FACT CHECK: ಮಕರ ಸಂಕ್ರಾಂತಿಯ ಪ್ರಯುಕ್ತ ಅಮಿತ್ ಶಾ ಗಾಳಿಪಟ ಹಾರಿಸಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ಮಕರ ಸಂಕ್ರಾಂತಿಯ ಸಂಭ್ರಮದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಗಾಳಿಪಟ ಹಾರಿಸಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಓರ್ವ ಬಾಲಕ ಅಮಿತ್ ಶಾ ಅವರ ಗಾಳಿಪಟವನ್ನು ಕತ್ತರಿಸಿ ಸಂಭ್ರಮಿಸುತ್ತಿರುವುದನ್ನು ಕಾಣಬಹುದು. 2025ರ ಜನವರಿ 14ರಂದು ವಿಡಿಯೋವನ್ನು ತ್ರೆಡ್‌ನಲ್ಲಿ ( ಆರ್ಕೈವ್ ಲಿಂಕ್ ) khabartak_media ಎಂಬ ಖಾತೆಯಿಂದ ಹಂಚಿಕೊಂಡಿದ್ದು, ” ಕೇಂದ್ರ ಗೃಹ ಸಚಿವ ಅಮಿತ್ ಶಾ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗಾಳಿಪಟವನ್ನು ಹಾರಿಸುತ್ತಿದ್ದಾಗ ಬಾಲಕ ಅದನ್ನು ಕತ್ತರಿಸಿದನು.” ಎಂದು…