Fact Check | ವಿಠ್ಠಲ್, ವಿಠ್ಠಲ್’ ಮಂತ್ರ ಪಠಿಸುವುದರಿಂದ ಹೃದಯಾಘಾತವನ್ನು ತಡೆಯಲಾಗುವುದಿಲ್ಲ

“ಪ್ರತಿದಿನ 9-10 ನಿಮಿಷಗಳ ಕಾಲ ‘ವಿಠ್ಠಲ, ವಿಠ್ಠಲ’ ಮಂತ್ರವನ್ನು ಪಠಿಸುವುದರಿಂದ ಹೃದಯಾಘಾತವನ್ನು ತಡೆಯಬಹುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಗುಣವಾಗುತ್ತದೆ. ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.” ಇದನ್ನೇ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ‘ಏಷ್ಯನ್ ಜರ್ನಲ್ ಆಫ್ ಕಾಂಪ್ಲಿಮೆಂಟರಿ ಅಂಡ್ ಆಲ್ಟರ್ನೇಟಿವ್ ಮೆಡಿಸಿನ್‘ 30 ವ್ಯಕ್ತಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, 10 ದಿನಗಳಲ್ಲಿ ಪ್ರತಿದಿನ 9 ನಿಮಿಷಗಳ ಕಾಲ ‘ವಿಠ್ಠಲ್, ವಿಠ್ಠಲ್’ ಮಂತ್ರವನ್ನು ಪಠಿಸುವುದರಿಂದ ರಕ್ತದೊತ್ತಡ, ನಾಡಿ ದರ ಸೇರಿದಂತೆ ವಿವಿಧ ಆರೋಗ್ಯ ಸೂಚಕಗಳಲ್ಲಿ ಸುಧಾರಣೆ ಕಂಡುಬಂದಿದೆ. , ಮತ್ತು ಬೇಸ್‌ಲೈನ್ ಅಳತೆಗಳಿಗೆ ಹೋಲಿಸಿದರೆ ಹೃದಯ ಬಡಿತ ಚೆನ್ನಾಗಿದೆ. ಆದರೆ, ‘ವಿಠ್ಠಲ, ವಿಠ್ಠಲ’ ಮಂತ್ರವನ್ನು ಪಠಿಸುವುದರಿಂದ ಹೃದಯಾಘಾತವನ್ನು ತಡೆಯಬಹುದು ಎಂದು ಸಂಶೋಧನೆ ಹೇಳಿಲ್ಲ.

ಆದರೆ ಇನ್ನೂ ಕೆಲವೊಂದು ಅಭಿಪ್ರಾಯಗಳ ಪ್ರಕಾರದಲ್ಲಿ ವಿಠಲ ವಿಠಲ ಎಂಬ ನಾಮವನ್ನು ಪಠಿಸುವುದರಿಂದ ಮಾತ್ರ ರಕ್ತದೊತ್ತಡ ನಾಡಿದರ ವಿವಿಧ ಆರೋಗ್ಯದಲ್ಲಿನ ಸೂಚನೆಗಳಲ್ಲಿ ಸುಧಾರಣೆ ಕಂಡು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬದಲಾಗಿ ಇಂದಿನ ಒತ್ತಡದ ಜೀವನ ಶೈಲಿಯು ಮಾನಸಿಕವಾಗಿ ಆರೋಗ್ಯವಂತ ಮನುಷ್ಯನನ್ನು ಕುಗ್ಗಿಸುತ್ತಿವೆ. ಇದಕ್ಕೆ ಧ್ಯಾನ, ಸಂಗೀತ ಮಾನಸಿಕ ಆರೋಗ್ಯಕ್ಕೆ ಕೆಲವೊಂದು ವ್ಯಾಯಾಮಗಳನ್ನ ಮಾಡಿದರು ಕೂಡ ಈ ಎಲ್ಲಾ ಬದಲಾವಣೆಗಳನ್ನು ಕಾಣಬಹುದಾಗಿದೆ.

ವಿಠ್ಠಲ ವಿಠಲ ಎಂದು 9 ರಿಂದ 10 ನಿಮಿಷಗಳ ಕಾಲ ಕಣ್ಣು ಮುಚ್ಚಿ ಧ್ಯಾನದಂತೆ ನಾಮಪಟಿಸುವುದು ಕೂಡ ಧ್ಯಾನವೇ ಆಗಿದ್ದು ಇದು ಪವಾಡವೋ ಅಥವಾ ಚಮತ್ಕಾರವೋ ಅಲ್ಲ. ಬದಲಾಗಿ ಇದು ಕೂಡ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಒಂದು ವ್ಯಾಯಾಮದ ರೀತಿ ಆಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಹಾಗಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವಿಠಲ ವಿಠಲ ಎಂಬ ಮಂತ್ರವನ್ನು 10 ನಿಮಿಷಗಳ ಕಾಲ ಪಡಿಸುವುದರಿಂದ ಹೃದಯಘಾತವನ್ನು ತಡೆಯಬಹುದು ಎಂಬುದು ಸುಳ್ಳಿನಿಂದ ಕೂಡಿದೆ. ಹಾಗಾಗಿ ಹೃದಯ ಸಂಬಂಧಿ ಸಮಸ್ಯೆಯುಳ್ಳವರು ನುರಿತ ವೈದ್ಯರನ್ನು ಸಂಪರ್ಕಿಸುವುದು ಒಳಿತು.


ಇದನ್ನೂ ಓದಿ :Fact Check | ರತನ್‌ ಟಾಟಾ ಅವರು ಭಾರತೀಯ ಸೇನೆಗೆ ಬುಲೆಟ್‌ ಮತ್ತು ಬಾಂಬ್‌ ಪ್ರೂಫ್‌ ಬಸ್‌ ನೀಡಿಲ್ಲ


ವಿಡಿಯೋ ನೋಡಿ : Fact Check | ರತನ್‌ ಟಾಟಾ ಅವರು ಭಾರತೀಯ ಸೇನೆಗೆ ಬುಲೆಟ್‌ ಮತ್ತು ಬಾಂಬ್‌ ಪ್ರೂಫ್‌ ಬಸ್‌ ನೀಡಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *