Fact Check: ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರ ಕುರಿತು ರಾಹುಲ್ ಗಾಂಧಿ ಅವಹೇಳನಕಾರಿ ಬೈಗುಳವನ್ನು ಪ್ರಯೋಗಿಸಿಲ್ಲ

ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣದ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮೋದಿಯವರಿಗೆ ಅವಹೇಳನಕಾರಿ ಬೈಗುಳವನ್ನು ಪ್ರಯೋಗಿಸಿದ್ದಾರೆ ಎನ್ನಲಾದ ವೀಡಿಯೋ ತುಣುಕೊಂದನ್ನು ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ.

5 ಸೆಕೆಂಡುಗಳ ಈ ವಿಡಿಯೋದಲ್ಲಿ ಮೋದಿ ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾರೆ. ನಂತರ ರಾಹುಲ್ ಗಾಂಧಿ ಬೈಗುಳದ ಪದಗಳನ್ನು ಉಚ್ಚರಿಸುವುದನ್ನು ಅದು ತೋರಿಸುತ್ತದೆ, ಆದರೆ ಘೋಷಣೆಗಳು ಹಿನ್ನೆಲೆಯಲ್ಲಿ ಮುಂದುವರಿಯುತ್ತವೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರ ಚೊಚ್ಚಲ ಭಾಷಣದ ಭಾಗಗಳನ್ನು ಸ್ಪೀಕರ್ ಓಂ ಬಿರ್ಲಾ ಜುಲೈ 2 ರಂದು ಅಧಿಕೃತ ದಾಖಲೆಗಳಿಂದ ತೆಗೆಸಿಹಾಕಿದ್ದಾರೆ. ಭಾಷಣದಲ್ಲಿ, ರಾಹುಲ್ ಗಾಂಧಿ ಭಾರತೀಯ ಜನತಾ ಪಕ್ಷ ಮತ್ತು ಅದರ ಹಿಂದುತ್ವದ ರಾಜಕಾರಣದ ಮೇಲೆ ದಾಳಿ ಮಾಡಿದ್ದರು, ಅವರು ಜನರನ್ನು ವಿಭಜಿಸಿದ್ದಾರೆ ಎಂದು ಆರೋಪಿಸಿದರು.

ಸಧ್ಯ ಈಗ ರಾಹುಲ್ ಗಾಂಧಿಯವರ ವಿಡಿಯೋವನನ್ನು ಸಾಕಷ್ಟು ಜನ ಎಕ್ಸ್‌ನಲ್ಲಿ “ಅವರ ಮುಖ ನೋಡಿ ಅವರು ಭಾರತದ ಪ್ರಧಾನಿಯನ್ನು ಮಾದ**ಚೌ** ಎಂದು ನಿಂದಿಸುತ್ತಿದ್ದಾರೆ. ಅವರ ಮೈಕ್ ಆಫ್ ಆಗಿರುವುದು ಅವರ ಅದೃಷ್ಟ.” ಎಂಬ ಶಿರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. 

ಫ್ಯಾಕ್ಟ್‌ಚೆಕ್: ಮೂಲ ಭಾಷಣವನ್ನು ಜುಲೈ 2, 2024 ರಂದು ಸಂಸದ್ ಟಿವಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ಗೆ ಅಪ್ಲೋಡ್ ಮಾಡಲಾಗಿದೆ, ಅಲ್ಲಿ ಮೋದಿಯವರ ಭಾಷಣದ ಸಮಯದಲ್ಲಿ ರಾಹುಲ್ ಗಾಂಧಿ ಇತರ ವಿರೋಧ ಪಕ್ಷದ ನಾಯಕರೊಂದಿಗೆ ‘ಭಾರತ್ ಜೋಡೋ’ ಎಂದು ಪಠಿಸುತ್ತಿರುವುದನ್ನು ಕಾಣಬಹುದು.

26:47 ನಿಮಿಷದಿಂದ ಪ್ರಾರಂಭವಾಗುವ ವೀಡಿಯೊದಲ್ಲಿ, ಪ್ರಧಾನಿ ಮೋದಿ ಸಂಸತ್ತಿನಲ್ಲಿ ಭಾರತೀಯ ಸಂವಿಧಾನದ ಶಿಲ್ಪಿ ಭೀಮರಾವ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತಿರುವಾಗ ವಿರೋಧ ಪಕ್ಷದ ನಾಯಕರು ‘ಭಾರತ್ ಜೋಡೋ’ ಎಂದು ಕೂಗಲು ಪ್ರಾರಂಭಿಸಿದರು. ನಂತರ, 26:56 ನಿಮಿಷಗಳ ಅಂತರದಲ್ಲಿ, ರಾಹುಲ್ ಗಾಂಧಿ ಘೋಷಣೆಗಳಲ್ಲಿ ಸೇರುವುದನ್ನು ಕ್ಯಾಮೆರಾ ಸೆರೆಹಿಡಿದಿದೆ.

 

ಇದಲ್ಲದೆ, ರಾಹುಲ್ ಅವರ ತುಟಿಗಳು “ಭಾರತ್ ಜೋಡೋ” ಎಂದು ಉಚ್ಚರಿಸುವುದನ್ನು ನಾವು ಗಮನಿಸಿದ್ದೇವೆ.

ಪ್ರಸಾರದ ವೈರಲ್ ಭಾಗವನ್ನು ಮೂಲ ವೀಡಿಯೊದಲ್ಲಿ 26:57 ನಿಮಿಷಗಳಿಂದ 27:03 ನಿಮಿಷಗಳವರೆಗೆ ವೀಕ್ಷಿಸಬಹುದು. ಸಂಸತ್ತಿನ ಒಳಗೆ “ಭಾರತ್ ಜೋಡೋ” ಘೋಷಣೆಗಳನ್ನು ಕೂಗುವ ಪ್ರಸಾರದ ಭಾಗವನ್ನು ಸಹ ಕೆಳಗೆ ನೋಡಬಹುದು.

 

ಜುಲೈ 2, 2024 ರಂದು, ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು ಮತ್ತು ಐತಿಹಾಸಿಕವಾಗಿ ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷವು ಮೀಸಲಾತಿಯ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಅವರು ಆರೋಪಿಸಿದರು. ದಲಿತರು ಮತ್ತು ಹಿಂದುಳಿದ ಸಮುದಾಯಗಳನ್ನು ಕಾಂಗ್ರೆಸ್ ಪಕ್ಷವು ಅನ್ಯಾಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿ ಭೀಮರಾವ್ ಅಂಬೇಡ್ಕರ್ ಅವರು ಜವಾಹರಲಾಲ್ ನೆಹರೂ ಅವರ ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದರು ಎಂದು ಮೋದಿ ಹೇಳಿದರು.

ಪ್ರಧಾನಿ ಮೋದಿಯವರ ಭಾಷಣಕ್ಕೆ ಪ್ರತಿಕ್ರಿಯೆಯಾಗಿ, ಹಲವಾರು ವಿರೋಧ ಪಕ್ಷದ ನಾಯಕರು ಅವರ ಹೇಳಿಕೆಗೆ ಪ್ರತಿಯಾಗಿ ‘ಭಾರತವನ್ನು ಒಗ್ಗೂಡಿಸಿ’ ಎಂದು ಅನುವಾದಿಸುವ ‘ಭಾರತ್ ಜೋಡೋ’ ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು.

ಜುಲೈ 3 ರಂದು, ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಪ್ರಧಾನಿ ಮೋದಿ ಉತ್ತರ ನೀಡುತ್ತಿದ್ದಾಗ ಪ್ರತಿಪಕ್ಷಗಳು ರಾಜ್ಯಸಭೆಯಿಂದ ಹೊರನಡೆದವು. ಮಧ್ಯಪ್ರವೇಶಿಸಲು ಅವಕಾಶ ನಿರಾಕರಿಸಿದ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು ಮತ್ತು ಪ್ರಧಾನಿ ಮೋದಿಯವರ ಭಾಷಣದ ಸಮಯದಲ್ಲಿ ವಿರೋಧ ಪಕ್ಷದ ಸಂಸದರನ್ನು ಮಾತನಾಡದಂತೆ ಅನ್ಯಾಯವಾಗಿ ತಡೆಯಲಾಗಿದೆ ಎಂದು ಆರೋಪಿಸಿದರು.


ಇದನ್ನು ಓದಿ: ಎಡಿಟ್ ವಿಡಿಯೋ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿ ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ.!


ವೀಡಿಯೋ ನೋಡಿ: ಮೋದಿ ಪ್ರಧಾನಿಯಾದ ನಂತರ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದಿಲ್ಲ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *