Fact Check | “ನಾನು ರೈತನ ಮಗ, ಯಾರಿಗೂ ಹೆದರುವುದಿಲ್ಲ” ಎಂದು ಜಗದೀಪ್ ಧನಕರ್ ಇತ್ತೀಚೆಗೆ ಹೇಳಿದ್ದಾರೆ ಎಂಬುದು ಸುಳ್ಳು

ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ಜುಲೈ 21, 2025 ರಂದು ಅನಿರೀಕ್ಷಿತವಾಗಿ ಆರೋಗ್ಯ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು . ಅಧ್ಯಕ್ಷೆ ದ್ರೌಪದಿ ಮುರ್ಮು ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ , ತಮ್ಮ ವೈದ್ಯಕೀಯ ಆರೈಕೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಲು ತಾವು ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಅವರ ಅವಧಿ ಪೂರ್ಣಗೊಳ್ಳುವ ಸುಮಾರು ಎರಡು ವರ್ಷಗಳ ಮೊದಲು ಅವರ ನಿರ್ಧಾರ ಬಂದಿದ್ದು, ವ್ಯಾಪಕ ಊಹಾಪೋಹ ಮತ್ತು ರಾಜಕೀಯ ಚರ್ಚೆಗೆ ಕಾರಣವಾಯಿತು.ಈಗ ಅಂತಹದ್ದೇ…

Read More

Fact Check | ಗುಜರಾತ್‌ನಲ್ಲಿ ತೇಲುವ ಸೋಲರ್‌ ಪ್ಲಾಂಟ್‌ ನಿರ್ಮಿಸಲಾಗಿದೆ ಎಂದು ಚೀನಾದ ವಿಡಿಯೋ ಹಂಚಿಕೊಂಡ ಬಲಪಂಥೀಯರು

ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಎಕ್ಸ್‌ನಲ್ಲಿ, ಒಂದು ವಿಡಿಯೋ ವೈರಲ್ ಆಗಿದ್ದು, ಅದನ್ನು “ಗುಜರಾತ್ ಮಾಡಲ್” ಎಂದು ಕರೆದು, ಗುಜರಾತ್‌ನಲ್ಲಿ ತೇಲುವ ಸೋಲಾರ್ ಪ್ಲಾಂಟ್‌ನಿಂದ ಬೃಹತ್ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹಲವು ಬಲಪಂಥೀಯ ಖಾತೆಗಳು ಈ ವಿಡಿಯೋವನ್ನು ಹಂಚಿಕೊಂಡು, “ಅಭಿವೃದ್ಧಿ ಎಂದರೆ ಇದು, ಉಚಿತ ಕರೆಂಟ್ ಕೊಟ್ಟು ಬೆಲೆ ಏರಿಸುವುದು ಅಭಿವೃದ್ಧಿ ಅಲ್ಲ” ಎಂದು ಬರೆದಿದ್ದಾರೆ. வளர்ச்சி நோக்கி குஜராத் மாடல்!! குஜராத்தில் பாஜக அரசு ஏற்ப்படுத்தி இருக்கும் Floating Solar plant…!! வருடம் தோறும்…

Read More

Fact Check | ಇಂದೋರ್‌ನಲ್ಲಿ ರಸ್ತೆಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ನೀರು ಸುರಿಯಲಾಗಿಲ್ಲ

ಭಾರತ ಸರ್ಕಾರವು ಇತ್ತೀಚೆಗೆ ‘ಸ್ವಚ್ಛ ಸರ್ವೇಕ್ಷಣ್ 2024-25’ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಇಂದೋರ್ ನಗರವು ಮತ್ತೆ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಗೌರವಕ್ಕೆ ಭಾಜನವಾಗಿದೆ. ಈ ಸುದ್ದಿಯ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ರಸ್ತೆಯ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವ್ಯಕ್ತಿಯ ಮೇಲೆ ಟ್ಯಾಂಕರ್‌ನಿಂದ ನೀರು ಸಿಂಪಡಿಸುವ ದೃಶ್ಯ ಕಾಣಿಸುತ್ತದೆ. ಈ ಘಟನೆ ಇಂದೋರ್‌ನಲ್ಲಿ ನಡೆದಿದೆ ಎಂಬ ಆರೋಪದೊಂದಿಗೆ ಹಲವರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಹಲವರು…

