ಇತ್ತೀಚೆಗೆ, ದಟ್ಟವಾದ ಮಂಜಿನಿಂದಾಗಿ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಚಳಿಗಾಲ… ವಿನಾಶ…. ನೋವಿನ ಅಪಘಾತ” ಎಂಬ ಶೀರ್ಷಿಕೆಯೊಂದಿಗೆ ಇದೊಂದು ಇತ್ತೀಚಿಗೆ ನಡೆದಿರುವ ಘಟನೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್ ಚೆಕ್ :
ಈ ಘಟನೆ ಇತ್ತೀಚಿಗೆ ನಡೆದಿಲ್ಲ, ಇದು 2017ರಲ್ಲಿ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಕಂಡುಬಂದ ದಟ್ಟ ಮಂಜಿನಿಂದಾಗಿ ಕಾರುಗಳ ಸರಣಿ ಅಪಘಾತ ನಡೆದಿದೆ ಎಂದು ಕನ್ನಡ ಫ್ಯಾಕ್ಟ್ ಚೆಕ್ ತಂಡ ಪತ್ತೆಹಚ್ಚಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್ ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಬಳಸಿಕೊಂಡು ಹುಡುಕಿದಾಗ, 2017ರ ನವೆಂಬರ್ 8ರಂದು ಇಂಡಿಯಾ ಟಿವಿಯ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಳ್ಳಲಾದ ಮೂಲ ವಿಡಿಯೋ ದೊರೆತಿದೆ. ಯಮುನಾ ಎಕ್ಸ್ಪ್ರೆಸ್ವೇಯಲ್ಲಿನ ದಟ್ಟ ಮಂಜಿನಿಂದಾಗಿ ಭೀಕರ ಅಪಘಾತ ನಡೆದಿದೆ ಎಂದು ವಿಡಿಯೋದ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ.
ವೈರಲ್ ವಿಡಿಯೋದ ಕುರಿತು ಮತ್ತಷ್ಟು ಹುಡುಕಿದಾಗ, 2017ರ ನವೆಂಬರ್ 7ರಂದು ಆಜ್ ತಕ್ ವರದಿಯು ಈ ಘಟನೆಯನ್ನು ಹಂಚಿಕೊಂಡಿತ್ತು. “ಆಗ್ರಾ-ನೋಯ್ಡಾ ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಕಂಡುಬಂದ ದಟ್ಟ ಮಂಜಿನಿಂದಾಗಿ ಹದಿನೆಂಟು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ವೇಗದಲ್ಲಿದ್ದ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ, ಕಾರಿನ ಪಕ್ಕದಲ್ಲಿ ನಿಂತಿದ್ದವರು ಚಾಲಕರಿಗೆ ವೇಗವನ್ನು ನಿಧಾನಗೊಳಿಸುವಂತೆ ಒತ್ತಾಯಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
2017ರಲ್ಲಿ ಅಪಘಾತ ಸಂಭವಿಸಿದೆ ಎಂದು ದೃಢಪಡಿಸಿದೆ ಮತ್ತು ಯಮುನಾ ಎಕ್ಸ್ಪ್ರೆಸ್ವೇನಲ್ಲಿ ದಟ್ಟ ಮಂಜಿನಿಂದಾಗಿ ಕಾರುಗಳ ಸರಣಿ ಅಪಘಾತಕ್ಕೆ ಕಾರಣವಾಗಿದೆ ಎಂದು ಜೀ ನ್ಯೂಸ್ ವರದಿಯಲ್ಲಿಯೂ ಕೂಡ ಉಲ್ಲೇಖವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2017ರಲ್ಲಿ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಕಂಡುಬಂದ ದಟ್ಟ ಮಂಜಿನಿಂದಾಗಿ ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಹಾಗಾಗಿ ಈ ವೈರಲ್ ವಿಡಿಯೋ ಇತ್ತೀಚಿನದಲ್ಲ.
ಇದನ್ನು ಓದಿ :
Fact Check : ಸಿಪಿಐ(ಎಂ) ಕಾರ್ಯಕ್ರಮದಲ್ಲಿ ‘ಶ್ರೀರಾಮ್ ಜೈರಾಮ್’ ಹಾಡಿದ್ದಾರೆ ಎಂದು ಎಡಿಟೆಡ್ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

