Fact Check: ಕ್ರಿಸ್ಮಸ್ ದಿನದಂದು ಬೆಥ್ಲೆಹೆಮ್ ಚರ್ಚ್ ಮೇಲೆ ದಾಳಿ ನಡೆದಿದೆ ಎಂದು ಅಕ್ಟೋಬರ್ 2022 ರ ಹಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ
ಪುರುಷರ ಗುಂಪೊಂದು ಕಟ್ಟಡದ ಮೇಲೆ ಕಲ್ಲುಗಳನ್ನು ಎಸೆಯುತ್ತಿರುವುದನ್ನು ತೋರಿಸುವ ಮತ್ತು ಸೈರಲ್ ಶಬ್ದಗಳು ಹಿನ್ನಲೆಯಲ್ಲಿ ಕೇಳಿಸುವ 20 ಸೆಕೆಂಡುಗಳ ವಿಡಿಯೋವನ್ನು ಕ್ರಿಸ್ಮಸ್ ದಿನದಂದು ಬೆಥ್ಲೆಹೆಮ್‌ನ ಚರ್ಚ್ ಮೇಲೆ ಮುಸ್ಲಿಂ ಗುಂಪು ದಾಳಿ ನಡೆಸುತ್ತಿರುವುದನ್ನು ಇದು ತೋರಿಸುತ್ತದೆ ಎಂದು ವಿಡಿಯೋವನ್ನು ಹಂಚಿಕೊಳ್ಳುವವರು ಆರೋಪಿಸಿದ್ದಾರೆ. ಪಶ್ಚಿಮ ದಂಡೆಯಲ್ಲಿರುವ ಬೆಥ್ ಲೆಹೆಮ್ ಯೇಸು ಕ್ರಿಸ್ತನ ಜನ್ಮಸ್ಥಳವೆಂದು ನಂಬಲಾಗಿದೆ. “ಬೆಥ್ಲೆಹೆಮ್ ಚರ್ಚ್ ಮೇಲೆ ದಾಳಿ: ಕ್ರಿಸ್ಮಸ್ ಸಮಯದಲ್ಲಿ ಮುಸ್ಲಿಮರು ಪವಿತ್ರ ಸ್ಥಳವನ್ನು ಕಲ್ಲುಗಳು ಮತ್ತು ಗುಂಡಿನ ದಾಳಿಯಿಂದ ಗುರಿಯಾಗಿಸಿದ್ದಾರೆ” ಎಂದು ಅನೇಕ ಎಕ್ಸ್…