“ಅಮುಲ್ ‘ಶರಮ್’ ಹೆಸರಿನ ಹೊಸ ಚೀಸ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ”ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಸಾಕಷ್ಟು ಮಂದಿ ಇದು ನಿಜವೆಂದು ಭಾವಿಸಿ ಶೇರ್ ಕೂಡ ಮಾಡುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋದಲ್ಲಿ ಕೈಯಲ್ಲಿ ಚೀಸ್ ಪಾಕೆಟ್ ಅನ್ನು ಹಿಡಿದಿರುವುದು ಕಂಡುಬರುತ್ತದೆ.
ಆ ಪ್ಯಾಕೆಟ್‌ನ ಮೇಲೆ ಅಮುಲ್ ಸಂಸ್ಥೆಯ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದ್ದು ಅದರಲ್ಲಿ ಶರಮ್ ಎಂಬ ಹೆಸರನ್ನು ಕೆಂಪು ಬಣ್ಣದಲ್ಲಿ ಬರೆಯಲಾಗಿದೆ ಇನ್ನು ಪ್ಯಾಕೆಟ್ನ ಮೇಲೆ ಚೀಸ್ ಎಂದು ಬರೆಯಲಾಗಿದೆ.
ಫ್ಯಾಕ್ಟ್‌ಚೆಕ್
ಅಮುಲ್ ಸಂಸ್ಥೆ ನಿಜಕ್ಕೂ ಕೂಡ ಚೀಸ್ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆಯೇ ಎಂದು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಗೂಗಲ್ ನಲ್ಲಿ ಸಾಮಾನ್ಯ ಕೀ ವರ್ಡ್‌ಗಳನ್ನ ಬಳಸಿ ಪರಿಶೀಲನೆಯನ್ನು ನಡೆಸಿತು. ಈ ವೇಳೆ ಹಲವು ಪತ್ರಿಕೆಗಳು ಮತ್ತು ಮಾಧ್ಯಮಗಳ ವರದಿಗಳು ಕಂಡುಬಂದಿದ್ದು ಅಮುಲ್ ಸಂಸ್ಥೆಯು ಕೂಡ ಈ ವಿಚಾರದ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು ಕಂಡುಬಂದಿದೆ.
ISSUED IN PUBLIC INTEREST BY AMUL pic.twitter.com/VjDQXtE6VF
— Amul.coop (@Amul_Coop) December 20, 2023
ಅಮುಲ್ ಸಂಸ್ಥೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ” ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಅಮುಲ್ ಪೋಸ್ಟ್ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಶರಮ್ ಎಂಬ ಚೀಸ್ ಉತ್ಪನ್ನವನ್ನು ಸಂಸ್ಥೆ ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ. ಇದು ನಕಲಿ.” ಎಂದು ಸ್ಪಷ್ಟೀಕರಣ ನೀಡಿದೆ.
ಇನ್ನು ವೈರಲ್ ಆಗಿರುವ ಪೋಸ್ಟ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದು ನಿಜವಾಗಿಯೂ ತೆಗೆದ ಫೋಟೋವಲ್ಲ ಎಂಬುದು ಕೂಡ ಸ್ಪಷ್ಟವಾಗುತ್ತದೆ ಈ ಕುರಿತು ಫ್ಯಾಕ್ಟ್‌ಲೀ ಸಹ ವರದಿ ಮಾಡಿದೆ