ಇಸ್ರೇಲ್ ಅಧಿಕೃತ ಟ್ವಿಟರ್ ಖಾತೆಗಳಿಂದ ಫೆಲೆಸ್ತೀನಿಯರು ಸಾವುಗಳೆಂದು ನಟಿಸುತ್ತಿದ್ದಾರೆ ಎಂಬ ಸುಳ್ಳು ಹಂಚಿಕೆ

ಹಮಾಸ್‌ನವರಿಗೆ ಪ್ರತ್ಯುತ್ತರವಾಗಿ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಅಶ್ರು ದಾಳಿ ನಡೆಸಿದೆ.  ಇಸ್ರೇಲ್ ದಾಳಿಯಿಂದ ಸಾವನ್ನಪ್ಪಿದ, ಗಾಯಗೊಂಡ ಪ್ಯಾಲಸ್ಟೈನಿಗರ ಅನೇಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಆದರೆ ಇವುಗಳನ್ನು ಅಲ್ಲಗೆಳೆದಿರುವ ಇಸ್ರೇಲ್ ಸತ್ತ ಮಗು ಎಂದು ತೋರಿಸುತ್ತಿರುವುದು ಬೊಂಬೆ, ಯುದ್ದದ ಗಾಯಾಳುಗಳು ಎಂದು ಮೇಕಪ್ ಮಾಡಿಕೊಂಡು ನಾಟಕವಾಡುತ್ತಿದ್ದಾರೆ, ಮೃತದೇಹ ಎಂದು ಮಲಗಿಸಿರುವ ಹೆಣಗಳು ಚಲಿಸುತ್ತಿವೆ ಹೀಗೆ ವಾಸ್ತವವನ್ನು ತಿರುಚಲು ನಾನಾ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿದೆ.  ಇಸ್ರೇಲ್ ಮತ್ತು ಪ್ಯಾಲಸ್ಟೈನ್ ಯುದ್ಧಕ್ಕೆ ಸಂಬಂಧಿಸಿದಂತೆ ಇಂತಹ ಅನೇಕ ಸುಳ್ಳುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕನ್ನಡ ಫ್ಯಾಕ್ಟ್‌ಚೆಕ್‌ ಇಂತಹ ಅನೇಕ ಸುಳ್ಳುಗಳನ್ನು ಬಯಲುಗೊಳಿಸಿದೆ ಅವುಗಳನ್ನು ನೀವು ಇಲ್ಲಿ ನೋಡಬಹುದು.

ಜಗತ್ತಿಗೆ ಸುಳ್ಳು ಹೇಳಲು ಹಮಾಸ್ ನಕಲಿ ಸುದ್ದಿ ಮತ್ತು ಪ್ರಚಾರವನ್ನು ಬಳಸುತ್ತಿದೆ. ಈ @CNN ಪ್ರಕಟಿಸಿರುವ ವೀಡಿಯೊ ಕ್ಲಿಪ್‌ನಲ್ಲಿ ಕಂಡುಬರುವಂತೆ ಮೃತದೇಹವನ್ನು ಬ್ಯಾಗ್‌ನಲ್ಲಿ ಇರಿಸಲಾಗಿದೆ ಮತ್ತು ನಟರು ಕೂತು ಶೋಕಿಸುತ್ತಿದ್ದಾರೆ . ಆದರೆ ಅಲ್ಲಿ ಪವಾಡಸದೃಶವಾಗಿ ಮೃತದೇಹ ಬಾಡಿ ಬ್ಯಾಗ್‌ನಿಂದ ತಲೆ ಎತ್ತುತ್ತದೆ. ಎಂಬ ಇನ್ನೊಂದು ಸುದ್ದಿಯೊಂದನ್ನು ಎಂಬಸಿ ಆಫ್ ಇಸ್ರೇಲ್ ಟು ಯುಎಸ್‌ಎ(Embassy of Israel to the USA) ತನ್ನ ಅಧಿಕೃತ ಖಾತೆಯಿಂದ ಹಂಚಿಕೊಂಡಿದೆ.

 

ಫ್ಯಾಕ್ಟ್‌ಚೆಕ್: ಈ ವಿಡಿಯೋವನ್ನು ಅಕ್ಟೋಬರ್ 30, 2023 ರಂದು ಯುಎಸ್ಎ ಅಧಿಕೃತ ಟ್ವಿಟರ್ ಹ್ಯಾಂಡಲ್‌ಗೆ ಇಸ್ರೇಲ್ ರಾಯಭಾರ ಕಚೇರಿ ಟ್ಯಾಗ್ ಮಾಡಿ ಮೇಲಿನ ತಲೆಬರಹ ಬರೆದು ಹಂಚಿಕೊಂಡಿದೆ. ಆದರೆ ಇದು ನೈಜ ವಿಡಿಯೋ ದೃಶ್ಯವಾಗಿದ್ದು ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸಾವನ್ನಪ್ಪಿದ ಜನರದ್ದಾಗಿದೆ. ಟೈಮ್ಸ್‌ ಆಫ್ ಗಾಜಾ ಎಂಬ ಸುದ್ದಿ ಮಾಧ್ಯಮ ಸಹ ಈ ವಿಡಿಯೋವನ್ನು ಹಂಚಿಕೊಂಡಿದ್ದು ಮೂಲ ವಿಡಿಯೋದಲ್ಲಿ ಮೃತ ದೇಹ ಅಲುಗಾಡಿಲ್ಲ.

ಅಲ್ಲದೆ ಅಲ್-ಅಕ್ಸಾ ಆಸ್ಪತ್ರೆಯ ಹೊರಗೆ ಹಲವಾರು ಶವಗಳ ಇತರ ದೃಶ್ಯಗಳಲ್ಲಿಯೂ ನಾವು ನೋಡಬಹುದು, ಅನೇಕ ಜನರು ಮೃತರ ಮುಂದೆ ಶೋಕಿಸುತ್ತಿದ್ದಾರೆ. ಅನೇಕ ಪ್ಯಾಲಸ್ಟೈನಿಗರು ಈ ಚಿತ್ರಗಳನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ಯಾಲಸ್ಟೈನ್


ಇದನ್ನು ಓದಿ: Fact Check : ವಾಂಖೆಡೆ ಸ್ಟೇಡಿಯಂನಲ್ಲಿ ಉದ್ಘಾಟನೆಯಾದದ್ದು ಸ್ಟೀವ್‌ ಸ್ಮಿತ್‌ ಪ್ರತಿಮೆ ಅಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *