Fact Check | INDIA ಮೈತ್ರಿಕೂಟದ ಫೋಟೋಶೂಟ್‌ನಲ್ಲಿ ಅಜ಼ಾನ್ ಬಳಸಲಾಗಿದೆ ಎಂಬುದು ಸುಳ್ಳು..!
“ಹಿಂದೂ ಬಾಂಧವರೆ ಒಮ್ಮೆ ಈ ವಿಡಿಯೋ ನೋಡಿ. ಇದು ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟದ ಫೋಟೋಶೂಟ್. ಆ ಸಂದರ್ಭದಲ್ಲಿ ಬಳಸಲಾಗಿರುವ ಅಜ಼ಾನ್ ಕೇಳಿದ್ರೆ ನಿಮಗೆ ಎಲ್ಲವೂ ಅರ್ಥವಾಗುತ್ತೆ.” ಎಂಬ ತಲೆಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲೋಕಸಭೆ ಚುನಾವಣೆಗೆ ಇನ್ನೂ ಕೆಲ ತಿಂಗಳುಗಳು ಬಾಕಿ ಇರುವಾಗಲೇ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳು ಸದ್ದು ಮಾಡುತ್ತವೆ. ಅದೇ ರೀತಿಯಿಲ್ಲಿ ಈಗ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಸಾಕಷ್ಟು ಮಂದಿ ಪರಿಶೀಲನೆ ನಡೆಸದೆ ವ್ಯಾಪಕವಾಗಿ…