Fact Check: ಅಮೆರಿಕದ ಜನತೆ ರಾಹುಲ್ ಗಾಂಧಿ ಭಾರತದವರೇ? ಅಥವಾ ಪಾಕಿಸ್ತಾನದವರೇ? ಎಂದು ಕೇಳಿದ್ದಾರೆ ಎಂಬುದು ಸುಳ್ಳು
ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇತ್ತೀಚೆಗೆ ಮೂರು ದಿನಗಳ ಕಾಲ ಅಮೇರಿಕಕ್ಕೆ ಭೇಟಿ ನೀಡಿದ್ದರು. ಈ ಬೆನ್ನಲ್ಲೇ ಗಾಂಧಿಯವರ ರಾಷ್ಟ್ರೀಯತೆಯನ್ನು ಪ್ರಶ್ನಿಸುವ ಅಮೇರಿಕ ಮೂಲದ ಇಂಗ್ಲಿಷ್ ಆವೃತ್ತಿಯ ಪತ್ರಿಕೆಯ ಲೇಖನದ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ರಾಹುಲ್ ಗಾಂಧಿ ಭಾರತದಿಂದ ಬಂದಿದ್ದಾರೋ ಅಥವಾ ಪಾಕಿಸ್ತಾನದಿಂದ ಬಂದಿದ್ದಾರೋ” ಎಂದು ಅಮೇರಿಕನ್ನರು ಕೇಳುತ್ತಿದ್ದಾರೆ. ಮತ್ತು ರಾಹುಲ್ ಗಾಂಧಿ ಭಾರತದ ಬಗ್ಗೆ ಮಾತನಾಡುವಾಗ ಭಾರತದ ಶತ್ರುಗಳ ಹಾಗೆ ವರ್ತಿಸುತ್ತಾರೆ. ಇದು ಭಾರತ ದೇಶಕ್ಕೆ ಎಂತಹ ಅವಮಾನ! ಎಂಬ ಶೀರ್ಷಿಕೆಯನ್ನು…