Fact Check | ಜುಮ್ಲಾಗಳ ವಿರುದ್ಧ ಅಮಿರ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ ಎಂಬ ವಿಡಿಯೋ ಎಡಿಟೆಡ್‌ ಆಗಿದೆ

“ಅಮೀರ್ ಖಾನ್ ‘ಜುಮ್ಲಾವಾದ’ ಅಥವಾ ಬಿಜೆಪಿಯ ಸುಳ್ಳು ರಾಜಕೀಯ ಭರವಸೆಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ವೀಡಿಯೊವನ್ನು ಕೊನೆಯವರೆಗೆ ನೋಡಿ.” ಎಂಬ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಅಮಿರ್‌ ಖಾನ್‌ ಕಾಂಗ್ರೆಸ್‌ ಅನ್ನು ಈ ಬಾರಿ ಬೆಂಬಲಿಸುತ್ತಿದ್ದಾರೆ ಎಂದು ಸುಳ್ಳು ಮಾಹಿತಿಯನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ. ಆ ಮೂಲಕ ಅಮಿರ್‌ ಖಾನ್‌ ವಿರುದ್ಧ ದ್ವೇಷವನ್ನು ಕೂಡ ಹರಡುವ ಪ್ರಯತ್ನವನ್ನು ಮಾಡಲಾಗಿದೆ. भारत के हर नागरिक लखपति है। क्योंकि सबके पास काम से…

Read More

Fact Check | ವಾಟ್ಸ್‌ಆಪ್‌ನಲ್ಲಿ ಕಳುಹಿಸುವ ಗುಡ್ ಮಾರ್ನಿಂಗ್ ಸಂದೇಶಗಳ ಮೇಲೆ 18 % GST ಎಂಬುದು ಸುಳ್ಳು

“ವಾಟ್ಸ್‌ಆಪ್‌ನಲ್ಲಿ ರವಾನಿಸುವ ಗುಡ್‌ ಮಾರ್ನಿಂಗ್‌ ( ಶುಭೋದಯ ) ಸಂದೇಶಗಳ ಮೇಲೆ ಕೇಂದ್ರ ಸರ್ಕಾರ 18% GST ವಿಧಿಸಲು ಮುಂದಾಗಿದೆ. ಈ ಕುರಿತು ಪ್ರಖ್ಯಾತ ABP ನ್ಯೂಸ್‌ ಚಾನಲ್‌ ವರದಿ ಮಾಡಿದೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿ ತಮ್ಮ ವೈಯಕ್ತಿಕ ಖಾತೆಗಳಲ್ಲೂ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ಸುದ್ದಿ ಎಬಿಪಿ ಸುದ್ದಿ ಸಂಸ್ಥೆಯಲ್ಲಿ ಬಂದಿರುವುದರಿಂದ ಬಹುತೇಕರು ಇದು ನಿಜವಿರಬಹುದು ಎಂದು ನಂಬಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಇದೇ ರೀತಿಯ ಸುಳ್ಳು ಸುದ್ದಿಯನ್ನು…

Read More

Fact Check | ಬಾಂಗ್ಲಾದೇಶದಲ್ಲಿ ಬುರ್ಖಾ ಧರಿಸದ ಹಿಂದೂ ಯುವತಿಗೆ ಕಿರುಕುಳ ಎಂಬ ವಿಡಿಯೋ ಕಿರುಚಿತ್ರದ್ದಾಗಿದೆ

“ಹಿಂದೂ ಯುವತಿಯೊಬ್ಬಳು ಬುರ್ಖಾ ಧರಿಸಿಲ್ಲವೆಂದು ಆಕೆಗೆ ಬಸ್‌ನಲ್ಲಿದ್ದ ಯುವಕರು ಕಿರುಕುಳ ನೀಡಿದ್ದಾರೆ. ಈಕೆ ಅದನ್ನು ಕಂಡಕ್ಟರ್ ಬಳಿ ಪ್ರಶ್ನಿಸಿದಾಗ, ಆತನು ಕೂಡ ಈಕೆ ಬುರ್ಖಾ ಹಾಕಿಲ್ಲವೆಂದು ಬಸ್‌ನಿಂದ ಇಳಿಸಿದ್ದಾನೆ..” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. So now Hindus are being forced to wear Burqa ? In #Bangladesh, during the month of #Ramadan, unveiled Hindu women who do not…

Read More

Fact Check | ಸೂಪರ್ ಮಾರ್ಕೆಟ್‌ಗಳಲ್ಲಿ ಮನುಷ್ಯನ ಕೈಗಳ ಮಾಂಸವನ್ನು ಮಾರಲಾಗುತ್ತಿದೆ ಎಂಬುದು ಸುಳ್ಳು

“ಸೂಪರ್ ಮಾರ್ಕೇಟ್‌ಗಳಲ್ಲಿ ಮಾಂಸ ಖರೀದಿಸುವ ಮುನ್ನ ಎಚ್ಚರ.. ಈ ಪೋಟೋ ನೋಡಿ ಸೂಪರ್ ಮಾರ್ಕೇಟ್‌ವೊಂದರಲ್ಲಿ ಮನುಷ್ಯರ ಕೈಗಳ ಮಾಂಸವನ್ನು ಮಾರಲಾಗುತ್ತಿದೆ” ಎಂಬ ಪೋಸ್ಟ್‌ವೊಂದು ವೈರಲ್‌ ಆಗುತ್ತಿದ್ದು ಇದನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿದ್ದಾರೆ. I’d rather eat python. pic.twitter.com/a6PVqpayLC — Mrs. S. (@hshLauraJ) March 26, 2024   ಕೆಲವರು ಈ ಕುರಿತು ವಿವಿಧ ಬರಹಗಳೊಂದಿಗೆ ಪೋಸ್ಟ್‌ಗಳನ್ನು ಮಾಡುತ್ತಿದ್ದು, ಸೂಪರ್‌ ಮಾರ್ಕೇಟ್‌ನಲ್ಲಿ ಸಿಗುವ ಯಾವುದೇ ಮಾಂಸವನ್ನು…

Read More

Fact Check | ED ಇಂದ ಬಂಧಿಸಲ್ಪಟ್ಟ ನಂತರ ಅರವಿಂದ ಕೇಜ್ರಿವಾಲ್ ತಮ್ಮ ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾರೆ ಎಂಬ ಫೋಟೋ ನಕಲಿ

“ಈ ಫೋಟೋ ನೋಡಿ ಅರವಿಂದ್ ಕೇಜ್ರಿವಾಲ್ ಅವರು ED ಯಿಂದ ಬಂಧಿಸಲ್ಪಟ್ಟ ನಂತರ ತಾವು ಧರಿಸಿದ ಫ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾರೆ.”ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ಪೋಸ್ಟ್‌ ಅನ್ನು ಬಿಜೆಪಿ ಬೆಂಬಲಿಗರು ಹಾಗೂ ಬಲಪಂಥೀಯ ಸಂಘಟನೆಯ ಕೆಲ ಮುಖಂಡರುಗಳು ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಗುತ್ತಿರುವ ಪೋಸ್ಟ್‌ನಲ್ಲಿ ಆಮ್‌ ಆದ್ಮಿ ಪಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ನಿಂದಿಸಲಾಗುತ್ತಿದೆ. ಸಾಕಷ್ಟು ಮಂದಿ ಕೋರ್ಟ್‌ ತೀರ್ಪು ಬರುವ ಮುನ್ನವೇ ಅರವಿಂದ್‌ ಕೇಜ್ರಿವಾಲ್‌…

Read More

Fact Check | ವಾಟ್ಸಾಪ್‌ಗೆ ಸಂಬಂಧಿಸಿದಂತೆ ಹರಿದಾಡುತ್ತಿವೆ ಹಲವು ಸುಳ್ಳು ಸುದ್ದಿಗಳು..!

ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳಲ್ಲಿ, ವಾಟ್ಸಾಪ್‌ ಸಂದೇಶಗಳಿಗೆ ಸಂಬಂಧಿಸಿದಂತೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೆ ಹಲವರು ಇದನ್ನೇ ನಿಜವಾದ ಮಾಹಿತಿ ಎಂದು ನಂಬಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಸಂದೇಶದಲ್ಲಿ ಈ ಕೆಳಗಿನ ವಿಚಾರಗಳನ್ನು ಪ್ರಮುಖ ಅಂಶಗಳಂತೆ ಉಲ್ಲೇಖ ಮಾಡಲಾಗುತ್ತಿದೆ.  “ಸಂದೇಶಗಳಲ್ಲಿ ಪ್ರಸ್ತಾಪಿಸಿರುವ ಹೊಸ ನಿಯಮಗಳು ಈ ಕೆಳಗಿನಂತಿವೆ: 01. ಎಲ್ಲಾ ಕರೆಗಳು ರೆಕಾರ್ಡಿಂಗ್ ಆಗುತ್ತಿವೆ. 02. ಎಲ್ಲಾ ಕರೆ ರೆಕಾರ್ಡಿಂಗ್‌ಗಳನ್ನು ಉಳಿಸಲಾಗುತ್ತದೆ. 03. WhatsApp, Facebook, Twitter ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಮೇಲ್ವಿಚಾರಣೆ…

Read More

Fact Check | ಬೆಂಗಾಳಿ ಸಿಯೆರಾ ಲಿಯೋನ್‌ ದೇಶದ ಅಧಿಕೃತ ಭಾಷೆ ಎಂಬುದು ಸುಳ್ಳು

“ಬೆಂಗಾಳಿ ಭಾಷೆ ಪಶ್ಚಿಮ ಆಫ್ರಿಕಾದಲ್ಲಿನ ಸಿಯೆರಾ ಲಿಯೋನ್‌ ಅಧಿಕೃತ ಭಾಷೆಯಾಗಿದೆ. ಈ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕು” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ದುರಂತವೆಂದರೇ ಈ ಸುದ್ದಿಯನ್ನು ಪರಿಶೀಲನೆ ನಡೆಸದೇ ಹಲವು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಈಗ ಮಾಧ್ಯಮಗಳ ಮೇಲಿ ವಿಶ್ವಾಸರ್ಹತೆಯ ಬಗ್ಗೆ ಪಶ್ನೆಗಳು ಮೂಡುವಂತೆ ಮಾಡಿದೆ. ನ್ಯೂಸ್‌ 18, ಆಜ್‌ ತಕ್‌, ಢಾಕಾ ಟ್ರಿಬ್ಯುನ್‌ ದ ಇಂಡಿಯನ್‌ ಎಕ್ಸ್‌ಪ್ರೆಸ್‌ ಸುದ್ದಿ ಸಂಸ್ಥೆಗಳೆ ಈ ಸುಳ್ಳು ಸುದ್ದಿಯನ್ನು ಪ್ರಸಾರ…

Read More

Fact Check | ಮದರಾಸದಲ್ಲಿ ಭಾರೀ ಶಸ್ತ್ರಾಸ್ತ ಪತ್ತೆ ಎಂದು ಸುಳ್ಳು ಸುದ್ದಿ ಹಬ್ಬಿದ ಕಿಡಿಗೇಡಿಗಳು..!

“ಉತ್ತರ ಪ್ರದೇಶದ ಬಿಜ್ನೋರ್‌ನ ಮದರಾಸ ಮೇಲೆ ನಡೆದ ದಾಳಿಯಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಪತ್ತೆ.!, ಆರು ಧರ್ಮ ಗುರುಗಳನ್ನ ಬಂಧಿಸಲಾಗಿದೆ. ಕಾಳಜಿಯ ಅಂಶವೆಂದರೆ ಎಲ್ಎಂಜಿ ಮಿಷನ್ ಗನ್‌ ಲಭ್ಯತೆ. ಒಂದು ನಿಮಿಷದಲ್ಲಿ 8,000 ಸುತ್ತು ಗುಂಡು ಹಾರಿಸುವ ಸಾಮರ್ಥ್ಯ ಮಷೀನ್ ಗನ್. ಈ ಜನರ ತಯಾರಿಯನ್ನು ಅರ್ಥ ಮಾಡಿಕೊಳ್ಳಿ ಹಿಂದುಗಳೇ.. ಎದ್ದೇಳಿ ಅವರು ನಿಮ್ಮ ಭವಿಷ್ಯವನ್ನು ನಿರ್ಧರಿಸಿದ್ದಾರೆ.” “ಮೋದಿ ಹೋರಾಡಲು ತಡವಾಗಿದೆ ಈ ಸತ್ಯವನ್ನು ಪ್ರತಿಯೊಬ್ಬ ಹಿಂದೂ ಸಹೋದರರಿಗೆ ಹಂಚಿಕೊಳ್ಳಿ” ಎಂದು ಬರಹದೊಂದಿಗೆ ಸುಮಾರು 7 ಫೋಟೋಗಳನ್ನು ಹಂಚಿಕೊಳ್ಳಲಾಗಿದೆ….

Read More

Fact Check | ಅಯೋಧ್ಯೆಯಲ್ಲಿ ಪ್ಲಾಸ್ಟಿಕ್‌ ಕೊಟ್ರೆ ಉಚಿತವಾಗಿ 5 ರೂ. ಸಿಗುತ್ತದೆ ಎಂಬುದು ಸುಳ್ಳು..!

“ಅಯೋಧ್ಯೆಯಲ್ಲಿ ಜನರು ತಾವು ಬಳಸಿ ಖಾಲಿಯಾದ ನೀರಿನ ಬಾಟಲಿಯನ್ನು ಹಿಂದಿರುಗಿಸಿದ್ರೆ ಉಚಿತವಾಗಿ 5 ರೂಪಾಯಿ ಪಡೆಯುತ್ತಾರೆ” ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅದರಲ್ಲೂ ಅಯೋಧ್ಯೆಯಿಂದ ಕ್ರಾಂತಿಕಾರಿ ನಡೆ ಎಂದು ಕೂಡ ಸಾಕಷ್ಟು ಮಂದಿ ಪೋಸ್ಟ್‌ ಮಾಡುತ್ತಿದ್ದು, ಪ್ಲಾಸ್ಟಿಕ್‌ ಮಾಲಿನ್ಯ ತಡೆಯಲು ಹಾಗೂ ಪ್ಲಾಸ್ಟಿಕ್‌ ಪುನರ್‌ ಬಳಕೆಗೆ ಈ ಕ್ರಮ ಎಂದು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್‌ ಆಗುತ್ತಿರುವ ಪೋಸ್ಟ್‌ ಪ್ರಕಾರ ಅಯೋಧ್ಯೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ನಿಯಂತ್ರಣ ಹೇರಲಾಗಿದೆ ಮತ್ತು ಪ್ಲಾಸ್ಟಿಕ್‌ ಮರುಬಳಕೆಗೆ ಉತ್ತೇಜನ…

Read More

Fact Check | ಈಜಿಪ್ಟ್‌ನಲ್ಲಿ ದೈತ್ಯ ಮಮ್ಮಿ ಪತ್ತೆಯಾಗಿದೆ ಎಂದು AI ಚಿತ್ರ ಹಂಚಿಕೆ..!

“ದೈತ್ಯ ಫೇರೋಗಳ ಮಮ್ಮಿಗಳನ್ನು 1920 ರಲ್ಲಿ ಹಾವರ್ಡ್‌ ಕಾರ್ಟರ್ ಪತ್ತೆ ಹಚ್ಚಿದ್ದರು. ಈಜಿಪ್ಟ್‌ನಲ್ಲಿನ ಸಮಾಧಿ ಉತ್ಖನನದ ವೇಳೆ ಈ ಹಲವು ಮಮ್ಮಿಗಳು ಕಂಡು ಬಂದಿತ್ತು. ಇದು ಆ ಅಪರೂಪ ಕ್ಷಣಗಳ ಫೋಟೋ.. ಇದನ್ನು ಶೇರ್‌ ಮಾಡಿ” ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ ನೋಡಲು ನಿಜವಾದ ಫೋಟೋದಂತೆ ಕಂಡುಬಂದಿದೆ. ಇದೇ ಕಾರಣಕ್ಕೆ ಸಾಕಷ್ಟು ಮಂದಿ ಈ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಮತ್ತು ಇದನ್ನೇ ನಿಜವೆಂದು ನಂಬಿ ಶೇರ್‌ ಕೂಡ ಮಾಡುತ್ತಿದ್ದಾರೆ. ಹಾಗಾಗಿ ಈ ವಿಚಾರದ…

Read More