Fact Check: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಮೇಲಿನ ದಾಳಿಯ ವೀಡಿಯೊವನ್ನು ಹಿಂದೂ ಮಹಿಳೆಯರ ಮೇಲಿನ ಕಿರುಕುಳ ವೀಡಿಯೋ ಎಂದು ತಪ್ಪಾಗಿ ಹಂಚಿಕೆ
ಬಾಂಗ್ಲಾದೇಶದಲ್ಲಿ ಮೀಸಲಾತಿ ಪ್ರತಿಭಟನೆಯ ಮಧ್ಯೆ, ಅಲ್ಪಸಂಖ್ಯಾತರ ಮೇಲಿನ ದಾಳಿಗಳ ವರದಿಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಇಸ್ಲಾಮಿಕ್ ಗುಂಪು ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದೆ ಮತ್ತು ಘಟನೆಯನ್ನು ಫೇಸ್‌ಬುಕ್‌ನಲ್ಲಿ (ಇಲ್ಲಿ) ಲೈವ್ ಸ್ಟ್ರೀಮ್ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು ಜುಲೈ 2024 ರಲ್ಲಿ ಪ್ರಾರಂಭವಾದ ಬಾಂಗ್ಲಾದೇಶದ ಮೀಸಲಾತಿ ವಿರೋಧಿ ಆಂದೋಲನ ನಂತರ ಮಾರಣಾಂತಿಕ ಪ್ರತಿಭಟನೆಗಳು ಪ್ರಮುಖ ಸರ್ಕಾರಿ ವಿರೋಧಿ ದಂಗೆಯಾಗಿ ವಿಕಸನಗೊಂಡಿದೆ….