ಉತ್ತರ ಪ್ರದೇಶದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಹಿಂದುವೇ ಹೊರತು ಮುಸ್ಲಿಂ ಅಲ್ಲ

ಉತ್ತರ ಪ್ರದೇಶ

ಭಾರತದಲ್ಲಿ ದಿನಂಪ್ರತೀ ಮುಸ್ಲೀಮರಿಗೆ ಸಂಬಂಧಿಸಿದ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇವುಗಳ ಉದ್ದೇಶ ಮುಸ್ಲಿಂ ಸಮುದಾಯದ ಕುರಿತು ಜನರಲ್ಲಿ  ದ್ವೇಷ ಹುಟ್ಟಿಸುವುದೇ ಆಗಿದೆ. ಆದ್ದರಿಂದಲೇ ಬಲಪಂಥೀಯರು ಮತ್ತು ಬಿಜೆಪಿ ಬೆಂಬಲಿಗರು ಮುಸ್ಲೀಮರ ವಿರುದ್ಧ ನಿರಂತರವಾದ ಆರೋಪಗಳಲ್ಲಿ ತೊಡಗಿದ್ದಾರೆ.

ಇತ್ತೀಚೆಗೆ, ಬಾಲಕಿಯರ ಶಾಲೆಗೆ ಪ್ರವೇಶಿಸಿ “ಲೈಂಗಿಕ ಕಿರುಕುಳ” ನೀಡಿದ ಮುಸ್ಲಿಂ ಯುವಕನಿಗೆ ಥಳಿಸಿ ಪಾಠ ಕಲಿಸಿದ ಹಿಂದು ಬಾಲಕಿಯರು ಎಂಬ ಹೇಳಿಕೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಹಲವು ಜನ ಬಲಪಂಥೀಯರು ಮತ್ತು ಬಿಜೆಪಿ ಬೆಂಬಲಿಗರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಅದನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. 

ಫ್ಯಾಕ್ಟ್‌ಚೆಕ್: ಇದು 2018ರಲ್ಲಿ ಉತ್ತರ ಪ್ರದೇಶದ ಬಘ್ಪತ್‌ಗೆ ಸಂಬಂಧಿಸಿದ ವಿಡಿಯೋ ಆಗಿದೆ. ಧರ್ಮ್ ಸಿಂಗ್ ಸರಸ್ವತಿ ಬಾಲಿಕ ಇಂಟರ್ ಕಾಲೇಜಿನ ವಿದ್ಯಾರ್ಥಿನಿಯರು ತಮ್ಮ ಮೇಲೆ ಚುಡಾಯಿಸಲು ಬಂದ ವ್ಯಕ್ತಿಯೊಬ್ಬನನ್ನು ಹಿಡಿದು ತಳಿಸಿದ್ದಾರೆ. ಈಗಾಗಲೇ ಆರೋಪಿ ಕಪೀಲ್ ಚೌಹಾನ್ ನನ್ನು ಸೆಕ್ಷೆನ್ 294ರ ಅಡಿಯಲ್ಲಿ ಬಂದಿಸಲಾಗಿದೆ ಎಂದು ಬಘ್ಪತ್‌ ನಗರದ ಸ್ಟೇಷನ್ ಹೌಸ್ ಆಫೀಸರ್(SHO) ಸಂಜೀವ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಕುರಿತು ದ ಕ್ವಿಂಟ್ ಮತ್ತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿವೆ. ಉತ್ತರ ಪ್ರದೇಶದ ಬಘ್ಪತ್ ಪೋಲೀಸರು ತಮ್ಮ ಅಧಿಕೃತ X ಖಾತೆಯಲ್ಲಿ ಈ ಪ್ರಕರಣದ ಕುರಿತು ಟ್ವಿಟ್ ಮಾಡಿದ್ದಾರೆ. ಆದ್ದರಿಂದ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಹಿಂದುವೇ ಹೊರತು ಮುಸ್ಲಿಂ ಅಲ್ಲ.


ಇದನ್ನು ಓದಿ: Fact Check: ಶಿಕ್ಷಕನೋರ್ವ ಬ್ರಾಹ್ಮಣ ಬಾಲಕಿಗೆ ಒತ್ತಾಯಪೂರ್ವಕವಾಗಿ ಮೊಟ್ಟೆ ತಿನ್ನಿಸಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: Video | ರೋಹಿತ್ ಶರ್ಮಾ ಕುರಿತು ಹಬ್ಬುತ್ತಿವೆ ಸಾಲು ಸಾಲು ಸುಳ್ಳು ಸುದ್ದಿಗಳು | Rohit Sharma | Team India


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *