ಡಿಸೆಂಬರ್ 20, 2024 ರಂದು ಮುಂಜಾನೆ, ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ತುಂಬಿದ ಟ್ಯಾಂಕರ್ ಮುಂದೆ ಬರುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ವಿನಾಶಕಾರಿ ಅಪಘಾತ ಸಂಭವಿಸಿದೆ ಎಂದು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ.
“ಈ ಅಪಘಾತದಿಂದ ಹೊತ್ತಿಕೊಂಡ ಬೆಂಕಿ ಬೇಗನೆ ಹರಡಿತು, ಸುಮಾರು 34 ವಾಹನಗಳಿಗೆ ಬೆಂಕಿಯ ಜ್ವಾಲೆ ಆವರಿಸಿತು. ಅಪಘಾತದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ವಿಡಿಯೋ ಮತ್ತು ಪೋಟೋಗಳು (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ವೈರಲ್ ಆಗುತ್ತಿವೆ.
ವೈರಲ್ ವಿಡಿಯೋ 2024ರ ಡಿಸೆಂಬರ್ 20ರಂದು ಜೈಪುರದಲ್ಲಿ ಸಂಭವಿಸಿದ ಅನಿಲ ಟ್ಯಾಂಕರ್ ಸ್ಫೋಟದ ದೃಶ್ಯಗಳನ್ನು ತೋರಿಸುವುದಿಲ್ಲ. ಡಿಸೆಂಬರ್ 02, 2020 ರಂದು ನೈಜೀರಿಯಾದ ಒಗುನ್ ರಾಜ್ಯದ ಲಾಗೋಸ್-ಇಬಾಡಾನ್ ಎಕ್ಸ್ಪ್ರೆಸ್ ವೇಯಲ್ಲಿ ಪೆಟ್ರೋಲ್ ಟ್ಯಾಂಕರ್ ಬೆಂಕಿಯಿಂದ ತೆಗೆದ ಫೋಟೋ ಇದು. ಮೊದಲ ವಿಡಿಯೋ 2020 ರ ಆಗಸ್ಟ್ನಲ್ಲಿ ಬೈರುತ್ ಬಂದರು ಸ್ಫೋಟದಿಂದ ಅಮೋನಿಯಂ ನೈಟ್ರೇಟ್ ಸಂಗ್ರಹಿಸುವ ಗೋದಾಮಿನಲ್ಲಿ ಬೆಂಕಿಯಿಂದ ಸಂಭವಿಸಿದೆ. ಎರಡನೇ ವಿಡಿಯೋ ಇಟಲಿಯ ಸಿಸಿಟಿವಿ ದೃಶ್ಯಾವಳಿಯಾಗಿದ್ದು, 06 ಆಗಸ್ಟ್ 2018 ರಂದು ಬೊಲೊಗ್ನಾ ವಿಮಾನ ನಿಲ್ದಾಣದ ಬಳಿ ಟ್ಯಾಂಕರ್ ಅಪಘಾತವನ್ನು ತೋರಿಸುತ್ತದೆ. ಮೂರನೇ ವಿಡಿಯೋ ರಷ್ಯಾದ ಗ್ರೋಜ್ನಲ್ಲಿರುವ ಇಂಧನ ಕೇಂದ್ರದಲ್ಲಿ ಸಂಭವಿಸಿದ ಸ್ಫೋಟದಿಂದ ಬಂದಿದೆ. ಈ ಯಾವುದೇ ದೃಶ್ಯಗಳು ಜೈಪುರ ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಸಂಬಂಧಿಸಿಲ್ಲ.
ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದಾಗ ಸ್ಟಾಕ್ ಇಮೇಜ್ ವೆಬ್ಸೈಟ್ ಮತ್ತು ಅಲಮಿಯ ವೆಬ್ಸೈಟ್ನಲ್ಲಿ ಅದೇ ಫೋಟೋವನ್ನು (ಆರ್ಕೈವ್ ಮಾಡಲಾಗಿದೆ) ಹಂಚಿಕೊಂಡಿರುವುದು ಕಂಡು ಬಂದಿದೆ. 02 ಡಿಸೆಂಬರ್ 2020 ರಂದು ನೈಜೀರಿಯಾದ ಒಗುನ್ ರಾಜ್ಯದ ಲಾಗೋಸ್-ಇಬಾಡಾನ್ ಎಕ್ಸ್ಪ್ರೆಸ್ ವೇಯಲ್ಲಿ ಪೆಟ್ರೋಲ್ ಟ್ಯಾಂಕರ್ಗೆ ಬೆಂಕಿ ಕಾಣಿಸಿಕೊಂಡಾಗ ಈ ಫೋಟೋವನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಣೆಯಲ್ಲಿ ಬರೆಯಲಾಗಿದೆ.

