ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಪ್ರಚೋದನಕಾರಿ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು ಎಂಬ ನಾಲ್ಕು ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಬಳಕೆದಾರರು ಟ್ವಿಟರ್ ಪೋಸ್ಟ್ನಲ್ಲಿ ಬಿಜೆಪಿ ಸಂಸದೆ ಮತ್ತು ನಟಿ-ನಿರ್ದೇಶಕಿ ಕಂಗನಾ ರನೌತ್ ಅವರನ್ನು ಉಲ್ಲೇಖಿಸಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಗಾಂಧಿಯವರ ಜೀವನ ಚರಿತ್ರೆಯಾದ “ಎಮರ್ಜೆನ್ಸಿ” ಚಿತ್ರದಲ್ಲಿ ಮಾಜಿ ಪ್ರಧಾನಿಯ ಈ ಪೋಟೋಗಳನ್ನು ಏಕೆ ಚಲನಚಿತ್ರದಲ್ಲಿ ತೋರಿಸಿಲ್ಲ ಎಂದು ಬರೆದುಕೊಂಡಿದ್ದಾರೆ.
ಸಿಂಗ್ ಸಾಬ್ ಎಂಬ ಖಾತೆಯ ಹೆಸರಿನ ಪೋಸ್ಟ್ನಲ್ಲಿ “ನನ್ನ ನಂಬಿಕೆಯ ಪ್ರಕಾರ “@KanganaTeam ತಮ್ಮ ಪ್ರೊಪಗಂಡ ಚಿತ್ರದಲ್ಲಿ ಇಂದಿರಾ ಗಾಂಧಿಯವರ ವೇಶ್ಯಾವಾಟಿಕೆಯನ್ನು ಬಹಿರಂಗಪಡಿಸಿದೆ. ಅವರು ರಷ್ಯಾ ಮತ್ತು ಸೋವಿಯತ್ ಒಕ್ಕೂಟದ ಕೆಜಿಬಿ ಏಜೆಂಟ್ಗಳನ್ನು ಹಾಸಿಗೆಯಲ್ಲಿ ಹೇಗೆ ಮನರಂಜಿಸಿದರು. ರಶ್ಶಿಯನ್ ಕೆಜಿಬಿ ಏಜೆಂಟ್ಸ್ ಬರೆದ “Mitrokhin – The KGB in the World” ಎಂಬ ಪುಸ್ತಕದಲ್ಲಿ ಎಲ್ಲವೂ ದಾಖಲಾಗಿದೆ” ಎಂದು ಪೋಟೋಗಳನ್ನು ಹಂಚಿಕೊಳ್ಳಲಾಗಿದೆ. ಈ ಪೋಟೋಗಳ ನಿಜಸ್ವರೂಪವನ್ನು ಕನ್ನಡ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್ ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಟೋಗಳ ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ಮೊದಲು ನಾವು ವೈರಲ್ ಪೋಟೋದಲ್ಲಿ ಉಲ್ಲೇಖಿಸಲಾದ “ದಿ ಮಿಟ್ರೋಖಿನ್ ದಿ ಕೆಜಿಬಿ ಇನ್ ದಿ ವರ್ಲ್ಡ್” ಪುಸ್ತಕದಲ್ಲಿ ಭಾರತದ ಕುರಿತು ಆಯ್ದ ಭಾಗಗಳನ್ನು ಓದಿದಾಗ, ಸೋವಿಯತ್ ಒಕ್ಕೂಟದ ಪತನದ ನಂತರ ಯುನೈಟೆಡ್ ಕಿಂಗ್ಡಮ್ಗೆ ತೆರಳಿದ ಕೊಮಿಟೆಟ್ ಗೋಸುದಾರ್ಸ್ಟ್ವೆನಾಯ್ ಬೆಜೊಪಾಸ್ನೋಸ್ಟಿ (ಕೆಜಿಬಿ)ಯ ಮಾಜಿ ಆರ್ಕೈವಿಸ್ಟ್ ವಾಸಿಲಿ ನಿಕಿಟಿಚ್ ಮಿತ್ರೋಖಿನ್ ಅವರ ಅನುಭವಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ತಿಳಿದುಬಂದಿದೆ.
“ಭಾರತದೊಂದಿಗಿನ ವಿಶೇಷ ಸಂಬಂಧ ಭಾಗ 1ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಶ್ರೇಷ್ಠತೆ” ಎಂಬ ಶೀರ್ಷಿಕೆಯ 17ನೇ ಅಧ್ಯಾಯದಲ್ಲಿ, ರಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳ ಜೊತೆಗೆ ಹಿಂದಿನ ರಷ್ಯಾದ ಭದ್ರತಾ ಸಂಸ್ಥೆ ಕೆಜಿಬಿಯ ಪ್ರಭಾವವನ್ನು ಉಲ್ಲೇಖಿಸಲಾಗಿದೆ.

ಈ ಪುಸ್ತಕದಲ್ಲಿ ಭಾರತದ ಕುರಿತಾದ ಎರಡು ಅಧ್ಯಾಯಗಳಿವೆ. ರಷ್ಯನ್ನರೊಂದಿಗಿನ ಶ್ರೀಮತಿ ಗಾಂಧಿಯವರ ವೈಯಕ್ತಿಕ ಸಂಬಂಧಗಳ ಕುರಿತು ಆ ಪುಸ್ತಕದಲ್ಲಿ ಯಾವುದೇ ಮಾಹಿತಿ ಇಲ್ಲ. ಆದರೆ, ಸೂಚ್ಯಂಕ ವಿಭಾಗದಲ್ಲಿ, ಗಾಂಧಿಯವರ ಪೋಟೋವನ್ನು ತೋರಿಸಲಾಗಿದ್ದು, ಅವರ ಪಕ್ಕದಲ್ಲಿ ಇಬ್ಬರು ಪುರುಷರು ನಿಂತಿದ್ದಾರೆ. ವೈರಲ್ ಆಗಿರುವ ಪೋಟೋಗಳು ಪುಸ್ತಕದಲ್ಲಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.

ವೈರಲ್ ಪೋಟೋಗಳನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, ಆ ಪೋಟೋಗಳನ್ನು ಕಲಾವಿದರು ಮತ್ತು ಕಲಾ ಪ್ರೇಮಿಗಳಿಗಾಗಿ ಡಿಜಿಟಲ್ ಸಾಮಾಜಿಕ ವೇದಿಕೆಯಾದ ಡಿವಿಯಂಟ್ ಆರ್ಟ್ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಡಿವಿಯಂಟ್ ಆರ್ಟ್ನಲ್ಲಿ ಬಳಕೆದಾರರು ವರ್ಣಚಿತ್ರಗಳನ್ನು ಮತ್ತು ಶಿಲ್ಪದಿಂದ ತಯಾರಿಸಲಾದ ಸಾವಿರಾರು ಅನನ್ಯ ಕಲಾಕೃತಿಗಳನ್ನು ಪ್ರತಿದಿನ ಹಂಚಿಕೊಳ್ಳುತ್ತಾರೆ. “HerSofterSide” ಎಂಬ ಬಳಕೆದಾರರು ಮೇ 2023ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವೈರಲ್ ಪೋಟೋಗಳನ್ನು AI ನಿಂದ ರಚಿಸಲಾಗಿದೆಯಾ? ಎಂಬ ಅನುಮಾನಾಸ್ಪದ ಉಂಟಾಯಿತು. ಹಾಗಾಗಿ AI ಪತ್ತೆ ವೆಬ್ಸೈಟ್ಗಳಾದ ಹೈವ್ ಮಾಡರೇಶನ್ ಮತ್ತು ಸೈಟ್ಇಂಜೈನ್ ಬಳಸಿಕೊಂಡು ವೈರಲ್ ಪೋಟೋಗಳನ್ನು ಸರ್ಚ್ ಮಾಡಿದಾಗ, ಎರಡೂ ಸಾಧನಗಳು ಎಲ್ಲಾ ಚಿತ್ರಗಳು AI- ರಚಿತವಾಗಿವೆ ಎಂದು ಸ್ಪಷ್ಟಪಡಿಸಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಪ್ರಚೋದನಕಾರಿ ಪೋಟೋಗಳು ಕೃತಕ ಬುದ್ಧಿಮತ್ತೆ (AI) ಆಧಾರಿತ ಚಿತ್ರಗಳಾಗಿವೆಯೇ ಹೊರತು ನೈಜ ಪೋಟೋಗಳಲ್ಲ. ಹಾಗಾಗಿ ಇಂತಹ ಪೋಟೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check: ಪ್ಯೂರಿಫೈಯರ್ ನೀರು ಕುಡಿಯಬಾರದು ಅದರಲ್ಲಿ ಖನಿಜಗಳು ಇರುವುದಿಲ್ಲ ಎಂಬುದು ಸುಳ್ಳು

