ಇಸ್ರೇಲ್ ಹಮಾಸ್ ಯುದ್ಧ ಆರಂಭವಾದಗಿನಿಂದ ಹಲವು ರೀತಿಯಾದ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿವೆ. ಇದೀಗ ಇದಕ್ಕೆ ಪೂರಕ ಎಂಬಂತೆ ಮುಸಲ್ಮಾನ ಯುವಕರು ಕೆಟ್ಟವರು ಮತ್ತು ಪ್ಯಾಲೆಸ್ಟೈನ್ ವಿರುದ್ಧ ನಕಾರಾತ್ಮಕ ಭಾವನೆ ಎಲ್ಲೆಡೆ ಮೂಡಿಸುವ ಉದ್ದೇಶದಿಂದ ಹಲವರು ವಿವಿಧ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳನ್ನು ಸಾಕಷ್ಟು ಮಂದಿ ಪರಿಶೀಲನೆ ನಡೆಸದ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಿಂದ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕಳೆದ ಒಂದು ವಾರದಿಂದ ಪ್ಯಾಲೆಸ್ಟೈನ್ ಯುವಕರು ಸ್ತ್ರೀ ಪೀಡಕರು ಎಂಬ ರೀತಿಯಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಅದರಲ್ಲೂ ಕೆಲವರು ಈ ಘಟನೆಯನ್ನ ತಮ್ಮ ಕಣ್ಣ ಮುಂದೆಯೇ ನಡೆದಿದೆ ಎಂಬಂತೆ ಹಂಚಿಕೊಂಡಿದ್ದಾರೆ. “ಫ್ರೆಂಚ್ ಅಂಡರ್ ಪಾಸ್‌ನಲ್ಲಿ ಸುಮಾರು 10 ಮಂದಿ ಹಮಾಸ್ ಪರ ವಲಸಿಗ ನಿರಾಶ್ರಿತರು ಮೂವರು ಇಸ್ರೇಲಿ ಹೆಣ್ಣು ಮಕ್ಕಳ ಮೇಲೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ. ಇದಕ್ಕೆ ಇಸ್ರೇಲಿ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದರೆ ಏನಾಗುತ್ತದೆ ಎಂಬುದನ್ನ ಆ ಯುವತಿಯರು ತೋರಿಸಿಕೊಟ್ಟಿದ್ದಾರೆ” ಎಂಬ ತಲೆಬರಹದೊಂದಿಗೆ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ
ಈ ಕುರಿತು ಸತ್ಯ ಶೋಧನೆ ನಡೆಸಿದಾಗ ಈ ವಿಡಿಯೋದಲ್ಲಿ 10 ಮಂದಿ ಯುವಕರು ಮೂವರು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸುವ ಸಂದರ್ಭದಲ್ಲಿ ಆ ಯುವತಿಯರು ತಮ್ಮನ ತಾವು ರಕ್ಷಿಸಿಕೊಳ್ಳುತ್ತಿರುವುದು ಪೂರ್ವ ನಿಯೋಜಿತವಾಗಿದೆ. ಇದು ಸಿಯುಸಿ ಸಂಸ್ಥೆಗೆ ಸೇರಿದ ವಿಡಿಯೋವಾಗಿದೆ. ಇದೇ ವಿಡಿಯೋವನ್ನು ಈಗ ಹಲವು ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
View this post on Instagram
ಆದರೆ ಈ ವಿಡಿಯೋವನ್ನು ಸ್ಟಂಟ್ ಸ್ಕೂಲಿನ ವಿದ್ಯಾರ್ಥಿಗಳು ಪ್ರದರ್ಶಿಸಿದ್ದು ಇದು ಪೂರ್ವ ನಿಯೋಜಿತ ವಿಡಿಯೋವಾಗಿದೆ ಎಂಬುದನ್ನು ಸಿಯುಸಿ ಸಂಸ್ಥೆಯ ಮುಖ್ಯಸ್ಥರು ಖಚಿತಪಡಿಸಿದ್ದಾರೆ. ಹಾಗಾಗಿ ಈ ವಿಡಿಯೋಗೂ ಇಸ್ರೇಲ್ ಹಮಾಸ್ ಸಂಘರ್ಷಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂಬುದು ಕೂಡ ಈಗ ಸಾಭೀತಾಗಿದೆ.
ಇದನ್ನೂ ಓದಿ : ಶಿಕ್ಷಕನೋರ್ವ ಬ್ರಾಹ್ಮಣ ಬಾಲಕಿಗೆ ಒತ್ತಾಯಪೂರ್ವಕವಾಗಿ ಮೊಟ್ಟೆ ತಿನ್ನಿಸಿದ್ದಾರೆ ಎಂಬುದು ಸುಳ್ಳು
ಈ ವಿಡಿಯೋ ನೋಡಿ : ಶಿಕ್ಷಕನೋರ್ವ ಬ್ರಾಹ್ಮಣ ಬಾಲಕಿಗೆ ಒತ್ತಾಯಪೂರ್ವಕವಾಗಿ ಮೊಟ್ಟೆ ತಿನ್ನಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