Fact Check | ಮುಸ್ಲಿಂ ವ್ಯಕ್ತಿಯೊಬ್ಬ ಹಂದಿ ಮಾಂಸದ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದು Prank ವಿಡಿಯೋವಾಗಿದೆ

“ಈ ವಿಡಿಯೋ ನೋಡಿ ಡಚ್ ಸೂಪರ್ ಮಾರ್ಕೆಟ್‌ನಲ್ಲಿ ಮುಸ್ಲಿಂ ವಲಸಿಗರೊಬ್ಬರು ಹಂದಿ ಮಾಂಸದ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಈತನಿಗೆ ಸರಿಯಾದ ಶಿಕ್ಷೆಯಾಗಲೇ ಬೇಕು.” ಎಂಬ ಬರಹಗಳೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನ ಸಾಕಷ್ಟು ಮಂದಿ ನಿಜವೆಂದು ನಂಬಿ ಮುಸಲ್ಮಾನ ಸಮುದಾಯದ ಬಗ್ಗೆ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ.

ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ನೈಜವಾಗಿ ನಡೆದಿರುವ ಘಟನೆಯಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮತ್ತು ಈ ವಿಡಿಯೋ ಚಿತ್ರಿಕರಣ ಮಾಡುತ್ತಿರುವವರು ಕೂಡ ಉದ್ದೇಶ ಪೂರಕವಾಗಿಯೇ ಚಿತ್ರೀಕರಣ ನಡೆಸಿದ್ದಾರೆ ಎಂಬುದು ತಿಳಿಯುತ್ತದೆ. ಆದರೂ ವಿಡಿಯೋ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಹಲವು  ಮಾಹಿತಿಗಳು ಬಹಿರಂಗವಾಗಿದೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಿದಾಗ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಕೆಲ ಮಂದಿ ಮೂತ್ರ ವಿಸರ್ಜನೆ ಮಾಡುತ್ತಿರುವ ವ್ಯಕ್ತಿ ಡ್ಯಾನಿ ಡೆರಿಕ್ಸ್‌ ಎಂದು ಕಮೆಂಟ್‌ ಮಾಡಿದ್ದಾರೆ. ಜೊತೆಗೆ ಕೆಲ ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ ಈ ಕುರಿತು ಹಲವು ಸುದ್ದಿಗಳು ಪತ್ತೆಯಾಗಿದೆ. ಅದರಲ್ಲಿ ಒಂದು ಇನ್‌ಸ್ಟಾಗ್ರಾಮ್‌ ಖಾತೆ ಕಾಣಿಸಿಕೊಂಡಿದ್ದು ಅದನ್ನು ಪರಿಶೀಲನೆ ನಡೆಸಿದಾಗ ಅದು ಡ್ಯಾನಿ ಡೆರಿಕ್ಸ್‌ ಎಂಬ ವ್ಯಕ್ತಿಗೇ ಸೇರಿದ್ದು ಎಂಬುದು ಖಚಿತವಾಗಿದೆ.

ಇನ್ನು ಈತ ಮುಸಲ್ಮಾನ ವ್ಯಕ್ತಿಯೂ ಅಲ್ಲ, ವಲಸಿಗನೂ ಅಲ್ಲ. ಈತ ಸಾಮಾಜಿಕ ಜಾಲತಾಣದಲ್ಲಿ ಫ್ರ್ಯಾಂಕ್‌ ವಿಡಿಯೋಗಳನ್ನು ಮಾಡುವ ಮೂಲಕ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾನೆ. ಜೊತೆಗೆ ಈತನ ಹಲವು ವಿಡಿಯೋಗಳು ವಿಡಂಭಾನಾತ್ಮಕವಾಗಿದ್ದು, ಕೆಲವೊಂದು ತೀವ್ರ ಸ್ವರೂಪದ ಹಾಸ್ಯಾತ್ಮಕ ವಿಡಿಯೋಗಳನ್ನು ಕೂಡ ಮಾಡಿದ್ದಾನೆ.

ಇನ್ನು ವೈರಲ್‌ ಆಗಿರವ ವಿಡಿಯೋದಲ್ಲಿ ಈತ ಸಾರ್ವಜನಿಕ ಸ್ಥಳದಲ್ಲಿ ವಾಟರ್ ಬಾಟೆಲ್‌ನಲ್ಲಿ ನೀರು ತುಂಬಿಕೊಂಡು ಮೂತ್ರ ವಿಸರ್ಜನೆ ಮಾಡುವಂತೆ ಫ್ರ್ಯಾಂಕ್‌ ಮಾಡಿದ್ದಾನೆ. ಆದರೆ ಇದನ್ನೆ ದುರ್ಬಳಕೆ ಮಾಡಿಕೊಂಡಿರುವ ಕೆಲ ಕಿಡಿಗೇಡಿಗಳು ಈತನನ್ನು ಮುಸ್ಲಿಂ ವ್ಯಕ್ತಿ ಮತ್ತು ವಲಸಿಗ ಎಂದು ಬಿಂಬಿಸಿ ಈತ ನಿಜವಾಗಿ ಹಂದಿ ಮಾಂಸದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆಂದು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ.

ಇನ್ನು ಇದರ ಕುರಿತು ಯುಟ್ಯೂಬ್‌ ವಿಡಿಯೋವೊಂದರಲ್ಲೂ ಕೂಡ ಸಾಕಷ್ಟು ಮಂದಿ ಸ್ಪಷ್ಟನೆಯನ್ನ ನೀಡಿದ್ದು ತಮಾಷೆಯ ವಿಡಿಯೋದೊಂದಿಗೆ ಸುಳ್ಳನ್ನು ಹರಡಲಾಗುತ್ತಿದೆ ಎಂದು ಹಲವು ಫ್ರ್ಯಾಂಕ್‌ ಮಾಡುವ ಯುವಕರು ಕೂಡ ಸ್ಪಷ್ಟನೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *