ಅಮೇರಿಕದಿಂದ 104 ಭಾರತೀಯರನ್ನು ಗಡೀಪಾರು ಮಾಡಿದ ವಿಷಯವು ಸಂಸತ್ತಿನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಂಸತ್ತಿನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈ ಸಂದರ್ಭದಲ್ಲಿ, ಯುದ್ಧ ವಿಮಾನದಲ್ಲಿ ಜನರಿಗೆ ಕೈಕೋಳ ತೊಡಿಸಿರುವುದನ್ನು ತೋರಿಸುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋ ಅಮೆರಿಕದಿಂದ ಗಡೀಪಾರು ಮಾಡಲಾದ ಭಾರತೀಯರದ್ದಾಗಿದೆ ಎಂದು ಹೇಳಿಕೊಂಡು ಶೇರ್ ಮಾಡಲಾಗುತ್ತಿದೆ.
ಫೇಸ್ಬುಕ್ನಲ್ಲಿ ‘ಅಜಯ್ ಸಿಂಗ್ ಚಿಂಪಾ’ ಅವರು ವೈರಲ್ ಪೋಸ್ಟ್ (ಆರ್ಕೈವ್ ಲಿಂಕ್ ) ಅನ್ನು ಹಂಚಿಕೊಳ್ಳುವಾಗ, “ಹೌಡಿ ಮೋದಿ – ಟ್ರಂಪ್,,,,,,,,,, ಎಂದು ಡಂಗೂರ ಸಾರಿದ್ರು… ಭಾರತೀಯರು ಅಮೆರಿಕದಲ್ಲಿ ಅಕ್ರಮ ವಲಸಿಗರಾಗಿದ್ದರೆ,,,,, ಅವರ ವಾಪಸಾತಿ ಗೌರವಯುತವಾಗಿರಬೇಕಿತ್ತು,,,,, ಭಾರತೀಯರನ್ನು ಕೈಕೋಳ ಹಾಕಿ ಭಾರತಕ್ಕೆ ವಾಪಸ್ ಕಳುಹಿಸುವಷ್ಟು ಭಾರತ-ಅಮೆರಿಕ ಸಂಬಂಧ ಹಾಳಾಗಿದೆಯೇ?,,,,,, ಪ್ರತಿಯೊಬ್ಬ ಭಾರತೀಯನೂ ಇಂತಹ ವಿದೇಶಾಂಗ ನೀತಿಯ ಮೇಲೆ ಉಗುಳಬೇಕು” ಎಂದು ಬರೆದುಕೊಂಡಿದ್ದಾರೆ.

ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿರುವ ಅನೇಕ ಬಳಕೆದಾರರು ಈ ಫೋಟೋವನ್ನು ಇದೇ ರೀತಿಯ ಸಂದೇಶದೊಂದಿಗೆ ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್
ಸುದ್ದಿ ವರದಿಗಳ ಪ್ರಕಾರ, ಫೆಬ್ರವರಿ 5ರಂದು, ಅಮೆರಿಕದ ವಿಮಾನವೊಂದು ಪಂಜಾಬ್ನ ಅಮೃತಸರದಲ್ಲಿರುವ ಶ್ರೀ ಗುರು ರಾಮದಾಸ್ ಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಅಮೆರಿಕದಿಂದ ಗಡೀಪಾರು ಮಾಡಲ್ಪಟ್ಟ 104ಕ್ಕೂ ಹೆಚ್ಚು ಭಾರತೀಯರನ್ನುಹೊತ್ತು ತಂದಿತ್ತು. ಗಡೀಪಾರು ಮಾಡಲಾದ ವಲಸಿಗರಲ್ಲಿ ಹೆಚ್ಚಿನವರು ಗುಜರಾತ್, ಪಂಜಾಬ್ ಮತ್ತು ಹರಿಯಾಣದವರು.
ಇತರೆ ಹಲವಾರು ವರದಿಗಳು ಗಡೀಪಾರು ಮಾಡಲಾದ ಭಾರತೀಯ ವಲಸಿಗರ ಛಾಯಾಚಿತ್ರಗಳು ಮತ್ತು ಅವರ ಕಥೆಗಳನ್ನು ಸಹ ಉಲ್ಲೇಖಿಸುತ್ತವೆ, ಆದರೆ ಅವು ವೈರಲ್ ಪೋಸ್ಟ್ನಲ್ಲಿ ಕಂಡುಬರುವ ಚಿತ್ರಕ್ಕೆ ಹೊಂದಿಕೆಯಾಗುವುದಿಲ್ಲ. ವೈರಲ್ ಫೋಟೋದ ಮೂಲ ಮೂಲವನ್ನು ಕಂಡುಹಿಡಿಯಲು, ನಾವು ರಿವರ್ಸ್ ಇಮೇಜ್ ಸರ್ಚ್ನ ಸಹಾಯವನ್ನು ಪಡೆದುಕೊಂಡಿದ್ದೇವೆ ಮತ್ತು ಹುಡುಕಾಟದಲ್ಲಿ, ಈ ಫೋಟೋ ಗ್ವಾಟೆಮಾಲಾದಿಂದ ಬಂದ ಅಕ್ರಮ ವಲಸಿಗರದ್ದು ಎಂದು ಅನೇಕ ವರದಿಗಳಲ್ಲಿ ನಮಗೆ ಕಂಡುಬಂದಿದೆ.
ಈ ಬಗ್ಗೆ ಫ್ಯಾಕ್ಟ್ಚೆಕರ್ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್ ಟ್ವೀಟ್ ಮಾಡಿದ್ದು, “ಅಮೆರಿಕದಿಂದ ಭಾರತೀಯರನ್ನು ಗಡೀಪಾರು ಮಾಡುತ್ತಿರುವ ಸುದ್ದಿ ವರದಿಗಳಿವೆ. ಸುದ್ದಿ ವಾಹಿನಿಗಳು ಮತ್ತು ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳು ಅಮೆರಿಕದ ವಲಸಿಗರನ್ನು ಕೈಕೋಳ ಹಾಕಿ ವಾಪಸ್ ಕಳುಹಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿವೆ. ಆದರೆ ಈ ವೈರಲ್ ಚಿತ್ರಗಳು ಗ್ವಾಟೆಮಾಲಾ, ಈಕ್ವೆಡಾರ್ ಮತ್ತು ಕೊಲಂಬಿಯಾಕ್ಕೆ ಗಡೀಪಾರು ಮಾಡಲಾಗುತ್ತಿರುವ ವಲಸಿಗರ ಚಿತ್ರಗಳಾಗಿವೆ, ಹಲವಾರು ಭಾರತೀಯ ಸುದ್ದಿ ವರದಿಗಳು ಹೇಳಿಕೊಂಡಿರುವಂತೆ ಭಾರತೀಯರದ್ದಲ್ಲ” ಎಂದು ಸತ್ಯಶೋಧನೆ ಮಾಡಿರುವುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಗಮನಿಸಿದೆ.
There are news reports of Indians being deported from the US. News channels and Several social media accounts have shared images of US migrants being sent back by handcuffing them. But these viral images are of immigrants being deported to Guatemala, Ecuador and Colombia, not of… pic.twitter.com/yY5sjGiPFn
— Mohammed Zubair (@zoo_bear) February 5, 2025
ಇದಲ್ಲದೇ, 2025ರ ಜನವರಿ 30ರಂದು ಫಾಕ್ಸ್ ನ್ಯೂಸ್.ಕಾಮ್ ವರದಿಯ ಪ್ರಕಾರ , ಇದು ಅಮೆರಿಕದಿಂದ ಗ್ವಾಟೆಮಾಲಾಗೆ ಗಡೀಪಾರು ಮಾಡಲಾದ ಅಕ್ರಮ ವಲಸಿಗರ ಚಿತ್ರ ಎಂದು ತಿಳಿದು ಬಂದಿದೆ.
ಈ ಫೋಟೋವನ್ನು elsoldeyakima.com ವರದಿಯಲ್ಲಿಯೂ ಬಳಸಲಾಗಿದೆ . ” ಮಾಸ್ಕ್ ಧರಿಸಿ ಕೈಕೋಳ ಧರಿಸಿದ ವಲಸಿಗರು ಗುರುವಾರ, 2025ರ ಜನವರಿ 30ರಂದು ಟೆಕ್ಸಾಸ್ನ ಎಲ್ ಪಾಸೊದಲ್ಲಿರುವ ಫೋರ್ಟ್ ಬ್ಲಿಸ್ನಲ್ಲಿ ಮಿಲಿಟರಿ ವಿಮಾನದಲ್ಲಿ ಗ್ವಾಟೆಮಾಲಾಗೆ ಗಡೀಪಾರು ಮಾಡುತ್ತಿರುವುದು” ಎಂದು ವರದಿ ತಿಳಿಸಿದೆ.
Independent.co.uk ನ ಸುದ್ದಿ ವರದಿಯು ಈ ಚಿತ್ರವು ಗ್ವಾಟೆಮಾಲಾಗೆ ಕಳುಹಿಸಲಾದ ಅಕ್ರಮ ವಲಸಿಗರದ್ದಾಗಿದೆ ಎಂದು ಹೇಳಿದೆ. ಎಪಿ ನ್ಯೂಸ್ನ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ಕೂಡ ಅದೇ ಫೋಟೋವನ್ನು ಹಂಚಿಕೊಂಡಿದ್ದು, ಅದು ಗ್ವಾಟೆಮಾಲಾಗೆ ಗಡಿಪಾರಾದ ನಾಗರಿಕರದ್ದು ಎಂದು ಹೇಳಿಕೊಂಡಿದೆ.

ನಮ್ಮ ತನಿಖೆಯಲ್ಲಿ ವೈರಲ್ ಆಗಿರುವ ಫೋಟೋ ಭಾರತಕ್ಕೆ ಗಡೀಪಾರು ಮಾಡಲಾದ ವಲಸಿಗರದ್ದಲ್ಲ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ. ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ಅಮೆರಿಕದಲ್ಲಿ ವಾಸಿಸುತ್ತಿರುವ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಇದರ ಅಡಿಯಲ್ಲಿ ಫೆಬ್ರವರಿ 5ರಂದು ಭಾರತೀಯ ವಲಸಿಗರ ಮೊದಲ ಬ್ಯಾಚ್ ಅನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನವು ಅಮೃತಸರದಲ್ಲಿ ಬಂದಿಳಿದಿದೆ
ಆದರೆ, ಭಾರತಕ್ಕೆ ಅಕ್ರಮ ವಲಸಿಗರ ಆಗಮನದ ನಂತರ, ರಾಜಕೀಯ ಕೋಲಾಹಲ ಭುಗಿಲೆದ್ದಿತು ಮತ್ತು ವಿರೋಧ ಪಕ್ಷಗಳು ರಸ್ತೆಯಲ್ಲಿ ಮತ್ತು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ್ದವು. ವರದಿಗಳ ಪ್ರಕಾರ , ಅಮೇರಿಕದ ಯುದ್ಧ ವಿಮಾನದ ಮೂಲಕ ಇಲ್ಲಿಗೆ ಕರೆತರಲಾದ ಭಾರತೀಯ ವಲಸಿಗರ ಕೈ ಮತ್ತು ಕಾಲುಗಳಿಗೆ ಕೋಳ ತೊಡಿಸಲಾಗಿತ್ತು ಎಂದು ತಿಳಿದು ಬಂದಿದೆ.
ಅಮೆರಿಕದ ಗಡಿ ಗಸ್ತು ಪಡೆಯ ಮುಖ್ಯಸ್ಥರು (ಯುಬಿಎಸ್ಪಿ) ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ನಿಂದ ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕದ ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ಕಳುಹಿಸಲಾಗುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಅಕ್ರಮ ಭಾರತೀಯ ವಲಸಿಗರ ಕೈ ಮತ್ತು ಕಾಲುಗಳಿಗೆ ಕೋಳ ತೊಡಿಸಿರುವುದನ್ನು ಕಾಣಬಹುದು.
USBP and partners successfully returned illegal aliens to India, marking the farthest deportation flight yet using military transport. This mission underscores our commitment to enforcing immigration laws and ensuring swift removals.
If you cross illegally, you will be removed. pic.twitter.com/WW4OWYzWOf
— Chief Michael W. Banks (@USBPChief) February 5, 2025
ರಾಜ್ಯಸಭೆಯಲ್ಲಿ ಹೇಳಿಕೆ ನೀಡುತ್ತಾ ಜೈಶಂಕರ್ರವರು 2009 ಮತ್ತು 2024 ರ ನಡುವೆ ಗಡೀಪಾರು ಮಾಡಲಾದ ಭಾರತೀಯರ ದತ್ತಾಂಶವನ್ನು ಸದನದ ಮುಂದೆ ಮಂಡಿಸಿದ್ದು, ಈ ಪ್ರಕ್ರಿಯೆ ಹೊಸದಲ್ಲ ಎಂದು ಹೇಳಿದ್ದಾರೆ. 2009 ಮತ್ತು 2014 ರ ನಡುವೆ, ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಿ ವಾಪಸ್ ಕಳುಹಿಸಲಾಗಿದೆ. 2009ರಲ್ಲಿ 734, 2016ರಲ್ಲಿ 1303 ಭಾರತೀಯರನ್ನು ಗಡೀಪಾರು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Speaking in Rajya Sabha.
https://t.co/t7EnlHYvtn— Dr. S. Jaishankar (@DrSJaishankar) February 6, 2025
ಕೈಕಾಲುಗಳನ್ನು ಕೋಳ ಹಾಕಿ ಗಡೀಪಾರು ಮಾಡುವ ವಿಷಯದ ಕುರಿತು ಮಾತನಾಡಿದ ಅವರು, “ವಿಮಾನದ ಮೂಲಕ ಗಡೀಪಾರು ಮಾಡಲು ICE ಜಾರಿಗೆ ತಂದಿರುವ SoP 2012ರಿಂದ ಜಾರಿಯಲ್ಲಿದೆ” ಎಂದು ಹೇಳಿದ್ದು, “ಮಹಿಳೆಯರು ಮತ್ತು ಮಕ್ಕಳಿಗೆ ಕೋಳ ತೊಡಿಸಬಾರದು ಎಂದು ಭಾರತದಿಂದ ICEಗೆ ತಿಳಿಸಲಾಗಿದೆ” ಎಂದು ಅವರು ಹೇಳಿದರು.
ಒಟ್ಟಾರೆಯಾಗಿ ಹೇಳುವುದಾದರೆ, 104 ಭಾರತೀಯ ವಲಸಿಗರನ್ನು ಅಮೆರಿಕದಿಂದ ಗಡೀಪಾರು ಮಾಡಿ ಭಾರತಕ್ಕೆ ಕಳುಹಿಲಾಗಿದೆ ಎಂಬುದು ನಿಜ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈರಲ್ ಆಗುತ್ತಿರುವ ಚಿತ್ರವು ಭಾರತದಿಂದ ಗಡೀಪಾರು ಮಾಡಲಾದ ಜನರದ್ದಲ್ಲ, ಬದಲಾಗಿ ಅಮೆರಿಕದಿಂದ ಗ್ವಾಟೆಮಾಲಾಗೆ ಗಡೀಪಾರು ಮಾಡಲಾದ ಅಕ್ರಮ ವಲಸಿಗರದ್ದಾಗಿದೆ.
ಇದನ್ನೂ ಓದಿ : Fact Check | ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ರೈಲಿಗಾಗಿ ಕಾಯುತ್ತಿರುವ ಹಳೆಯ ಫೋಟೋ ಮಹಾ ಕುಂಭಮೇಳದ್ದು ಎಂದು ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

