Fact Check | ಮಾನಸಿಕ ಅಸ್ವಸ್ಥರೊಬ್ಬರ ಮೇಲಿನ ಹಲ್ಲೆ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ಸಾಮಾಜಿಕ ಮಾಧ್ಯಮದಲ್ಲಿ ಜನರ ಗುಂಪೊಂದು ವ್ಯಕ್ತಿಯನ್ನು ಥಳಿಸುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡು “ಆಂಧ್ರಪ್ರದೇಶದ ಭೀಮಾವರಂ ಪ್ರದೇಶದ ರಾಮಾಲಯದಲ್ಲಿ ಹಿಂದೂ ದೇವತೆಗಳ ವಿಗ್ರಹಗಳನ್ನು ಧ್ವಂಸ ಮಾಡಲು ಯತ್ನಿಸಿದ ಮುಸ್ಲಿಂ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ರಾಡ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ. ಅವರು ಒಂದಷ್ಟು ದೇವಾಲಯಗಳನ್ನು ಧ್ವಂಸ ಮಾಡಲು ಯೋಜನೆಯನ್ನು ಹೊಂದಿದ್ದಾರೆ. ಈಗ ಅದು ಮೊದಲ ಹಂತದಲ್ಲೇ ಗೊತ್ತಾಗಿದೆ” ಎಂದು ಬರೆದುಕೊಳ್ಳಲಾಗಿದೆ. ವಿಡಿಯೋ ನೋಡಿದ ಹಲವು ಮಂದಿ ಇದರ ಹಿನ್ನೆಲೆ ಅರಿಯದೆ, ವಿಡಿಯೋದಲ್ಲಿನ ಹಲ್ಲೆ ದೃಷ್ಯಗಳು ಮತ್ತು ವಿಡಿಯೋದೊಂದಿಗೆ ಶೇರ್ ಮಾಡಲಾಗುತ್ತಿರುವ ಟಿಪ್ಪಣಿಯನ್ನು…