ಡಿಸೆಂಬರ್ 2020 ರಿಂದ ಅದೇ ಘಟನೆಯನ್ನು ಒಳಗೊಂಡ ವರದಿಗಳನ್ನು (ಇಲ್ಲಿ ಮತ್ತು ಇಲ್ಲಿ) (ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) ನಾವು ಕಂಡುಕೊಂಡಿದ್ದೇವೆ. ವರದಿಗಳ ಪ್ರಕಾರ, ಫೆಡರಲ್ ರಸ್ತೆ ಸುರಕ್ಷತಾ ಆಯೋಗದ ಕಾರಿಡಾರ್ ಕಮಾಂಡರ್ ಕಹಿಂಡೆ ಹಮ್ಜತ್ ಅವರು 2020 ರ ಡಿಸೆಂಬರ್ 02 ರಂದು ಮುಂಜಾನೆ 4 ಗಂಟೆ ಸುಮಾರಿಗೆ ಲಾಗೋಸ್ಗೆ ಹೋಗುವ ಹೆದ್ದಾರಿಯ ಮ್ಯಾಗ್ಬೊರೊ ಸೇತುವೆಯಲ್ಲಿ ಇಂಧನ ಟ್ಯಾಂಕರ್ಗೆ ಬೆಂಕಿ ಹತ್ತಿಕೊಂಡಾಗ ಈ ಘಟನೆ ಸಂಭವಿಸಿದೆ ಎಂದು ಉಲ್ಲೇಖಿಸಿದ್ದಾರೆ.

ವೀಡಿಯೊ 1

ವೈರಲ್ ವಿಡಿಯೋದಿಂದ ಕೆಲವು ಕೀಫ್ರೇಮ್ಸ್ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಆಗಸ್ಟ್ 2020 ರ ದಿ ಗಾರ್ಡಿಯನ್ ವರದಿ (ಆರ್ಕೈವ್ ಮಾಡಲಾಗಿದೆ) ನಮಗೆ ಲಭ್ಯವಾಯಿತು, ಇದು ಬೈರುತ್ ಹಡಗುಕಟ್ಟೆಯಲ್ಲಿ ಸಂಭವಿಸಿದ ಸ್ಫೋಟದ ಹಲವಾರು ಚಿತ್ರಗಳನ್ನು ಒಳಗೊಂಡಿದೆ. ಈ ಚಿತ್ರಗಳಲ್ಲಿ ಒಂದು ವೈರಲ್ ವಿಡಿಯೋದಲ್ಲಿನ ದೃಶ್ಯಗಳಿಗೆ ಹೊಂದಿಕೆಯಾಗುತ್ತದೆ.

ಅದೇ ಘಟನೆಯನ್ನು ಒಳಗೊಂಡ ವರದಿಗಳನ್ನು (ಇಲ್ಲಿ) (ಆರ್ಕೈವ್ ಮಾಡಲಾಗಿದೆ) ನಾವು ಕಂಡುಕೊಂಡಿದ್ದೇವೆ. ವರದಿಗಳ ಪ್ರಕಾರ, 2020 ರ ಆಗಸ್ಟ್ನಲ್ಲಿ ಲೆಬನಾನ್ನ ಬೈರುತ್ನ ಬಂದರಿನಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 220 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 6,500 ಜನರು ಗಾಯಗೊಂಡಿದ್ದಾರೆ. ಹಲವು ವರ್ಷಗಳಿಂದ ಅಮೋನಿಯಂ ನೈಟ್ರೇಟ್ ಅನ್ನು ಕಳಪೆಯಾಗಿ ಸಂಗ್ರಹಿಸಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಫೋಟ ಸಂಭವಿಸಿದೆ.

ವೀಡಿಯೊ 2

ವೈರಲ್ ವಿಡಿಯೋದಿಂದ ಕೆಲವು ಕೀಫ್ರೇಮ್ಸ್ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ 07 ಆಗಸ್ಟ್ 2018 ರಂದು ಡೈಲಿ ಮೇಲ್ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ಮೂಲ ವಿಡಿಯೋಗೆ (ಆರ್ಕೈವ್ ಮಾಡಲಾಗಿದೆ) ನಮ್ಮನ್ನು ಕರೆದೊಯ್ಯಿತು, “ಇಟಲಿಯಲ್ಲಿ ಟ್ಯಾಂಕರ್ ಟ್ರಕ್ ಸ್ಫೋಟಗೊಂಡ ಕ್ಷಣವನ್ನು ಸಿಸಿಟಿವಿ ಸೆರೆಹಿಡಿಯುತ್ತದೆ.”
ಆಗಸ್ಟ್ 06, 2018 ರಂದು ಬೊಲೊಗ್ನಾ ವಿಮಾನ ನಿಲ್ದಾಣದ ಬಳಿಯ ಮೋಟಾರುಮಾರ್ಗ ಸೇತುವೆಯಲ್ಲಿ ಪೆಟ್ರೋಲ್ ಟ್ಯಾಂಕರ್ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ತೋರಿಸುವ ಇಟಲಿಯ ಸಿಸಿಟಿವಿ ದೃಶ್ಯಾವಳಿಗಳು ವಿಡಿಯೋ ವಿವರಣೆಯಿಂದ ತಿಳಿದುಬಂದಿದೆ. ಬೆಂಕಿಯಿಂದ ಸುಡುತ್ತಿದ್ದ ವಾಹನಗಳು ನಂತರ ಭಾರಿ ಸ್ಫೋಟಕ್ಕೆ ಕಾರಣವಾದವು. ಟ್ಯಾಂಕರ್ ನ 41 ವರ್ಷದ ಚಾಲಕನನ್ನು ಬಲಿಪಶುಗಳಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ. ಸುಮಾರು 70 ಜನರು ಗಾಯಗೊಂಡಿದ್ದಾರೆ, ಕೆಲವರು ಗಂಭೀರ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ.
ವೀಡಿಯೊ 3

ವೈರಲ್ ವಿಡಿಯೋದಿಂದ ಕೆಲವು ಕೀಫ್ರೇಮ್ಸ್ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, 15 ಅಕ್ಟೋಬರ್ 2024 ರ ದಿನಾಂಕದ ಅದೇ ವಿಡಿಯೋವನ್ನು ಒಳಗೊಂಡಿರುವ ಸಬ್ಎಕ್ಸ್ ನ್ಯೂಸ್ನ ಎಕ್ಸ್ ಪೋಸ್ಟ್ಗೆ (ಆರ್ಕೈವ್ ಮಾಡಲಾಗಿದೆ) ನಮ್ಮನ್ನು ಕರೆದೊಯ್ಯಿತು. ರಷ್ಯಾದ ಚೆಚೆನ್ ಗಣರಾಜ್ಯದ ರಾಜಧಾನಿ ಗ್ರೋಜ್ನಿಯಲ್ಲಿರುವ ಇಂಧನ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೋಸ್ಟ್ ಸೂಚಿಸಿದೆ.
Four dead after fuel station blast in Chechnya, ministry says
By Reuters
October 12, 20249:53 AM CDT
Updated 3 days agoMOSCOW, Oct 12 (Reuters) – Two children were among four people who were killed on Saturday after a blast at a fuel station in the Chechen capital Grozny, the… pic.twitter.com/It9MifMvFi
— SubX.News® (@SubxNews) October 15, 2024
ಎಕ್ಸ್ ಪೋಸ್ಟ್ನಿಂದ ಸುಳಿವು ಪಡೆದು, ಸಿಎನ್ಎನ್-ನ್ಯೂಸ್ 18 ಯೂಟ್ಯೂಬ್ನಲ್ಲಿ ಪ್ರಕಟವಾದ ವಿಡಿಯೋವನ್ನು (ಆರ್ಕೈವ್ ಮಾಡಲಾಗಿದೆ) ನಾವು ಕಂಡುಕೊಂಡಿದ್ದೇವೆ, ಇದು ವೈರಲ್ ವಿಡಿಯೋವಿಗೆ ಹೋಲಿಕೆಯಾಗುತ್ತದೆ. ಅಕ್ಟೋಬರ್ 12, 2024 ರಂದು ಗ್ರೋಜ್ನಿ ಇಂಧನ ಕೇಂದ್ರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವಿವರಣೆಯಲ್ಲಿ ತಿಳಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹಳೆಯ ಮತ್ತು ಸಂಬಂಧವಿಲ್ಲದ ಫೋಟೋಗಳು ಮತ್ತು ವಿಡಿಯೋಗಳನ್ನು ಜೈಪುರ ಗ್ಯಾಸ್ ಟ್ಯಾಂಕರ್ ಸ್ಫೋಟದೊಂದಿಗೆ ಸಂಪರ್ಕಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿ: ತಿರುಮಲದ ತಿರುಪತಿ ದೇವಾಲಯವನ್ನು ತೋರಿಸುವ ವಿಡಿಯೋ ಎಂದು ಅಲಿಪಿರಿಯ ಅದರ ಪ್ರತಿಕೃತಿ ದೇವಾಲಯದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ



