Fact Check: ಅಮರ್ತ್ಯ ಸೇನ್ ಮತ್ತು ಮನಮೋಹನ್ ಸಿಂಗ್ ಅವರ ಹೆಣ್ಣುಮಕ್ಕಳು ನಳಂದ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ 2730 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿಲ್ಲ
ನಳಂದ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಅವಧಿಯಲ್ಲಿ ಅಮರ್ತ್ಯ ಸೇನ್ ಅವರು 2730 ಕೋಟಿ ರೂ.ಗಳ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಡಾ. ಮನಮೋಹನ್ ಸಿಂಗ್ ಅವರ ಹೆಣ್ಣುಮಕ್ಕಳು ಮತ್ತು ಆಪ್ತರನ್ನು ಅರ್ಹತೆಯಿಲ್ಲದೆ ಪ್ರಮುಖ ಹುದ್ದೆಗಳಿಗೆ ನೇಮಿಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ(ಇಲ್ಲಿ ). ಮನಮೋಹನ್ ಸಿಂಗ್ ಅವರ ಹೆಣ್ಣುಮಕ್ಕಳು ಸೇರಿದಂತೆ ಇಲ್ಲಿ ನೇಮಕಗೊಂಡವರು ವಿಶ್ವವಿದ್ಯಾಲಯಕ್ಕೆ ಕೊಡುಗೆ ನೀಡದೆ ವೇತನವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದಲ್ಲದೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಬೇಜವಾಬ್ದಾರಿಯುತ ಸಮಿತಿಯನ್ನು ವಜಾಗೊಳಿಸಿದೆ…