Fact Check : ಅಮಿತಾಬ್ ಬಚ್ಚನ್ ಕೀಲು ನೋವಿನ ಚಿಕಿತ್ಸೆ ಕುರಿತು ಮಾತನಾಡಿಲ್ಲ, ಇದು AI ರಚಿತ ವಿಡಿಯೋ
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಇಂಡಿಯಾ ಟಿವಿಯ ರಜತ್ ಶರ್ಮಾ ನಡುವಿನ ಸಂದರ್ಶನದ ವಿಡಿಯೋದಲ್ಲಿ, ದೀಪಕ್ ಚೋಪ್ರಾ ಎಂಬ ವ್ಯಕ್ತಿ ತನ್ನ ಕೀಲು ನೋವಿನ ಸಮಸ್ಯೆಯನ್ನುಹೇಳಿಕೊಂಡಾಗ ಬಚ್ಚನ್ ಮತ್ತು ಶರ್ಮಾ ಕೀಲು ನೋವಿನ ಸಮಸ್ಯೆಗೆ ಚಿಕಿತ್ಸೆಯನ್ನು ನೀಡಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್ ಚೆಕ್ : ಈ ವೈರಲ್ ವಿಡಿಯೋದ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು, ವಿಡಿಯೋವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಆಡಿಯೋ ಮತ್ತು ದೃಶ್ಯಗಳ ನಡುವಿನ ಲಿಪ್-ಸಿಂಕಿಂಗ್ ಸಮಸ್ಯೆಗಳು ಕಂಡುಬಂದಿವೆ. ಮತ್ತು ಹಲವಾರು…