Read More

Fact Check | ಚಂದ್ರಶೇಖರ್‌ ಅಜಾದ್‌ ಜೈಲಿನಲ್ಲಿದ್ದರು ಮತ್ತು ಅವರಿಗೆ ನೆಹರು, ಗಾಂಧಿ ನೆರವು ನೀಡಲಿಲ್ಲ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣಗಳಲ್ಲಿ ಚಂದ್ರಶೇಖರ ಆಜಾದ್‌ಗೆ ಸಂಬಂಧಿಸಿದ ಒಂದು ಹೇಳಿಕೆ ವೈರಲ್ ಆಗುತ್ತಿದೆ. ಈ ಹೇಳಿಕೆಯ ಪ್ರಕಾರ, “ಚಂದ್ರಶೇಖರ ಆಜಾದ್ ವಿಚಾರಣೆ ಎದುರಿಸುತ್ತಿದ್ದಾಗ, ಕಾನೂನು ಸಹಾಯಕ್ಕಾಗಿ ಮೋತಿಲಾಲ್ ನೆಹರು ಅವರನ್ನು ಸಂಪರ್ಕಿಸಿದರು, ಆದರೆ ನೆಹರು ಸಹಾಯ ನೀಡಲು ನಿರಾಕರಿಸಿದರು. ಇದಲ್ಲದೆ, ಮಹಾತ್ಮ ಗಾಂಧಿಯವರು ಆಜಾದ್ ಮತ್ತು ಅವರ ಕ್ರಾಂತಿಕಾರಿಗಳ ಹೋರಾಟವನ್ನು ‘ಹಿಂಸಾತ್ಮಕ’ ಎಂದು ಖಂಡಿಸಿದ್ದರು. ಆಲ್ಫ್ರೆಡ್ ಪಾರ್ಕ್‌ನಲ್ಲಿ ಬ್ರಿಟಿಷ್ ಪೊಲೀಸರಿಂದ ಸುತ್ತುವರೆಯಲ್ಪಟ್ಟಾಗ ಕಾಂಗ್ರೆಸ್‌ನಿಂದ ಯಾವುದೇ ಬೆಂಬಲ ಇಲ್ಲದೆ ಆಜಾದ್ ಹುತಾತ್ಮರಾದರು” ಎಂದು ಆರೋಪಿಸಲಾಗಿದೆ. ಈ ಪೋಸ್ಟ್‌ಗಳು ಆಜಾದ್‌ರನ್ನು ಕಾಂಗ್ರೆಸ್…

Read More

Fact Check | ಕೇಂದ್ರ ಸರ್ಕಾರವೇ ಒತ್ತಡ ಹೇರಿ ಉಪರಾಷ್ಟ್ರಪತಿ ಅವರಿಂದ ರಾಜೀನಾಮೆ ಪಡೆದಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಒಂದು ಹೇಳಿಕೆ ವೈರಲ್ ಆಗುತ್ತಿದೆ. ಈ ಹೇಳಿಕೆಯ ಪ್ರಕಾರ, “ಆಪರೇಷನ್ ಸಿಂಧೂರ್‌ನಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಭಾರತಕ್ಕೆ ಜಾಗತಿಕ ಮುಜುಗರ ಮತ್ತು ದೇಶದಲ್ಲಿ ರಾಜಕೀಯ ಕಂಪನಕ್ಕೆ ಕೂಡ ಇದು ಕಾರಣವಾಗಿದೆ, ಇದರಿಂದಾಗಿ ಜಗದೀಪ್ ಧನಕರ್ ಸ್ವಪಕ್ಷದ ವಿರುದ್ಧ ಅಸಮಾಧಾನವನ್ನು ಹೊಂದಿದ್ದರು, ಹೀಗಾಗಿ ವಿಪಕ್ಷಗಳಿಗೆ ಈ ಕುರಿತು ಸಂಸತ್ತಿನಲ್ಲಿ ಹೆಚ್ಚು ಅವಧಿಗಳ ಕಾಲ ಚರ್ಚಿಸಲು ಅವಕಾಶ ನೀಡಿದ್ದರು, ಇದರಿಂದ ಅವರ ಪಕ್ಷವೇ ಧನಕರ್‌ ಅವರ ರಾಜೀನಾಮೆಗೆ ಒತ್ತಾಯಿಸಿತು”…

Read More

Fact Check | ಉನ್ನಾವೋದಲ್ಲಿ ಯುವತಿಗೆ ಕಿರುಕುಳ ನೀಡಿ ಏಟು ತಿಂದ ಯುವಕ ಮುಸ್ಲಿಂ ಸಮುದಾಯದವನಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದೆ. ಈ ವಿಡಿಯೋದಲ್ಲಿ “ಉನ್ನಾವೋದಲ್ಲಿ ಹಲವಾರು ದಿನಗಳಿಂದ ಕಿರುಕುಳ ನೀಡುತ್ತಿದ್ದ ಅಲೀಮ್ ಶೇಖ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಸಾರ್ವಜನಿಕ ರಸ್ತೆಯಲ್ಲಿ ಹುಡುಗಿಯೊಬ್ಬಳು ಥಳಿಸುತ್ತಿರುವುದು” ಎಂದು ಕೋಮು ಆಯಾಮದೊಂದಿಗೆ ದಾಖಲಿಸಲಾಗಿದೆ. ಈ ವಿಡಿಯೋವನ್ನು ಹಲವರು  ಮಾಹಿತಿಯೊಂದಿಗೆ ಹಂಚಿಕೊಂಡಿದ್ದಾರೆ, ಇದರಲ್ಲಿ ಆರೋಪಿಯನ್ನು  ಮುಸ್ಲಿಂ ವ್ಯಕ್ತಿಯೆಂದು ಗುರುತಿಸಲಾಗಿದೆ. ವಿಡಿಯೋ ನೋಡಿದ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಕಿಡಿ ಕಾರಿದ್ದಾರೆ. ಇದರ ಜೊತೆಗೆ ಇನ್ನೂ ಕೆಲವರು ಲವ್‌ ಜಿಹಾದ್‌ ಹೀಗೆಯೇ ಆರಂಭಗೊಳ್ಳುವ ಮೊದಲು…

Read More

Fact Check | ಅಮೆರಿಕದ ಸುಪ್ರೀಂಕೋರ್ಟ್‌ ಟ್ರಂಪ್‌ ರನ್ನು ಗಡಿಪಾರು ಮಾಡಲಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸುದ್ದಿ ವ್ಯಾಪಕವಾಗಿ ಹರಡುತ್ತಿದೆ. ಇದರ ಪ್ರಕಾರ, ಅಮೆರಿಕದ ಸುಪ್ರೀಂಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಂಬಂಧಿಸಿದಂತೆ ಆದೇಶವೊಂದನ್ನು ಹೊರಡಿಸಿದೆ ಎಂದು ಹೇಳಲಾಗಿದೆ. ಈ ಆದೇಶದಲ್ಲಿ, “ಟ್ರಂಪ್‌ ಅವರ ಪೂರ್ವಜರು ಅಮೆರಿಕಕ್ಕೆ ಅನಧಿಕೃತವಾಗಿ ಪ್ರವೇಶಿಸಿದ್ದರಿಂದ, ಟ್ರಂಪ್ ಕುಟುಂಬವು ದೇಶವನ್ನು ತೊರೆಯಬೇಕು ಮತ್ತು ಡೊನಾಲ್ಡ್ ಟ್ರಂಪ್ ತಕ್ಷಣವೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ತಿಳಿಸಲಾಗಿದೆ ಎಂದು ಹಲವರು ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್‌ಗಳನ್ನು ಆಧಾರಿಸಿ ಹಲವರು ವೈರಲ್‌ ವಿಡಿಯೋ ಪೋಸ್ಟ್‌ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ…

