2024ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ನಂತರ, ವಿಶ್ವದ ಶ್ರೀಮಂತ ಗಾಯಕಿ, ಪಾಪ್ ತಾರೆಯಾದ ಟೇಲರ್ ಸ್ವಿಫ್ಟ್ ಕೆನಡಾಕ್ಕೆ ತೆರಳಿದ್ದಾರೆ ಎಂಬ ಪೋಸ್ಟರ್ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಬ್ರೇಕಿಂಗ್: ಟೇಲರ್ ಸ್ವಿಫ್ಟ್ ಅಮೇರಿಕದ ಅಧ್ಯಕ್ಷೀಯ ಚುನಾವಣೆಯ ನಂತರ ಅಮೇರಿಕವನ್ನು ತೊರೆದು ಕೆನಡಾಕ್ಕೆ ತೆರಳಿದ್ದಾರೆ. ಗುಡ್ ಬೈ ಅಮೇರಿಕ, ಐ ಲವ್ ಕೆನಡಾ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟರ್ನ ಕುರಿತು ನಿಜಸ್ವರೂಪವನ್ನು ತಿಳಿದುಕೊಳ್ಳಲು, ಪೋಸ್ಟರ್ನ ಕೆಲವು ಕೀವರ್ಡ್ಗಳನ್ನು ಬಳಸಿಕೊಂಡು ಹುಡುಕಾಟ ನಡೆಸಿದಾಗ, ಈ ಕುರಿತು ಯಾವುದೇ ವಿಶ್ವಾಸಾರ್ಹ ವರದಿಗಳು ಲಭಿಸಲಿಲ್ಲ. ಟೇಲರ್ ಸ್ವಿಫ್ಟ್ ಕೆನಡಾಕ್ಕೆ ತೆರಳಿರುವ ವಿಷಯದ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಟೇಲರ್ ಸ್ವಿಫ್ಟ್ ಅವರ ಕುರಿತು ಮತ್ತಷ್ಟು ಹುಡುಕಾಟ ನಡೆಸಿದಾಗ, 2024ರ ನವೆಂಬರ್4ರಂದು ಅವರ ಅಧಿಕೃತ Instagram ಖಾತೆಯಲ್ಲಿ ಕೆನಡಾದ ಅತಿ ದೊಡ್ಡ ನಗರವಾದ ಟೊರೊಂಟೊದಲ್ಲಿ ಪ್ರವಾಸವನ್ನು ಕೈಗೊಳ್ಳುವ ಕುರಿತು ಟೇಲರ್ ಸ್ವಿಫ್ಟ್ ಇತ್ತೀಚಿಗೆ ಕಾಮೆಂಟ್ ಮಾಡಿದ್ದಾರೆ.

2024ರ ಡಿಸೆಂಬರ್ 8ರಂದು ಟೇಲರ್ ಸ್ವಿಫ್ಟ್ ಕೆನಡಾದ ಕೊನೆಯ ದಿನದ ಪ್ರವಾಸದ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2024ರ ಅಮೇರಿಕ ಅಧ್ಯಕ್ಷೀಯ ಚುನಾವಣೆಯ ನಂತರ ಟೇಲರ್ ಸ್ವಿಫ್ಟ್ ಕೆನಡಾಕ್ಕೆ ತೆರಳಿದ್ದಾರೆ ಎಂಬ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಹಾಗಾಗಿ ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check : ಏಕನಾಥ್ ಶಿಂಧೆಯವರ ಹಳೆಯ ಫೋಟೋ ಎಂದು ಬಾಬಾ ಕಾಂಬ್ಳೆಯವರ ಚಿತ್ರ ಹಂಚಿಕೊಳ್ಳಲಾಗುತ್ತಿದೆ

