FACT CHECK : ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಮಂಕಿಪಾಕ್ಸ್ ವೈರಸ್ ಸೃಷ್ಟಿಸಿದ್ದಾರೆ ಎಂಬುದು ಸುಳ್ಳು
ಸಾಮಾಜಿಕ ಜಾಲತಾಣದಲ್ಲಿ “ಮಂಕಿಪಾಕ್ಸ್‌ನ ಸೃಷ್ಟಿ ಮತ್ತು ಹರಡುವಿಕೆಯ ಹಿಂದೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಕೈವಾಡವಿದೆ” ಎಂದು ಆರೋಪಿಸಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ. ಸದಾ ಆನ್‌ಲೈನ್ ದಾಳಿಗೆ ಗುರಿಯಾಗುತ್ತಿರುವ ಬಿಲ್ ಗೇಟ್ಸ್, mpox ವೈರಸ್ ಅನ್ನು ಸೃಷ್ಟಿಸಿದ್ದಾರೆ ಮತ್ತು ಈಗ ಅದಕ್ಕೆ ಲಸಿಕೆಯನ್ನು ಹೊರತರಲಿದ್ದಾರೆ, ಆ ಮೂಲಕ ಅವರು ತೀರಾ ಕೀಳ್ಮಟ್ಟಕ್ಕೆ ಇಳಿದಿದ್ದಾರೆ” ಎಂದು ಹಂಚಿಕೊಳ್ಳಲಾಗಿದೆ. ಇದಲ್ಲದೇ, ವಿಶ್ವ ಆರೋಗ್ಯ ಸಂಸ್ಥೆಯು ಬಿಲ್ ಗೇಟ್ಸ್‌ನ ಕೈಯಲ್ಲಿ ಕೇವಲ “ಗೊಂಬೆ” ಎಂದು ಹಲವರು ಆರೋಪಿಸಿದ್ದಾರೆ ಮತ್ತು ಅವರು mpoxನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ…