ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯೊಬ್ಬಳ ಮೇಲೆ ಉಗ್ರಗಾಮಿಗಳು ಅತ್ಯಾಚಾರವೆಸಗಿದ್ದಾರೆ ಮತ್ತು ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳುವ ಮೂಲಕ ರಾತ್ರಿಯ ಸಮಯದಲ್ಲಿ ಮಹಿಳೆಗೆ ಕಿರುಕುಳ ಮತ್ತು ಚಿತ್ರಹಿಂಸೆ ನೀಡುತ್ತಿರುವುದನ್ನು ಚಿತ್ರಿಸುವ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋವನ್ನು ಹಂಚಿಕೊಂಡಿರುವವರು “A Hindu women was brutally raped and tortured in Araihazar village of Narayanaganj. This is how the Muslims made fun of her, with no one coming forward to help her! (ನಾರಾಯಣಗಂಜ್ನ ಅರೈಹಜಾರ್ ಗ್ರಾಮದಲ್ಲಿ ಹಿಂದೂ ಮಹಿಳೆಯೊಬ್ಬಳ ಮೇಲೆ ಅಮಾನುಷವಾಗಿ ಅತ್ಯಾಚಾರ ಮತ್ತು ಚಿತ್ರಹಿಂಸೆ ನೀಡಲಾಯಿತು. ಮುಸ್ಲಿಮರು ಅವಳನ್ನು ಗೇಲಿ ಮಾಡಿದರು, ಯಾರೂ ಅವಳ ಸಹಾಯಕ್ಕೆ ಮುಂದೆ ಬರಲಿಲ್ಲ!)” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ.
ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್ ಚೆಕ್:
ಈ ಹೇಳಿಕೆಗಳು ನಿಜವಲ್ಲ. ಪೊಲೀಸರ ಪ್ರಕಾರ, ದರೋಡೆಕೋರರ ಗುಂಪು ಆಟೋರಿಕ್ಷಾದಲ್ಲಿ ದರೋಡೆ ಮಾಡಲು ತಯಾರಿ ನಡೆಸುತ್ತಿತ್ತು ಆದರೆ ಗ್ರಾಮಸ್ಥರು ಅವರನ್ನು ಬೆನ್ನಟ್ಟಿದ್ದಾರೆ. ಆ ಸಮಯದಲ್ಲಿ, ದರೋಡೆ ಗ್ಯಾಂಗ್ನ ಇತರ ಸದಸ್ಯರು ಓಡಿಹೋಗಿದ್ದಾರೆ, ಆದರೆ ಗ್ರಾಮಸ್ಥರು “ಬಿಲ್ಲಾಲ್” ಮತ್ತು ಅವನ ಸಹವರ್ತಿ “ಲವ್ಲಿ” ಎನ್ನುವವಳನ್ನು ಹಿಡಿದಿದ್ದಾರೆ. ಸಿಟ್ಟಿಗೆದ್ದ ಗ್ರಾಮಸ್ಥರು ಥಳಿಸಿದ್ದರಿಂದ ಬಿಲ್ಲಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆ ವೇಳೆ ಆತನ ಸಹವರ್ತಿ ಲವ್ಲಿ ಆತ್ಮರಕ್ಷಣೆಗಾಗಿ ಕಾಲುವೆಗೆ ಹಾರಿದ್ದಾಳೆ. ಈ ವಿಡಿಯೋ ಅಲ್ಪಸಂಖ್ಯಾತರ ವಿರುದ್ಧದ ಧಾರ್ಮಿಕ ದ್ವೇಷದ ಅಪರಾಧಗಳಿಗೆ ಸಂಬಂಧಿಸಿಲ್ಲ.

ವೈರಲ್ ವಿಡಿಯೋದಿಂದ ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಈ ಘಟನೆಗೆ ಸಂಬಂಧಿಸಿದ ವರದಿಯೊಂದು ಲಭ್ಯವಾಗಿದ್ದು “ನಾರಾಯಣಗಂಜ್ನ ಅರೈಹಜಾರ್ನಲ್ಲಿ ದರೋಡೆಗೆ ತಯಾರಿ ನಡೆಸುತ್ತಿದ್ದಾಗ ಗುಂಪೊಂದು ಥಳಿಸಿದ್ದರಿಂದ ಬಿಲ್ಲಾಲ್ (45) ಎಂಬ ದರೋಡೆಕೋರ ಸಾವನ್ನಪ್ಪಿದ್ದಾನೆ. ಗಾಯಗೊಂಡಿರುವಾಗ ಲವ್ಲಿ ಎಂಬ ಮಹಿಳಾ ದರೋಡೆಕೋರನನ್ನು ಬಂಧಿಸಲಾಯಿತು.” ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪೋಲಿಸರು ನೀಡಿರುವ ಮಾಹಿತಿಯ ಪ್ರಕಾರ, ರಾತ್ರಿ ವೇಳೆ ಕಹಿಂಡಿ ಗ್ರಾಮದ ಇಲುಮ್ಡಿ ರಸ್ತೆಯಲ್ಲಿ ಏಳೆಂಟು ಮಂದಿ ದರೋಡೆಕೋರರ ತಂಡ ಕಾರು ದರೋಡೆಗೆ ಸಿದ್ಧತೆ ನಡೆಸಿತ್ತು. ವಿಷಯ ಅರಿತ ಗ್ರಾಮಸ್ಥರು ಅವರನ್ನು ಬೆನ್ನಟ್ಟಿದ್ದಾರೆ. ದರೋಡೆಕೋರ ಗುಂಪಿನ ಇತರ ಸದಸ್ಯರು ಪರಾರಿಯಾಗಿದ್ದರೂ, ದರೋಡೆಕೋರ ಬಿಲ್ಲಾಲ್ ಮತ್ತು ಅವನ ಸಹಚರ ಲವ್ಲಿ ಗುಂಪಿನ ಕೈಗೆ ಸಿಕ್ಕಿಬಿದ್ದರು.
ಸಿಟ್ಟಿಗೆದ್ದ ಗ್ರಾಮಸ್ಥರು ಥಳಿಸಿದ್ದರಿಂದ ಬಿಲ್ಲಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆ ಸಮಯದಲ್ಲಿ, ತನ್ನ ಸಹಚರ ಲವ್ಲಿ ತನ್ನನ್ನು ರಕ್ಷಿಸಿಕೊಳ್ಳಲು ಕಾಲುವೆಗೆ ಹಾರಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಮೃತದೇಹವನ್ನು ಹೊರತೆಗೆದು ಗಾಯಾಳು ಲವ್ಲಿಯನ್ನು ರಕ್ಷಿಸಿದ್ದಾರೆ. ನಂತರ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಯಿತು.
https://youtu.be/wcpl7mY_gmw?feature=shared
ಆದ್ದರಿಂದ ವೈರಲ್ ಹೇಳಿಕೆಯಲ್ಲಿ ಪ್ರತಿಪಾದಿಸಿರುವಂತೆ ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯೊಬ್ಬಳ ಮೇಲೆ ಉಗ್ರಗಾಮಿಗಳು ಅತ್ಯಾಚಾರವೆಸಗಿದ್ದಾರೆ ಮತ್ತು ಚಿತ್ರಹಿಂಸೆ ನೀಡಿದ್ದಾರೆ ಎಂಬುದು ಸುಳ್ಳಾಗಿದ್ದು ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಂಡು ಈ ಆರೋಪ ಮಾಡಲಾಗುತ್ತಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

