Fact Check | ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಗೆ ಜಿಹಾದಿಗಳು ನೀರು ಎರಚಿದ್ದಾರೆಂಬುದು ಸುಳ್ಳು
“ನಂಜನಗೂಡಿನಲ್ಲಿ ಅಂಧಕಾಸುರ ಸಂಹಾರದ ದಿನಾಚರಣೆಯ ಸಂದರ್ಭದಲ್ಲಿ ಪಾರ್ವತಿ-ಶಿವನ ಉತ್ಸವ ಮೂರ್ತಿ ಮೆರವಣಿಗೆಯ ವೇಳೆ ಜಿಹಾದಿಗಳು ಮೂರ್ತಿಗೆ ನೀರು ಎರಚಿ ಅವಮಾನಿಸಿದರು. ಹಿಂದೂಗಳು ಎಚ್ಚೆತ್ತುಕೊಳ್ಳಬೇಕು” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸಾಕಷ್ಟು ಮಂದಿ ಇದೇ ಸುದ್ದಿಯನ್ನು ನಿಜವೆಂದು ಭಾವಿಸಿ ಹಂಚಿಕೊಳ್ಳುತ್ತಿದ್ದಾರೆ. ನಂಜನಗೂಡು ಶ್ರೀ ಕಂಟೇಶ್ವರನಿಗೆ ಅಪಮಾನ ಕೆಲ ಜಿಹಾದಿಗಳು ಎಂಜಲು ನೀರು ಎರಚಿ ಅಪಮಾನಿಸಿದ್ದಾರೆ ಅಲ್ಲಿನ ಹಿಂದೂಗಳು ಇನ್ನಾ ಬದುಕಿದ್ದೀರಾ 😡😡😡 pic.twitter.com/r87R9YNtAF — wHatNext 🚩 (@raghunmurthy07)…