸುವ ವಿಡಿಯೋಗಳನ್ನು ಸಾಕಷ್ಟು ಜನರು ಹಂಚಿಕೊಳ್ಳುತ್ತಿದ್ದಾರೆ. ಇವುಗಳಲ್ಲಿ ಅನೇಕ ಸಲಹೆ ಮತ್ತು ‍ಔಷಧಿಗಳಿಗೆ ವೈಧ್ಯಕೀಯ ಶಿಫಾರಸ್ಸು ದೊರತಿರುವುದಿಲ್ಲ ಆದರೂ ಸಹ ಜನಪ್ರಿಯತೆ ಗಳಿಸುವ ನಿಟ್ಟಿನಲ್ಲಿ ಇಂತಹ ವಿಷಯಗಳನ್ನು ಪ್ರಚಾರ ಪಡಿಸಲಾಗುತ್ತಿರುತ್ತದೆ. ಈಗ ಅದೇ ರೀತಿಯಲ್ಲಿ “ದೇಹವನ್ನು ನಿರ್ವಿಷ(ಡಿಟಾಕ್ಸ್)ಗೊಳಿಸುವ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಕರುಳನ್ನು ಶುದ್ಧೀಕರಿಸುವ ಮತ್ತು ದೇಹದಲ್ಲಿನ ಒಟ್ಟಾರೆ ಉರಿಯೂತವನ್ನು ನಿವಾರಿಸುವ ಪಾಕವಿಧಾನವನ್ನು ಸೂಚಿಸುವ Instagram ವಿಡಿಯೋ ಒಂದು ವೈರಲ್ ಆಗಿದೆ. ಪಾಕವಿಧಾನದಲ್ಲಿ ಶುಂಠಿ, ಜೇನು ತುಪ್ಪ…

Read More
ಲೆಮನ್ ಗ್ರಾಸ್

Fact Check: ಲೆಮನ್ ಗ್ರಾಸ್ ಸೇವನೆಯು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಎಂಬುದು ನಿಜ. ಆದರೆ ಅಡ್ಡಪರಿಣಾಮಗಳು ಸಹ ಇವೆ

ನಿಂಬೆ ಹುಲ್ಲು ಅಥವಾ ಲೆಮನ್ ಗ್ರಾಸ್ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿ ಅನೇಕ ಸಂದೇಶಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಮನೆ ಮದ್ದು ಮತ್ತು ಆಯುರ್ವೇದಕ್ಕೆ ಸಂಬಂಧಿಸಿದಂತೆ ಜೌಷಧಿಗಳನ್ನು ಮತ್ತು ಪರಿಹಾರ ಸೂಚಿಸುವ ವಿಡಿಯೋಗಳನ್ನು ಅನೇಕರು ಜಾಲತಾಣಗಳಿಗೆ ಹರಿಬಿಡುತ್ತಿದ್ದಾರೆ. ಆದರೆ ಅವರು ಸೂಚಿಸುವ ಹಲವಾರು ಜೌಷಧಿ ಮತ್ತು ಪರಿಹಾರಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಮಾನ್ಯತೆ ದೊರಕಿರುವುದಿಲ್ಲ. ಈಗ, “ಲೆಮನ್ ಗ್ರಾಸ್ ಆಂಟಿ-ಹೈಪರ್ ಕೊಲೆಸ್ಟರಾಲೆಮಿಕ್…

Read More
ಕ್ಯಾನ್ಸರ್‌

Fact Check: ಬೇವಿನಿಂದ ಕ್ಯಾನ್ಸರ್‌ ಗುಣಪಡಿಸಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ

ಕಳೆದ ತಿಂಗಳು, ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರು ತಮ್ಮ ಪತ್ನಿ ನವಜೋತ್ ಕೌರ್ ಸರಳ ಆಹಾರ ಮತ್ತು ಜೀವನಶೈಲಿಯ ಮೂಲಕ ಕೇವಲ 40 ದಿನಗಳಲ್ಲಿ 4 ನೇ ಹಂತದ ಕ್ಯಾನ್ಸರ್‌ನಿಂದ ಹೊರಬಂದರು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದರು. ನಂತರ ವೈದ್ಯರ ತಂಡ ಸಿದ್ದು ಅವರ ಪ್ರತಿಪಾದನೆ ಸುಳ್ಳು ಮತ್ತು ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಈಗ ನವಜೋತ್‌ ಸಿದ್ದು ಅವರ ನಂತರ, ತನ್ನನ್ನು ತಾನು ದೇವಮಾನವ ಎಂದು ಕರೆದುಕೊಳ್ಳುತ್ತಿರುವ ಸದ್ಗುರು “ಬೇವಿನಿಂದ…

Read More

Fact Check I ನಾನ್ ಸ್ಟಿಕ್‌ ಪಾತ್ರೆಗಳು ಆರೋಗ್ಯಕ್ಕೆ ಹಾನಿಕಾರಕವೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ರೀಲ್ಸ್‌ ಹಾಗೂ ಕೆಲವು ಸುದ್ದಿಗಳ ಶೀರ್ಷಿಕೆಗಳ ಪ್ರಕಾರ ಟೆಫ್ಲಾನ್‌ ಅಥವಾ ನಾನ್‌ ಸ್ಟಿಕ್‌ ಪಾತ್ರೆಗಳಲ್ಲಿ ಆಹಾರ ಬೇಯೀಸಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂಬ ಪೋಸ್ಟ್‌ಗಳು ವ್ಯಾಪಕವಾಗಿ ಹರಿದಾಡುತ್ತಿವೆ. “ನಾನ್‌ಸ್ಟಿಕ್‌ ಪಾತ್ರೆಗಳನ್ನು ಬಳಸುವುದರಿಂದ ನಿಮ್ಮ ಮಕ್ಕಳ ದೇಹದಲ್ಲಿ ರಸಾಯನಿಕ ಅಂಶಗಳು ಜೀವನ ಪೂರ್ತಿ ಉಳಿದುಕೊಳ್ಳಬಹುದು. ಈ ಪಾತ್ರೆಗಳನ್ನು ರಸಾಯನಿಕ ಬಳಸಿ ತಯಾರಿಸುವುದರಿಂದ ಇವುಗಳು  ಕ್ಯಾನ್ಸರ್‌ಕಾರಕವಾಗಬಹುದು, ಹಾರ್ಮೋನ್ಸ್‌ ಸಮಸ್ಯೆಗಳಿಗೆ ಹಾಗೂ  ಸಂತಾನಾಭಿವೃದ್ಧಿಗೆ ಬಾಧಕವಾಗಬಹುದು”  ಎಂದು ಹೇಳುವ ಯೂಟ್ಯೂಬ್‌ ವಿಡಿಯೋವೊಂದರಲ್ಲಿ ಹೇಳಲಾಗಿದೆ. Instagram ರೀಲ್‌ವೊಂದರಲ್ಲಿ , ನಾನ್…

Read More

Fact Check: ಬೆಂಗಳೂರಿಗೆ ಸರಬರಾಜು ಆಗುತ್ತಿರುವುದು ಕುರಿ ಮಾಂಸವೇ ಹೊರತು ನಾಯಿ ಮಾಂಸ ಅಲ್ಲ ಎಂದು ಆಹಾರ ಸುರಕ್ಷತಾ ಆಯುಕ್ತ ಸ್ಪಷ್ಟಪಡಿಸಿದ್ದಾರೆ

ಇತ್ತೀಚೆಗೆ ರಾಜಸ್ಥಾನದಿಂದ ಬೆಂಗಳೂರಿಗೆ ವಾರಕ್ಕೆ ಮೂರು ಬಾರಿ ರೈಲಿನಲ್ಲಿ ಸರಬರಾಜು ಆಗುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವನ್ನು ಬೆರೆಸಲಾಗಿದೆ ಎಂದು ಆರೋಪಿಸಿ ವಿವಾದಿತ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಿಂದುಪರ ಸಂಘಟನೆಗಳು ಕೆಎಸ್‌ಆರ್‌(ಯಶವಂತಪುರ) ರೈಲ್ವೆ ನಿಲ್ದಾಣಕ್ಕೆ ಜೈಪುರದಿಂದ ಬಂದ ರೈಲಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಉದ್ದನೆಯ ಬಾಲ ಇರುವ ಕುರಿ ಮಾಂಸ ಕಂಡು ಇದು ನಾಯಿ ಮಾಂಸ ಎಂದು ಆರೋಪಿಸಿದ್ದಾರೆ. ಆದರೆ ಯಾವುದೇ ದಾಖಲೆಯನ್ನು ಒದಗಿಸಿಲ್ಲ. ಇದರ ನಂತರ ಅಲ್ಲಿಗೆ ಆಗಮಿಸಿದ ಪೋಲಿಸರು ಮತ್ತು ಆಹಾರ…

Read More
ಗೋಮಾಂಸ

Fact Check: ಭಾರತದಲ್ಲಿ ಗೋಮಾಂಸ ರಪ್ತು ಮಾಡುವ ಪ್ರಮುಖ ಕಂಪನಿಗಳಲ್ಲಿ 5 ಹಿಂದುಗಳ ಒಡೆತನದವುಗಳಾಗಿವೆ

ಗೋ ಮಾಂಸದ ರಪ್ತಿನಲ್ಲಿ ಭಾರತವು ಜಗತ್ತಿನ ಎರಡನೇ ಸ್ಥಾನಕ್ಕೇರುತ್ತಿದ್ದಂತೆ ಈಗ ದೇಶದಾದ್ಯಂತ ಗೋಮಾಂಸ ರಪ್ತಿನ ಕುರಿತು ಮತ್ತು ಗೋಮಾಂಸ ರಪ್ತು ಮಾಡುತ್ತಿರುವ ಕಂಪನಿಗಳು ಮತ್ತು ಅವುಗಳ ಒಡೆತನಗಳ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಅನೇಕರು ಗೋಮಾಂಸ ರಪ್ತಿನಲ್ಲಿ ಹಿಂದುಗಳ ಪಾತ್ರವು ಇದೆ. ಪ್ರಭಲ ಜಾತಿಗಳಿಗೆ(ಸಸ್ಯಹಾರಿಗಳಾದ ಬ್ರಾಹ್ಮಣ, ಬನಿಯಾ ಮತ್ತು ಜೈನ) ಸೇರಿದ ಅನೇಕರು ಮತ್ತು ಬಿಜೆಪಿ ಪಕ್ಷದ ಮುಖಂಡರೂ ಸಹ ಗೋಮಾಂಸ ರಪ್ತಿನ ವ್ಯಾಪಾರದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಲೇಖನದ ಮೂಲಕ ವಿಸ್ತಾರವಾಗಿ ಈ  ಆರೋಪ…

Read More

Fact Check: ಅನಾನಸ್‌ ಮತ್ತು ಬಿಸಿ ನೀರಿನಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂಬುದಕ್ಕೆ ಯಾವುದೇ ಆಧಾರವಿಲ್ಲ

ವೈಜ್ಞಾನಿಕ ವಲಯವು ಕ್ಯಾನ್ಸರ್‌ ಕಾಯಿಲೆಗೆ ಚಿಕಿತ್ಸೆಯನ್ನು ಸಂಶೋಧಿಸುತ್ತಲೇ ಇರುವಾಗ, “ಕ್ಯಾನ್ಸರ್ ಅನ್ನು ಸೋಲಿಸುವ” ಚಿಕಿತ್ಸೆಯನ್ನು ಕಂಡುಹಿಡಿಯಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿರುವ ವೈರಲ್ ಸಂದೇಶದ ಪ್ರಕಾರ, ಕತ್ತರಿಸಿದ ಅನಾನಸ್‌ ಹಣ್ಣಿನ ಹಲವು ತುಂಡುಗಳನ್ನು ಬಿಸಿ ನೀರಿಗೆ ಸೇರಿಸಿ ಮತ್ತು ಈ ಮಿಶ್ರಣವನ್ನು ಕುಡಿಯುವುದರಿಂದ ರೋಗದ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಂದು ಪ್ರತಿಪಾದಿಸಲಾಗುತ್ತಿದೆ. ಈ ವೈರಲ್ ಸಂದೇಶವು ಕಳೆದ ಅನೇಕ ವರ್ಷಗಳಿಂದ ಹರಿದಾಡುತ್ತಿದ್ದು ಇಂಗ್ಲಿಷ್‌ನಲ್ಲಿ ಸಹ ಇದೇ ಸಂದೇಶವನ್ನು…

Read More