Fact Check | ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಗೆ ಜಿಹಾದಿಗಳು ನೀರು ಎರಚಿದ್ದಾರೆಂಬುದು ಸುಳ್ಳು

“ನಂಜನಗೂಡಿನಲ್ಲಿ ಅಂಧಕಾಸುರ ಸಂಹಾರದ ದಿನಾಚರಣೆಯ ಸಂದರ್ಭದಲ್ಲಿ ಪಾರ್ವತಿ-ಶಿವನ ಉತ್ಸವ ಮೂರ್ತಿ ಮೆರವಣಿಗೆಯ ವೇಳೆ ಜಿಹಾದಿಗಳು ಮೂರ್ತಿಗೆ ನೀರು ಎರಚಿ ಅವಮಾನಿಸಿದರು. ಹಿಂದೂಗಳು ಎಚ್ಚೆತ್ತುಕೊಳ್ಳಬೇಕು” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸಾಕಷ್ಟು ಮಂದಿ ಇದೇ ಸುದ್ದಿಯನ್ನು ನಿಜವೆಂದು ಭಾವಿಸಿ ಹಂಚಿಕೊಳ್ಳುತ್ತಿದ್ದಾರೆ.

ಇದರಲ್ಲಿ ಮತ್ತೊಂದು ದುರಂತವೆಂದರೆ ವಿಧಾನಸಭೆಯ ಶಾಸಕರಾಗಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಕೂಡ ಜವಬ್ದಾರಿಯುತ ಸ್ಥಾನದಲ್ಲಿದ್ದು ಈ ಸುದ್ದಿಯ ನೈಜ ವಿಚಾರವನ್ನು ತಿಳಿಯದೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್‌

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಈ ಘಟನೆಯ ಕುರಿತು ಪರಿಶೀಲನೆ ನಡೆಸಲು ಪ್ರಾರಂಭ ಮಾಡಿತ್ತು. ಈ ವೇಳೆ ಅಂತರ್ಜಾಲದಲ್ಲಿ ಈ ಕುರಿತು “ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ ಆರೋಪ- ಐವರ ವಿರುದ್ಧ ದೂರು” ಎಂಬ ವರದಿಯೊಂದು ಪಬ್ಲಿಕ್‌ ಟಿವಿ ವೆಬ್‌ತಾಣದಲ್ಲಿ ಕಂಡು ಬಂದಿದೆ.

ಇನ್ನು ಇದೇ ರೀತಿಯ ಹಲವು ವರದಿಗಳು ಕೂಡ ಕಂಡು ಬಂದಿವೆ. ಆ ವರದಿಗಳಲ್ಲಿ ಅಂಧಕಾಸುರ ಸಂಹಾರ ದಿನದಂದು ರಾಕ್ಷಸನ ಫ್ಲೆಕ್ಸ್‌ ಹಾಕುತ್ತಿದ್ದರು. ಈ ಬಾರಿ ರಂಗೋಲಿ ಬಿಡಿಸಲಾಗಿತ್ತು. ಉತ್ಸವಮೂರ್ತಿ ಹೊತ್ತವರು ರಂಗೋಲಿಯನ್ನು ತುಳಿದು ರಾಕ್ಷಸನ ಸಂಹಾರ ಮಾಡಿದ್ದಾಗಿ ಘೋಷಿಸುವುದು ಉದ್ದೇಶವಾಗಿತ್ತು. ಆದರೆ ಈ ಬಾರಿ ಅಂಧಕಾಸುರನ ಬದಲು ಮಹಿಷಾಸುರನ ರಂಗೋಲಿ ಬಿಡಿಸಿದ್ದಕ್ಕೆ ದಲಿತ ಸಂಘರ್ಷ ಸಮಿತಿ ಸದಸ್ಯರು ವಿರೋಧಿಸಿದ್ದರು. ಆದರೆ ದೇವಸ್ಥಾನದ ಸಿಬ್ಬಂದಿ ಮೆರವಣಿಗೆ ಮುಂದುವರೆಸಿದ್ದರು. ಆಗ ಡಿಎಸ್‌ಎಸ್‌ ಸದಸ್ಯರು ನೀರು ಎರಚಿದ್ದರು.

ಎಂದು ತಿಳಿದು ಬಂದಿದೆ. ಆದರೆ ಈ ವಿಚಾರವನ್ನು ತಿಳಿಯದೆ ಕೆಲ ಕಿಡಿಗೇಡಿಗಳು ದೇವರ ಉತ್ಸವ ಮೂರ್ತಿಯ ಮೇಲೆ ಜಿಹಾದಿಗಳು ಎಂಜಲು ನೀರು ಎರಚಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಡಲು ಮುಂದಾಗಿದ್ದಾರೆ.


ಈ ಸುದ್ದಿಯನ್ನು ಓದಿ : Fact Check | ವಿಠ್ಠಲ್, ವಿಠ್ಠಲ್’ ಮಂತ್ರ ಪಠಿಸುವುದರಿಂದ ಹೃದಯಾಘಾತವನ್ನು ತಡೆಯಲಾಗುವುದಿಲ್ಲ


ವಿಡಿಯೋ ನೋಡಿ : Fact Check | ವಿಠ್ಠಲ್, ವಿಠ್ಠಲ್’ ಮಂತ್ರ ಪಠಿಸುವುದರಿಂದ ಹೃದಯಾಘಾತವನ್ನು ತಡೆಯಲಾಗುವುದಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *