Video | ವಿಶ್ವಕಪ್‌ ಟ್ರೋಫಿಗೆ ಅಗೌರವ ಹಿನ್ನೆಲೆ ಮಿಚೆಲ್‌ ಮಾರ್ಷ್‌ ವಿರುದ್ಧ FIR ದಾಖಲಾಗಿದೆ ಎಂಬುದು ಸುಳ್ಳು.!

ಸಾಮಾಜಿಕ ಜಾಲತಾಣದಲ್ಲಿ “ಭಾರತ ವಿರುದ್ಧ ವಿಶ್ವಕಪ್‌ ಗೆದ್ದ ಬಳಿಕ ಆಸ್ಟ್ರೆಲಿಯಾದ ಕ್ರಿಕೆಟಿಗ ಮಿಚೆಲ್‌ ಮಾರ್ಷ್‌ ಅವರು ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟು ಅಗೌರವ ತೋರಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಈಗ FIR ದಾಖಲಾಗಿದೆ.” ಎಂಬ ಪೋಸ್ಟ್‌ ವೈರಲ್‌ ಆಗಿದೆ. ಹಲವು ಮಂದಿ ಈ ವಿಚಾರವನ್ನು ಸಾಕಷ್ಟು ಮಂದಿ ಶೇರ್‌ ಮಾಡುತ್ತಿದ್ದಾರೆ.

ಮಿಚೆಲ್‌ ಮಾರ್ಷ್‌ ಅವರು ವಿಶ್ವಕಪ್‌ ಟ್ರೋಫಿ ಮೇಲೆ ಕಾಲು ಹಾಕಿ ಕುಳಿತ ನಂತರದಲ್ಲಿ ಅವರ ವಿರುದ್ಧ ಹಲವು ರೀತಿಯಲ್ಲಿ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿವೆ. ಅದರಲ್ಲೂ ಮಿಚೆಲ್‌ ಮಾರ್ಷ್‌ ಅವರ ನಡೆಯ ಕುರಿತು ಪರ ವಿರೋಧದ  ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಈ ಬಗ್ಗೆ ಹಲವು ವರದಿಗಳು ಕೂಡ ಬಂದಿದ್ದವು

ಆದರೆ ಮಿಚೆಲ್‌ ಮಾರ್ಷ್‌ ಅವರು ಟ್ರೋಫಿ ಮೇಲೆ ಕಾಲಿಟ್ಟಿದ್ದಕ್ಕಾಗಿ ಅವರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಎಫ್‌ಐಆರ್‌ ದಾಖಲಿಸಿ ಇದೀಗ ಮಿಚೆಲ್‌ ಮಾರ್ಷ್‌ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಸುದ್ದಿಯ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ವಿಶ್ವಕಪ್ ಗೆದ್ದ ನಂತರ ಟ್ರೋಫಿ ಮೇಲೆ ಮಿಚೆಲ್ ಮಾರ್ಶ್ ಕಾಲಿಟ್ಟಿದ್ದು ನಿಜ. ಆ ಫೋಟೊವನ್ನು ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದಾದ ಬಳಿಕೆ ಮಿಚೆಲ್‌ ಮಾರ್ಷ್‌ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಆಕ್ರೋಶ ಕೂಡ ವ್ಯಕ್ತವಾಗಿದೆ.

ಸಾಕಷ್ಟು ಮಂದಿ ಮಾರ್ಷ್‌ ಅವರ ಬೆಂಬಲಕ್ಕೆ ಕೂಡ ನಿಂತಿದ್ದರು. ಇದಾದ ಕೆಲ ದಿನಗಳ ಬಳಿಕ ಮಿಚೆಲ್‌ ಮಾರ್ಷ್‌ ಅವರ ವಿರುದ್ಧ ದೂರನ್ನು ಕೂಡ ದಾಖಲಿಸಲಾಗಿತ್ತು. ಆದರೆ ಇದುವರೆಗೂ ಮಾರ್ಷ್‌ ಅವರ ವಿರುದ್ಧ ಯಾವುದೇ ರೀತಿಯ FIR ದಾಖಲಾಗಿಲ್ಲ ಎಂದು ಆಲಿಘರ್‌ ಪೋಲಿಸರು ಮಾಹಿತಿಯನ್ನು ನೀಡಿದ್ದಾರೆ. ಹಾಗಾಗಿ ಮಿಚೆಲ್‌ ಮಾರ್ಷ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂಬುದು ಸುಳ್ಳಿನಿಂದ ಕೂಡಿದ ಪೋಸ್ಟ್‌ ಆಗಿದೆ.

Leave a Reply

Your email address will not be published. Required fields are marked *