Read More

Fact Check | ಬಾಂಗ್ಲಾದೇಶದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ಶಿಕ್ಷಕರ ಮೇಲೆ ದಾಳಿ ನಡೆಸಿದ್ದಾರೆ ಎಂಬುದು ಸುಳ್ಳು

ಬಾಂಗ್ಲಾದೇಶದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ತಮ್ಮ ಶಿಕ್ಷಕನ ಮೇಲೆ ದಾಳಿ ಮಾಡುತ್ತಿರುವ ಘಟನೆಯನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಕೆಲವು ಮಹಿಳೆಯರು ಒಬ್ಬ ಪುರುಷನ ಮೇಲೆ ಹಲ್ಲೆಗೆ ಯತ್ನಿಸುತ್ತಿರುವುದು ಮತ್ತು ಅವನನ್ನು ಬಲವಂತವಾಗಿ ಹೊರಗೆ ಕರೆದೊಯ್ಯುವುದು ಕಂಡುಬಂದಿದೆ. ಫೇಸ್‌ಬುಕ್ ಬಳಕೆದಾರರು ಈ ವೀಡಿಯೊವನ್ನು ಶೇರ್ ಮಾಡಿ, “ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಕನ ಮೇಲೆ ದಾಳಿ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಒಬ್ಬ ಹಿಂದೂ ವಿದ್ಯಾರ್ಥಿ ಟಾಪರ್ ಆಗಿರುವುದರಿಂದ ಅವರು…

Read More

Fact Check | ದುಬೈ ವಿಮಾನ ನಿಲ್ದಾಣದ ಪ್ರವಾಹದ ಹಳೆಯ ವೀಡಿಯೊವನ್ನು ದೆಹಲಿಯದ್ದು ಎಂದು ಹಂಚಿಕೆ

ದೆಹಲಿಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಉಂಟಾಗಿದ್ದು, ಈಗಾಗಲೇ ಹಲವು ವರದಿಗಳು ಈ ಬಗ್ಗೆ ಬಂದಿವೆ. ಈ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರವಾಹದ ನೀರಿನಲ್ಲಿ ವಿಮಾನಗಳು ಸಿಲುಕಿರುವ ದೃಶ್ಯವನ್ನು ತೋರಿಸುವ ವೀಡಿಯೊ ವೈರಲ್ ಆಗುತ್ತಿದೆ, ಮತ್ತು ಇದು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಎಂದು ಹೇಳಿಕೊಳ್ಳಲಾಗುತ್ತಿದೆ. ಹಲವರು ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಲವರು ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದು, ದೆಹಲಿ ಸರ್ಕಾರವನ್ನು…

Read More

Fact Check | ಸ್ಪೆನ್ ನಾಗರಿಕರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಒಂದು ವೀಡಿಯೊದಲ್ಲಿ, ಮಸೀದಿಯಂತೆ ಕಾಣುವ ಕಟ್ಟಡವೊಂದು ಬೆಂಕಿಯಲ್ಲಿ ಸುಡುತ್ತಿರುವ ದೃಶ್ಯ ಕಂಡುಬಂದಿದೆ. ಹಲವು ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ಸ್ಪೇನ್‌ನ ಜನರು ಮಸೀದಿಗೆ ಬೆಂಕಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿರುವ ಬಳಕೆದಾರರು, “ಮುಸ್ಲಿಮರಿಂದ ನಿರಂತರವಾಗಿ ಕಿರುಕುಳಕ್ಕೊಳಗಾದ ಸ್ಪೇನ್‌ನ ಜನರು, ಒಂದು ಪ್ರಮುಖ ಮಸೀದಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದ್ದಾರೆ. ಸ್ಪೇನ್‌ನ ಜನತೆ ಎಚ್ಚೆತ್ತಿದ್ದಾರೆ” ಎಂದು ಟಿಪ್ಪಣಿ ಬರೆದಿದ್ದಾರೆ. ಫ್ಯಾಕ್ಟ್‌ಚೆಕ್‌ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ…

Read More