Fact Check | ರತನ್‌ ಟಾಟಾ ಅವರು ಭಾರತೀಯ ಸೇನೆಗೆ ಬುಲೆಟ್‌ ಮತ್ತು ಬಾಂಬ್‌ ಪ್ರೂಫ್‌ ಬಸ್‌ ನೀಡಿಲ್ಲ

“ಇತ್ತೀಚೆಗೆ ರತನ್ ಟಾಟಾ ಅವರು ಭಾರತೀಯ ಸೇನೆಗೆ ಬುಲೆಟ್ ಮತ್ತು ಬಾಂಬ್ ಪ್ರೂಫ್ ಬಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಮೆಚ್ಚುಗೆ ಇರಲಿ” ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಸಾಕಷ್ಟು ಮಂದಿ ರತನ್ ಟಾಟಾ ಅವರು ಭಾರತೀಯ ಸೇನೆಗಾಗಿ ಹಲವು ರೀತಿಯ ಉಡುಗೊರೆಯನ್ನು ನೀಡಲಿದ್ದಾರೆ ಎಂಬ ರೀತಿಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಇದೇ ರೀತಿಯ ಬಸ್ಸಿನ ವಾಹನವನ್ನು ಹಲವಾರು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಇದು ರತನ್ ಟಾಟಾ ಅವರು ಭಾರತೀಯ ಸೇನೆಗೆ ನೀಡಿದ ಬಲಶಾಲಿ ವಾಹನ ಎಂದು ಕೂಡ ಬರೆದುಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಕೂಡ ರತನ್ ಟಾಟಾ ಅವರೇ ಸೇನೆಗೆ ನೀಡಿದ ವಾಹನವೇ ಎಂದು ಪರಿಶೀಲನೆ ನಡೆಸಿದಾಗ ಅಸಲಿ ವಿಚಾರ ಬಯಲಾಗಿದೆ

ಫ್ಯಾಕ್ಟ್‌ಚೆಕ್‌

ಈ ಕುರಿತು ಸತ್ಯಶೋಧನೆಯನ್ನು ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ವೈರಲ್ ಆಗಿರುವ ಪೋಸ್ಟ್ ನಲ್ಲಿದ್ದ ಫೋಟೋವನ್ನು ಕ್ರಾಪ್ ಮಾಡಿ ರಿವರ್ಸ್ ಇಮೇಜಿನಲ್ಲಿ ಪರಿಶೀಲನೆ ನಡೆಸಿತು ಈ ವೇಳೆಯಲ್ಲಿ ಈ ವಾಹನದ ಅಸಲಿಯತ್ತು ಬಯಲಾಗಿದೆ. ಮೊದಲು ಪರಿಶೀಲನೆ ನಡೆಸುವಾಗ ಇದೇ ರೀತಿಯ ವಾಹನದ ಹಲವು ಫೋಟೋಗಳು ಕಂಡುಬಂದವು ಇದರ ಜೊತೆಗೆ ಕೆಲ ಸುದ್ದಿಗಳು ಕೂಡ ಕಂಡುಬಂದಿವೆ.

ಅಂತ ಸುದ್ದಿಗಳಲ್ಲಿ ಒಂದು ಸಿಆರ್‌ಪಿಎಫ್ ತಂಡಕ್ಕೆ 2017ರಲ್ಲಿ ಮಿಧಾನಿ ( ಮಿಶ್ರ ಧಾತು ನಿಗಮ ಲಿಮಿಟೆಡ್) ಸಂಸ್ಥೆಯು ಈ ವಾಹನವನ್ನು ಉಡುಗೊರೆಯಾಗಿ ನೀಡಿದೆ ಎಂಬುದು ಖಚಿತವಾಗಿದೆ. ಇನ್ನು ಈ ಕುರಿತು ಈಟಿವಿ ತೆಲಂಗಾಣ ಸುದ್ದಿ ಸಂಸ್ಥೆ ಕೂಡ ವರದಿಯನ್ನು ಮಾಡಿದೆ.

ವರದಿಯ ಪ್ರಕಾರ, 7 ಸೆಪ್ಟೆಂಬರ್ 2017 ರಂದು, ಭಾಭಾ ಕವಚ್ ಜೊತೆಗೆ ಶಸ್ತ್ರಸಜ್ಜಿತ ಬಸ್ ಮತ್ತು ಮಿಧಾನಿ ತಯಾರಿಸಿದ ಹಗುರವಾದ ಬುಲೆಟ್‌ ಪ್ರೂಫ್‌ ಜಾಕೆಟ್ ಅನ್ನು CRPF ಗೆ ಹಸ್ತಾಂತರಿಸಲಾಯಿತು.

ವೈರಲ್ ಫೋಟೋವನ್ನು CRPF ನ ಅಧಿಕೃತ X ಹ್ಯಾಂಡಲ್‌ನಲ್ಲಿ 7 ಸೆಪ್ಟೆಂಬರ್ 2017 ರಂದು ಪೋಸ್ಟ್ ಮಾಡಲಾಗಿದೆ. ಈ ವರದಿಗಳಲ್ಲಿ ಅಥವಾ CRPF ನ ಪೋಸ್ಟ್‌ಗಳಲ್ಲಿ ಎಲ್ಲಿಯೂ ರತನ್ ಟಾಟಾ ಅವರು ಬಸ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿಲ್ಲ.

ಒಟ್ಟಾರೆಯಾಗಿ ಹೇಳುವುದದಾರೆ ರತನ್‌ ಟಾಟಾ ಅವರು ಭಾರತೀಯ ಸೇನೆಗೆ ಬುಲೆಟ್‌ ಮತ್ತು ಬಾಂಬ್‌ ಪ್ರೂಫ್‌ ಬಸ್‌ ನೀಡಿದ್ದಾರೆ ಎಂಬುದು ಸುಳ್ಳು.


ಸುದ್ದಿಯನ್ನು ಈ ಲಿಂಕ್‌ ಕ್ಲಿಕ್‌ ಮಾಡಿ : Fact Check | ಕೆನಡಾದಲ್ಲಿರುವ ಹನುಮಂತನ ವಿಗ್ರಹದ ಸುತ್ತಮುತ್ತ ಮಲದ ರಾಶಿ ಕಂಡು ಬಂದಿದೆ ಎಂಬ ವರದಿ ನಕಲಿ


ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ :Fact Check | ಕೆನಡಾದಲ್ಲಿರುವ ಹನುಮಂತನ ವಿಗ್ರಹದ ಸುತ್ತಮುತ್ತ ಮಲದ ರಾಶಿ ಕಂಡು ಬಂದಿದೆ ಎಂಬ ವರದಿ ನಕಲಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *