2025ರ ಜನವರಿ 25ರಂದು, ಸಿಬಿಎಸ್ ನ್ಯೂಸ್ ಅಮೆರಿಕದ ಗಡಿಯ ಬಳಿ ಉತ್ತರ ಮೆಕ್ಸಿಕೋದಲ್ಲಿ ಸಾಮೂಹಿಕ ಸಮಾಧಿಯಲ್ಲಿ 56 ಅನಾಮಿಕ ಶವಗಳು ಪತ್ತೆಯಾಗಿವೆ ಎಂದು ವರದಿ ಮಾಡಿತ್ತು. ಸಮಾಧಿಗಳಲ್ಲಿ ಸಂಪೂರ್ಣ ಅಸ್ಥಿಪಂಜರಗಳು, ಕೆಲವು ದೇಹಗಳು, ಭಾಗಶಃ ಅವಶೇಷಗಳು ಮತ್ತು ಸಂಪೂರ್ಣ ಅಸ್ಥಿಪಂಜರದ ಅವಶೇಷಗಳು ಇವೆ ಎಂದು ವರದಿಯು ತಿಳಿಸಿತ್ತು.

ಇದರ ನಡುವೆ, “ಮೆಕ್ಸಿಕೋದಲ್ಲಿ ಇತ್ತೀಚೆಗೆ ಪತ್ತೆಯಾದ ಸಮಾಧಿ” ಎಂದು ಹೇಳಿಕೊಂಡು ಸಾಮೂಹಿಕ ಸಮಾಧಿಯನ್ನು ತೋರಿಸುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇದೇ ರೀತಿಯ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ನೀಲಿ ಟರ್ಪಾಲ್ನಲ್ಲಿ ಕಟ್ಟಿ ಶವಗಳನ್ನು ಸಾಲಾಗಿ ಇರಿಸಿರುವ ಚಿತ್ರವನ್ನು ಹಂಚಿಕೊಳ್ಳುತ್ತಿದ್ದು ಇಲ್ಲಿ ಕಾಣಬಹುದು. ( ಆರ್ಕೈವ್ ಲಿಂಕ್ )
ಫ್ಯಾಕ್ಟ್ಚೆಕ್
ಕನ್ನಡ ಫ್ಯಾಕ್ಟ್ಚೆಕ್ ತಂಡವು ಈ ಚಿತ್ರವನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, 2023ರ ನವೆಂಬರ್ 22ರಂದು ರಾಯಿಟರ್ಸ್ನ ಆಲ್ಬಮ್ನಲ್ಲಿ ಈ ಚಿತ್ರವನ್ನು ಗಮನಿಸಿದೆ, ಅದರ ಶೀರ್ಷಿಕೆ ಹೀಗಿದೆ: “ಎಲ್ಲಾ ಸ್ಮಶಾನಗಳು ತುಂಬಿವೆ: ಗಾಜಾದಲ್ಲಿ ಸಾಮೂಹಿಕ ಸಮಾಧಿಯಲ್ಲಿ ಪ್ಯಾಲೆಸ್ಟೀನಿಯನ್ನರನ್ನು ಸಮಾಧಿ ಮಾಡಲಾಗಿದೆ.”
ಗಾಜಾದ ಮೇಲಿನ ಇಸ್ರೇಲಿ ದಾಳಿಯಲ್ಲಿ ಸಾವನ್ನಪ್ಪಿದ ಬಲಿಪಶುಗಳ ಶವಗಳನ್ನು ಜೋಡಿಸುತ್ತಿರುವ ವ್ಯಕ್ತಿಯನ್ನು ಫೋಟೋದ ವಿವರಣೆಯು ಸೂಚಿಸುತ್ತದೆ. ಗಾಜಾ ನಗರದ ಸ್ಮಶಾನಗಳು ತುಂಬಿದ್ದರಿಂದ, ಉತ್ತರ ಗಾಜಾ ಪಟ್ಟಿಯಲ್ಲಿರುವ ಗಾಜಾ ನಗರದ ಅಲ್ ಶಿಫಾ ಆಸ್ಪತ್ರೆಯಿಂದ ಶವಗಳನ್ನು ದಕ್ಷಿಣದ ಖಾನ್ ಯೂನಿಸ್ ನಗರಕ್ಕೆ ವರ್ಗಾಯಿಸಲಾಯಿತು ಎಂದು ತಿಳಿದು ಬಂದಿದೆ.

ಹೆಚ್ಚುವರಿಯಾಗಿ, 2023ರ ನವೆಂಬರ್ 22ರಂದು ಅಲ್ ಜಜೀರಾದ ಫೇಸ್ಬುಕ್ ಪುಟದಲ್ಲಿ ಇದೇ ಘಟನೆಯ ವಿಸ್ತೃತ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ವೈರಲ್ ಚಿತ್ರದಲ್ಲಿ ಕಂಡುಬರುವ ಡ್ರೋನ್ ದೃಶ್ಯಾವಳಿಗಳು 2023ರ ನವೆಂಬರ್ನಲ್ಲಿ ಗಾಜಾದಲ್ಲಿ ಸಾಮೂಹಿಕ ಸಮಾಧಿಯನ್ನು ಚಿತ್ರಿಸಿದ್ದಾಗಿವೆ. ಅಲ್ ಜಝೀರಾ ವರದಿಯ ಪ್ರಕಾರ 111 ಪ್ಯಾಲೆಸ್ಟೀನಿಯನ್ನರನ್ನು ದಕ್ಷಿಣ ಗಾಜಾದಲ್ಲಿ ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ ಎಂದು ವರದಿ ಮಾಡಿದ್ದು, ಎಲ್ಲಾ ಬಲಿಪಶುಗಳನ್ನು ಗುರುತಿಸಲಾಗಿಲ್ಲ ಎಂದು ಹೇಳಿದೆ.
ವೈರಲ್ ಚಿತ್ರದಲ್ಲಿ ಕಂಡುಬರುವ ಅದೇ ಸಾಮೂಹಿಕ ಸಮಾಧಿಯನ್ನು ಒಳಗೊಂಡ ಮತ್ತೊಂದು ವೀಡಿಯೊವನ್ನು ಸ್ಕೈ ನ್ಯೂಸ್ನ ಯೂಟ್ಯೂಬ್ ಚಾನೆಲ್ ಅಪ್ಲೋಡ್ ಮಾಡಿದೆ. ವಿವರಣೆಯಲ್ಲಿ, “ಅಲ್ ಶಿಫಾ ಆಸ್ಪತ್ರೆ ಸೇರಿದಂತೆ ಗಾಜಾದ ವಿವಿಧ ಪ್ರದೇಶಗಳಿಂದ ಒಂದು ಟ್ರಕ್ನಲ್ಲಿ 111 ಶವಗಳನ್ನು ಖಾನ್ ಯೂನಿಸ್ನಲ್ಲಿರುವ ಸಾಮೂಹಿಕ ಸಮಾಧಿಯಲ್ಲಿ ಹೂಳಲು ತಂದಿತು. ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, 11,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ, ಅವರಲ್ಲಿ ಮೂರನೇ ಎರಡರಷ್ಟು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ” ಎಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗಿರುವ ಚಿತ್ರವು 2023ರಲ್ಲಿ ಗಾಜಾ ಸಾಮೂಹಿಕ ಸಮಾಧಿಯದ್ದಾಗಿದ್ದು, ಮೆಕ್ಸಿಕನ್ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
ಇದನ್ನು ಓದಿದ್ದೀರಾ? : Fact Check: ಜವಾಹರಲಾಲ್ ನೆಹರೂ ತಮ್ಮ ತಾಯಿಯ ಚಿತಾಭಸ್ಮವನ್ನು ವಿಸರ್ಜಿಸುತ್ತಿರುವ ಚಿತ್ರವನ್ನು ಕುಂಭಮೇಳದಲ್ಲಿ ಭಾಗವಹಿಸಿದ್ದ ಪೋಟೋ ಎಂದು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

