Fact Check | ಕಿರಣ್‌ ದೇವಿ ಬಳಿ ಅಕ್ಬರ್‌ ಪ್ರಾಣ ಭಿಕ್ಷೆ ಬೇಡಿದ್ದ ಎಂಬುದು ಹಸಿ ಸುಳ್ಳಿನ ಆರೋಪ

ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ಧತೆಯನ್ನು ಹಾಳು ಮಾಡುವ ಸಲುವಾಗಿ ಕೆಲವೊಂದು ಕಟ್ಟುಕತೆಯ ಪೋಸ್ಟ್‌ಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಇದೀಗ ಇಂತಹದ್ದೆ ಒಂದು ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹಸಿ ಸುಳ್ಳಿನೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಕಿರಣ್ ದೇವಿ ಮಹಾರಾಣ ಪ್ರತಾಪ್ ನ ಸಹೋದರ, ಶಕ್ತಿಸಿಂಗ್‌ನ ಮಗಳು ಮತ್ತು ಭಿಕನೇರ್‌ನ ರಾಜ ಪೃಥ್ವಿರಾಜ್‌ ರಾಥೋರ್‌ನ ಮಡದಿ ಮೀನಾಬಜಾರ್ ನಲ್ಲಿ ಹೋಗತ್ತಿದ್ದಾಗ ಎದುರಿನಿಂದ ಬಂದ ಅಕ್ಬರ್ ತನ್ನ ಸೈನಿಕರಿಗೆ ಕಿರಣ್ ದೇವಿಯನ್ನು ಎಳೆದುಕೊಂಡು ಬನ್ನಿ ಎಂದು ಆಜ್ಞೆ ಮಾಡಿದ, ಸೈನಿಕರು ಬರುವುದಕ್ಕೆ ಮುನ್ನವೇ ಕಿರಣ್ ದೇವಿ ಅಕ್ಬರನ ಮೇಲೆ ಎರಗಿ ತನ್ನ ಸೊಂಟದಲ್ಲಿ ಅಡಗಿಸಿದ್ದ ಚೂರಿಯನ್ನು ಅವನ ಕುತ್ತಿಗೆಗೆ ತಾಗಿಸಿ ಹಿಡಿದಳು. ಭಯಭೀತನಾದ ಹೇಡಿ ಅಕ್ಬರ್ ಕಿರಣ್ ದೇವಿಯ ಕ್ಷೇಮೆಯಾಚಿಸಿ ಸಾಯಿಸದಂತೆ ಬೇಡಿಕೊಂಡ ಎಂಬುದೇ ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿರುವ ಹಸಿ ಸುಳ್ಳಿನ ಕತೆ

ಈ ರೀತಿಯ ಕತೆ ಹುಟ್ಟಿಕೊಂಡಿದ್ದು 2019ರಲ್ಲಿ. ರಾಜಸ್ಥಾನದ ಬಿಜೆಪಿ ನಾಯಕ ಮದನ್‌ ಲಾಲ್‌ ಶೈನಿ ಅವರು ತಮ್ಮ ಭಾಷಣದ ಸಂದರ್ಭದಲ್ಲಿ ಈ ರೀತಿಯ ಸುಳ್ಳು ಕತೆಯನ್ನು ಹೇಳಿ ವಿವಾದವನ್ನು ಹುಟ್ಟು ಹಾಕಿದ್ದರು. ಈ ಕುರಿತು ಎನ್‌ಡಿಟಿವಿ ಸೇರಿದಂತೆ ಸಾಕಷ್ಟು ಮಾಧ್ಯಮಗಳು ವರದಿಯನ್ನು ಮಾಡಿದ್ದವು. ಬಳಿಕ ಹಲವು ಇತಿಹಾಸ ತಜ್ಙರು ಆ ಸಂದರ್ಭದಲ್ಲೇ ಈ ಕತೆಯನ್ನು ತಳ್ಳಿ ಹಾಕಿದ್ದರು. ಅದಕ್ಕೆ ಪ್ರಮುಖ ಕಾರಣ ಐತಿಹಾಸಿಕವಾಗಿ ಈ ಘಟನೆಗೆ ಯಾವುದೇ ರೀತಿಯ ಸಾಕ್ಷಿಗಳು ಇರಲಿಲ್ಲ ಮತ್ತು ಈ ಕತೆಯಲ್ಲೇ ಹಲವು ಸುಳ್ಳುಗಳನ್ನ ಆಗಲೇ ಸಾಕಷ್ಟು ಮಂದಿ ಕಂಡು ಹಿಡಿದಿದ್ದರು.

ಅಸಲಿಗೆ ಮಹಾರಾಣ ಪ್ರತಾಪ್ ನ ಸಹೋದರ ಶಕ್ತಿಸಿಂಗ್‌ಗೆ ಕಿರಣ್‌ ದೇವಿ ಎಂಬ ಮಗಳಿದ್ದಳು ಎಂಬುದಕ್ಕೆ ಯಾವುದೇ ಸ್ಪಷ್ಟ ಉಲ್ಲೇಖಗಳು ಇದುವರೆಗೂ ಸಿಕ್ಕಿಲ್ಲ. ಇನ್ನು ಭಿಕನೇರ್‌ನ ರಾಜ ಪೃಥ್ವಿರಾಜ್‌ ರಾಥೋನ ಮಡದಿ ಕಿರಣ್‌ ದೇವಿ ಎಂಬುದು ಕೂಡ ಗೊಂದಲಕಾರಿಯಾಗಿದೆ. ಏಕೆಂದರೆ ಅಕ್ಭರ್‌ನ ಆಡಳಿತ ಅವಧಿಯಲ್ಲಿ ರಾವ್‌ ಕಲ್ಯಾಣ್‌ ಮಾಲ್‌ 1541 ರಿಂದ 1574 ರವರೆಗೆ ಆಡಳಿತ ನಡೆಸಿದ್ದರೆ, ರಾವ್‌ ರೈ ಸಿಂಗ್‌ 1574 ರಿಂದ 1612ರವರೆಗೆ ಆಳ್ವಿಕೆ ನಡೆಸಿದ್ದರು ಎಂಬ ಉಲ್ಲೇಖವಿದೆ.

ಆದೆರೆ ಈ ಅವಧಿಯಲ್ಲಿ ಎಲ್ಲಿಯೂ ರಾಜ ಪೃಥ್ವಿರಾಜ್‌ ರಾಥೋರ್‌ ರಾಜನ ಉಲ್ಲೇಖ ಸ್ಪಷ್ಟವಾಗಿ ಸಿಕ್ಕಿಲ್ಲ.. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಇದೊಂದು ಕಟ್ಟುಕತೆ ಎಂಬುದಲ್ಲಿ ಯಾವುದೇ ರೀತಿಯಾದ ಅನುಮಾನವಿಲ್ಲ.


ಇದನ್ನೂ ಓದಿ : ವಿಶ್ವಕಪ್‌ ಟ್ರೋಫಿಗೆ ಅಗೌರವ ಹಿನ್ನೆಲೆ ಮಿಚೆಲ್‌ ಮಾರ್ಷ್‌ ವಿರುದ್ಧ FIR ದಾಖಲಾಗಿದೆ ಎಂಬುದು ಸುಳ್ಳು.!


ವಿಡಿಯೋ ನೋಡಿ : ವಿಶ್ವಕಪ್‌ ಟ್ರೋಫಿಗೆ ಅಗೌರವ ಹಿನ್ನೆಲೆ ಮಿಚೆಲ್‌ ಮಾರ್ಷ್‌ ವಿರುದ್ಧ FIR ದಾಖಲಾಗಿದೆ ಎಂಬುದು ಸುಳ್ಳು.!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *