2025ರ ಜನವರಿ 1ರಂದು ಟೆಕ್ಸಾಸ್ನ ಫೋರ್ಟ್ ವರ್ತ್ ನಗರದಲ್ಲಿ ಅನೇಕ ಕಾರುಗಳು ಮತ್ತು ಟ್ರಕ್ಗಳು ಒಂದಕ್ಕೊಂದು ಡಿಕ್ಕಿ ಹೊಡೆದಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ಬೀಕರ ದೃಶ್ಯಗಳು” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ವೈರಲ್ ಆಗುತ್ತಿದೆ.
“ಅಯ್ಯೋ, ಇದು ಭಯಾನಕವಾಗಿದೆ! ಜನವರಿ 1 ರಂದು ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ಈ ಘಟನೆ ಸಂಭವಿಸಿದೆ. ಭಾರಿ ಕಾರ್ ಧ್ವಂಸ!” ಎಂಬ ಶೀರ್ಷಿಕೆಯೊಂದಿಗೆ ಒಬ್ಬ ವ್ಯಕ್ತಿ ಟ್ವಿಟರ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಇನ್ಸ್ಟಾಗ್ರಾಮ್ ವಿಡಿಯೋ 23 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಫ್ಯಾಕ್ಟ್ ಚೆಕ್
2021ರ ಫೆಬ್ರವರಿ 11 ರಂದು ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ಹಿಮಭರಿತ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿ ಆರು ಜನರು ಮರಣ ಹೊಂದಿದ್ದರು ಎಂದು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಪತ್ತೆಹಚ್ಚಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ಕುರಿತು ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದ ಕೀಫ್ರೇಮ್ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, ಅಪಘಾತದ ಬಗ್ಗೆ ಸಂಚಲನ ಸೃಷ್ಟಿಸಿದ ವಿಡಿಯೋ ತುಣುಕು ಲಭ್ಯವಾಗಿದೆ. ಸೆಪ್ಟೆಂಬರ್ 2024ರಲ್ಲಿ ಯ್ಯೂಟೂಬ್ ಚಾನಲ್ನಲ್ಲಿ ಹಂಚಿಕೊಳ್ಳಲಾಗಿದೆ. 2021ರ ಫೆಬ್ರವರಿ 11ರಂದು ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ಈ ಘಟನೆ ನಡೆದಿದೆ ಎಂದು ವಿಡಿಯೋದ ವಿವರಗಳಲ್ಲಿ ಉಲ್ಲೇಖಿಸಲಾಗಿದೆ.
2021ರ ಫೆಬ್ರವರಿ 12ರಂದು ABC ನ್ಯೂಸ್ ವರದಿ ಲಭ್ಯವಾಗಿದೆ. ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 65 ಜನರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿಯ ಪ್ರಕಾರ, ಅಪಘಾತ ಸಂಭವಿಸಿದ ಹೆದ್ದಾರಿಯಲ್ಲಿನ ಟೋಲ್ ಲೇನ್ ಅಪಘಾತದ ದಿನದಂದು, ರಾತ್ರಿಯಿಡೀ ಮುಚ್ಚಲ್ಪಟ್ಟಿತ್ತು. ಏಕೆಂದರೆ ಅಗ್ನಿಶಾಮಕ ದಳಗಳು ಹಾನಿಗೊಳಗಾದ ವಾಹನಗಳನ್ನು ಪ್ರದೇಶದಿಂದ ತೆಗೆದುಕೊಂಡು ಹೋಗುವುದಕ್ಕಾಗಿ ಟೋಲ್ ಲೇನ್ ಮುಚ್ಚಲ್ಪಟ್ಟಿತ್ತು. ಫೋರ್ಟ್ ವರ್ತ್ ಪೊಲೀಸರನ್ನು ಉಲ್ಲೇಖಿಸಿ, ಶೀತಲೀಕರಣದ ಮಳೆಯಿಂದಾಗಿ ರಸ್ತೆಗಳು ಜಾರುವಂತೆ ಮಾಡಿತ್ತು. ಮಂಜುಗಡ್ಡೆಗಳು ಶೇಖರಣೆಯಾಗಿ ಅಪಘಾತಕ್ಕೆ ಕಾರಣವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
2023ರ ಜನವರಿ 18ರಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಅಪಘಾತದ ಬಗ್ಗೆ ಸಮಗ್ರ ವರದಿಯನ್ನು ಬಿಡುಗಡೆ ಮಾಡಿತ್ತು. ಅಪಘಾತದ ಮೊದಲು, ಈ ಪ್ರದೇಶದಲ್ಲಿ ತಾಪಮಾನವು ಸತತ 36 ಗಂಟೆಗಳ ಕಾಲ ಶೂನ್ಯಕ್ಕಿಂತ ಕಡಿಮೆ ಇತ್ತು. ಅಪಘಾತದ ಸಮೀಪದಲ್ಲಿ ಎರಡು ದಕ್ಷಿಣದ ಟೋಲ್ ಲೇನ್ಗಳು ಮಂಜುಗಡ್ಡೆಯ ಶೇಖರಣೆಯನ್ನು ತಡೆಗಟ್ಟಲು ಪೂರ್ವಸಿದ್ಧತೆ ವಹಿಸಿದ್ದವು. ಆದರೆ, ಮಳೆ ಮತ್ತು ಮಂಜಿನಿಂದಾಗಿ ಹೆದ್ದಾರಿಯಲ್ಲಿ ಈ ಮಾರಣಾಂತಿಕ ಅಪಘಾತ ಸಂಭವಿಸಿವೆ.
ಫೆಬ್ರವರಿ 2021ರಲ್ಲಿ, ಯುನೈಟೆಡ್ ಸ್ಟೇಟ್ಸ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಶೀತ ಸ್ನ್ಯಾಪ್ಗಳಲ್ಲಿ ಒಂದನ್ನು ಕಂಡಿತು ಮತ್ತು ಘನೀಕರಿಸುವ ಹವಾಮಾನ ಮತ್ತು ಬ್ಲ್ಯಾಕೌಟ್ಗಳನ್ನು ಕಂಡ US ರಾಜ್ಯಗಳಲ್ಲಿ ಟೆಕ್ಸಾಸ್ ಅತಿ ಹೆಚ್ಚು ಪೀಡಿತ ರಾಜ್ಯಗಳಲ್ಲಿ ಒಂದಾಗಿದೆ. 2021ರ ಫೆಬ್ರವರಿ 11ರಂದು ಪ್ರಾರಂಭವಾದ ತೀವ್ರ ಚಳಿಗಾಲದ ಚಂಡಮಾರುತದ ಕಾರಣದಿಂದಾಗಿ ಟೆಕ್ಸಾಸ್ನಲ್ಲಿ ಆ ಸಮಯದಲ್ಲಿ ಅಧ್ಯಕ್ಷ ಜೋ ಬೆಡನ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದ – ಅಪಘಾತದ ದಿನವಾಗಿತ್ತು. ಫೆಬ್ರವರಿ 2021ರ ಚಳಿಗಾಲದ ಚಂಡಮಾರುತದಿಂದಾಗಿ 246 ಜನರು ಸಾವನ್ನಪ್ಪಿದ್ದಾರೆ ಎಂದು ಟೆಕ್ಸಾಸ್ ರಾಜ್ಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹೊಸ ವರ್ಷದ ದಿನ ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ಭಾರಿ ಅಪಘಾತ ನಡೆದಿದೆ ಎಂದು 2021ರ ಹಳೆಯ ವಿಡಿಯೋವನ್ನು ಸುಳ್ಳು ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

