Fact Check | ವಿಮಾನದಲ್ಲಿ ರಾಹುಲ್‌ ಗಾಂಧಿಯೊಂದಿಗೆ ಮಹಿಳೆ ನೋವು ತೋಡಿಕೊಂಡಿದ್ದಾರೆ ಹೊರತು ತರಾಟೆ ತೆಗೆದುಕೊಂಡಿಲ್ಲ

ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸುದ್ದಿಯೊಂದು ವೈರಲ್‌ ಆಗಿದೆ ಅದರಲ್ಲಿ “ಕಾಶ್ಮೀರದ ವಿಚಾರದಲ್ಲಿ ಮೋದಿಜಿಯವರು ಮಾಡಿದ ಒಳ್ಳೆಯ ಕಾರ್ಯಗಳಿಗೆ ಏಕೆ ಅಡ್ಡಿಪಡಿಸುತ್ತಿದ್ದೀರಿ ಎಂದು ರಾಹುಲ್ ಗಾಂಧಿಯವರನ್ನು ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ” ಎಂದು ಹಂಚಿಕೊಳ್ಳಲಾಗುತ್ತಿದೆ.

ಸಾಕಷ್ಟು ಜನ ತಮ್ಮ ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆಯಲ್ಲಿ ರಾಹುಲ್‌ ಗಾಂಧಿಗೆ ಮಹಿಳೆಯಿಂದ ಛೀಮಾರಿ. ಮಹಿಳೆಯ ಪ್ರಶ್ನೆಗೆ ಉತ್ತರ ಕೊಡದೆ ತಬ್ಬಿಬ್ಬಾದ ರಾಹುಲ್‌ ಗಾಂಧಿ ಎಂದು ಹಂಚಿಕೊಳ್ಳಲಾಗುತ್ತಿದೆ. ಹೀಗೆ ಹೆಚ್ಚು ಹಂಚಿಕೊಳ್ಳಲಾಗುತ್ತಿರುವುದು ಬಲಪಂಥಿಯ ಖಾತೆಗಳಲ್ಲಿ ಮತ್ತು ಬಿಜಪಿ ಬೆಂಬಲಿಗೆ ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ  ವಿಮಾನವೊಂದರಲ್ಲಿ ರಾಹುಲ್ ಗಾಂಧಿಯೊಂದಿಗೆ ಮಹಿಳೆ ಮಾತನಾಡುತ್ತಿರುವ ವಿಡಿಯೋ 20 ಆಗಸ್ಟ್‌ 2019 ರದ್ದಾಗಿದೆ. 370ನೇ ವಿಧಿ ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಲು ತೆರಳಿದ್ದ ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷಗಳ ನಿಯೋಗವನ್ನು ಕೇಂದ್ರ ಸರ್ಕಾರ ವಾಪಸ್ ದೆಹಲಿಗೆ ಕಳುಹಿಸಿತ್ತು.

ಹೀಗೆ ವಾಪಸ್ಸು ಬರುತ್ತಿದ್ದ ಸಂದರ್ಭದಲ್ಲಿ ವಿಮಾನದಲ್ಲಿ ಕಾಶ್ಮೀರಿ ಮಹಿಳೆಯೊಬ್ಬರು ರಾಹುಲ್ ಗಾಂಧಿ ಮುಂದೆ 370ನೇ ವಿದಿ ರದ್ದತಿಯ ನಂತರ ತಾವು ಅನುಭವಿಸುತ್ತಿದ್ದ ಸಂಕಷ್ಟಗಳ ಕುರಿತು ಕಾಂಗ್ರೆಸ್‌ ನಾಯಕನ ಬಳಿ ಅಳಲು ತೋಡಿಕೊಂಡಿದ್ದಾರೆ. ಬಳಿಕ ರಾಹುಲ್‌ ಗಾಂಧಿ ಅವರು ಆ ಮಹಿಳೆಯನ್ನು ಸಂತೈಸಿದ್ದಾರೆ.

ಇನ್ನು ಇದೇ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್‌ ಕಾಶ್ಮೀರದಲ್ಲಿ 370 ವಿಧಿ ರದ್ದತಿಯಿಂದ ನೊಂದ ಮಹಿಳೆ ಅವರ ಕಷ್ಟವವನ್ನು ರಾಹುಲ್‌ ಗಾಂಧಿ ಅವರ ಬಳಿ ಹೇಳಿಕೊಂಡಿದ್ದಾರೆ ಎಂದು ಬರೆದು ಪೂರ್ತಿ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿತ್ತು. ಆದರೆ ಅದೇ ಕ್ಲಿಪ್‌ ಅನ್ನು ಬಳಸಿಕೊಂಡಿರುವ ಕೆಲ ಕಿಡಿಗೇಡಿಗಳು ಅದರಲ್ಲಿನ ಕೆಲ ಅಂಶಗಳನ್ನು ಕಟ್‌ ಮಾಡಿ ಕೇವಲ ಮಹಿಳೆ ಮಾತನಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡು ವ್ಯಾಪಕವಾಗಿ ಸುಳ್ಳನ್ನು ಹಬ್ಬಿದ್ದಾರೆ.


ಇದನ್ನೂ ಓದಿ : Fact Check | ಇಸ್ರೇಲ್‌-ಹಮಾಸ್‌ ಸಂಘರ್ಷಕ್ಕೆ ಸಂಬಂಧ ಕಲ್ಪಸಿ ಸ್ಕ್ರಿಪ್ಟೆಡ್ (ನಾಟಕೀಯ) ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *